ಪ್ರತಿಭೆಯ ಹಿಂದೆಯೇ ಪ್ರಗತಿಯಿದೆ- ಡಾ. ಸಚ್ಚಿದಾನಂದ
ಆಳ್ವಾಸ್ ಪ್ರಗತಿ-2019

ಮೂಡುಬಿದಿರೆ: ಪ್ರತಿಭೆಯೆಂಬುದು ಪತ್ರಿಯೊಬ್ಬರಲ್ಲೂ ಅಡಕವಾಗಿರುತ್ತದೆ. ಅದನ್ನು ನಾವು ಮೊದಲು ಕಂಡುಕೊಂಡು ಆ ಕ್ಷೇತ್ರದಲ್ಲಿ ಮುಂದುವರಿದಾಗ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯ, ಪ್ರತಿಭೆಯ ಹಿಂದೆಯೇ ಪ್ರಗತಿಯಿದೆ ಎಂದು ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ 11ನೇ ವರ್ಷದ ಆಳ್ವಾಸ್ ಪ್ರಗತಿ-2019 ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯೋಗದಲ್ಲಿ ಯಾವುದೇ ಕೀಳರಿಮೆ ಬೇಡ, ಪತ್ರಿಯೊಂದು ಕೆಲಸಕ್ಕೂ ಸಮಾಜದಲ್ಲಿ ಆದರದ್ದೆ ಆದ ಸ್ಥಾನಮಾನವಿದೆ. ಆದರಿಂದ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಮುನ್ನುಗ್ಗಬೇಕು ಎಂದು ತಿಳಿಸಿದರು. ಉದ್ಯೋಗವು ಪುರುಷ ಲಕ್ಷಣ ಎಂದು ನುಡಿಗಟ್ಟಿತ್ತು ಆದರೆ ಇಂದು ಪುರುಷರಿಗೆ ಸಮಾನವಾಗಿ ಮಹಿಳೆಯರು ಕೂಡ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಇಂದು ಸಮಾಜದಲ್ಲಿ ಮೂರು ರೀತಿ ವರ್ಗವನ್ನು ಕಾಣಬಹುದು ಕೆಲವರು ಅವಕಾಶಕ್ಕಾಗಿ ಕಾಯುವವರಾದರೆ, ಇನ್ನೂ ಕೆಲವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ, ಆದರೆ ಇನ್ನೂ ಕೆಲವರು ಅವಕಾಶವನ್ನೇ ಸೃಷ್ಠಿಸುತ್ತಾರೆ ಅಂತವರಲ್ಲಿ ಡಾ.ಎಂ.ಮೋಹನ್ ಆಳ್ವ ಕೂಡ ಒಬ್ಬರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಇತ್ತಿಚೀನ ದಿನಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಬೇರೆ ಬೇರೆ ಕ್ಷೇತ್ರದಲ್ಲಿ ಶಿಕ್ಷಣವನ್ನು ಕೂಡುವಂತಹ ಕಾರ್ಯಗಳನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಆದರಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಉದ್ಯೋಗದತ್ತ ಗಮನಹರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಸಭಾ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ್ ಪ್ರಸ್ತಾವಿಕ ನುಡಿಗಳಾನ್ನಾಡಿ ಸ್ವಾಗತಿಸಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಅಜಿತ್ ಹೆಬ್ಬಾರ್ ವಂದಿಸಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
“ಉದ್ಯೋಗಾಕಾಂಕ್ಷಿಗಳಿಗೆ ಆಳ್ವಾಸ್ ಪ್ರಗತಿ ಉತ್ತಮ ವೇದಿಕೆಯಾಗಿದ್ದು. ಹಲವಾರು ಕಂಪನಿಗಳು ಒಂದೇ ಕಡೆ ಸಿಗುವುದರಿಂದ ತಮ್ಮ ಪತ್ರಿಭೆಯಿಂದ ಉತ್ತಮ ಅವಕಾಶಗಳು ದೊರೆಯುತ್ತದೆ” ಎಂದು ಥಾಮಸ್ ರಾಯ್‍ಟರ್ಸ್ ಕಂಪನಿಗೆ ವಾರ್ಷಿಕ 5.5 ಲಕ್ಷ ಪ್ಯಾಕೇಜ್ ಗೆ ಆಯ್ಕೆಯಾದ ವಾಮಾಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಬಿ.ಇ ಪಧವಿದರೆ ದೀಕ್ಷಿತಾ ಹೇಳಿದರು. ಜೊತೆಗೆ ಇದೇ ಕಂಪನಿಗೆ ವಾರ್ಷಿಕ 5.5 ಲಕ್ಷ ಪ್ಯಾಕೇಜ್‍ಗೆ ಉಜಿರೆ ಎಸ್‍ಡಿಎಮ್ ಇಂಜಿನಿಯರಿಂಗ್ ಕಾಲೇಜಿನ ಬಿ.ಇ ಪಧವಿದರೆ ದೀಕ್ಷಾ ಶೆಟ್ಟಿ ಮತ್ತು ಎಸ್.ಎಮ್.ವಿ.ಐ.ಟಿ.ಎಮ್. ಕಾಲೇಜಿನ ನಿಶಾ, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಲಾರ್ಸನ್ ಡಿ’ಸೋಜ ಆಯ್ಕೆಯಾಗಿದ್ದಾರೆ.







