ಜು. 21ರಿಂದ "ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನ"

ಬಂಟ್ವಾಳ, ಜೂ. 21: ದೇಶಾದ್ಯಂತ ಸಮಾನ ಶಿಕ್ಷಣ ಜಾರಿಗೊಳಿಸುವ ನಿಟ್ಟಿನಲ್ಲಿ ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನದ ಅಂಗವಾಗಿ ಭಾರತ ಯಾತ್ರೆ ಜುಲೈ 21ರಿಂದ ಬಂಟ್ವಾಳ ತಾಲೂಕಿನ ಪೊಳಲಿ ಕ್ಷೇತ್ರದಿಂದ ಆರಂಭಗೊಳ್ಳಲಿದ್ದು, ಅಭಿಯಾನಕ್ಕೆ ಚಾಲನೆ ನೀಡಲು ದೇಶದ ಹಿರಿಯ ಹೋರಾಟಗಾರ, ಪದ್ಮಶ್ರೀ ಡಾ.ಅಣ್ಣಾ ಹಜಾರೆಯವರನ್ನು ಆಹ್ವಾನಿಸಲಾಯಿತು.
ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನದ ರುವಾರಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಅಭಿಯಾನದ ಪ್ರಮುಖರಾದ ರಾಜೀವ್ ಕೇರಾ ದೆಹಲಿ, ರಾಜೇಶ್ ಕೇರಾ ಬೆಂಗಳೂರು, ಶ್ರವಣ್ ಚಾವ್ಲ ದೆಹಲಿ ಮೊದಲಾದವರಿದ್ದ ನಿಯೋಗ ಪುಣೆಯ ರಾಲೇಗಾನ್ ಸಿದ್ಧಿಯಲ್ಲಿ ಶುಕ್ರವಾರ ಅಣ್ಣಾ ಹಜಾರೆಯವರನ್ನು ಭೇಟಿ ಮಾಡಿ, ಆಹ್ವಾನಿಸಿದೆ ಎಂದು ಪ್ರಟಕನೆ ತಿಳಿಸಿದೆ.
Next Story





