ಐರ್ಲ್ಯಾಂಡ್: ರೈಲಿನಲ್ಲಿ ಭಾರತೀಯ ಕುಟುಂಬಕ್ಕೆ ನಿಂದನೆ
ಲಂಡನ್, ಜೂ. 21: ಐರ್ಲ್ಯಾಂಡ್ಗೆ ಪ್ರವಾಸ ಹೋಗಿದ್ದ ಭಾರತೀಯ ಕುಟುಂಬವೊಂದರ ಸದಸ್ಯರನ್ನು ರೈಲು ಪ್ರಯಾಣದ ವೇಳೆ ಒಂದು ಗಂಟೆ ಕಾಲ ವ್ಯಕ್ತಿಯೋರ್ವ ಜನಾಂಗೀಯವಾಗಿ ನಿಂದಿಸಿದನು ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಪ್ರಸೂನ್ ಭಟ್ಟಾಚಾರ್ಜಿ ಕುಟುಂಬ ಸದಸ್ಯರೊಂದಿಗೆ ಮೂರು ದಿನಗಳ ಕಾಲ ಐರ್ಲ್ಯಾಂಡ್ ಪ್ರವಾಸ ಕೈಗೊಂಡಿದ್ದರು. ಅವರು ಬೆಲ್ಫಾಸ್ಟ್ನಿಂದ ಡಬ್ಲಿನ್ಗೆ ರೈಲಿನಲ್ಲಿ ಹೋಗುತ್ತಿದ್ದಾಗ ಬಿಯರ್ ಕುಡಿಯುತ್ತಿದ್ದ ವ್ಯಕ್ತಿಯೊಬ್ಬ, ಅವರ ಉಚ್ಚಾರ, ಚರ್ಮದ ಬಣ್ಣ ಮತ್ತು ರಾಷ್ಟ್ರೀಯತೆಗಳನ್ನು ಹೀಯಾಳಿಸಿದನು ಎಂದು ‘ಐರಿಶ್ ಟೈಮ್ಸ್’ ವರದಿ ಮಾಡಿದೆ.
‘‘ಆ ವ್ಯಕ್ತಿಯು ನಮ್ಮ ಪಕ್ಕದಲ್ಲೇ ಕುಳಿತುಕೊಂಡು ಡಬ್ಲಿನ್ವರೆಗೆ ನಮ್ಮನ್ನು ಹೀಯಾಳಿಸಿದನು’’ ಎಂದು ಭಟ್ಟಾಚಾರ್ಜಿ ಹೇಳಿದರು.
Next Story