ಚೌಟರದು ತುಳುಬದುಕಿನ ಮಾದರಿ ವ್ಯಕ್ತಿತ್ವ: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು, ಜೂ.22: ದರ್ಬೆ ಕೃಷ್ಣಾನಂದ ಚೌಟರು ತುಳುಭಾಷೆಯ ಸತ್ವಯುತ ಬರಹಗಾರ. ಕೃಷಿ, ಉದ್ಯಮ, ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ಸಂಘಟನೆ-ಸಮಾಜಸೇವೆ ಹೀಗೆ ಅನನ್ಯ ಕ್ಷೇತ್ರದಲ್ಲಿ ಮಾಗಿದ ಹಿರಿಯರು. ಅವರದು ತುಳು ಬದುಕಿನ ಮಾದರಿ ವ್ಯಕ್ತಿತ್ವ’ ಎಂದು ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ತುಳುವರ್ಲ್ಡ್ (ರಿ) ಕುಡ್ಲ ವತಿಯಿಂದ ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಇತ್ತೀಚೆಗ ಜರುಗಿದ ಡಾ.ಡಿ.ಕೆ.ಚೌಟ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ತುಳು ಅಕಾಡಮಿಯ ಸದಸ್ಯ ಎ.ಶಿವಾನಂದ ಕರ್ಕೇರ, ಕಲಾವಿದ ತೋನ್ಸೆ ಪುಷ್ಕಳ ಕುಮಾರ್, ಎಂ. ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಜೀವಿಯಸ್ ಉಳ್ಳಾಲ್, ಹರ್ಷ ರೈ ಪುತ್ರಕಳ, ಭೂಷಣ್ ಕುಲಾಲ್, ಪ್ರೇಮ್, ಅನಂತಕುಮಾರ್ ಬರ್ಲ, ಶಮೀನಾ ಆಳ್ವ ಮುಲ್ಕಿ, ಆಶಾ ಹೆಗ್ಡೆ, ವೀಣಾ ಜೆ.ಶೆಟ್ಟಿ ಉಪಸ್ಥಿತರಿದ್ದರು.
ತುಳುವರ್ಲ್ಡ್ ಸಂಚಾಲಕ ರಾಜೇಶ್ ಆಳ್ವ ಬದಿಯಡ್ಕ ಸ್ವಾಗತಿಸಿದರು. ಕಡಬ ದಿನೇಶ್ ರೈ ವಂದಿಸಿದರು.
Next Story





