Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅಂಗಡಿ

ಅಂಗಡಿ

ಕಥಾಸಂಗಮ

ವಿಶ್ವನಾಥ ಎನ್. ನೇರಳಕಟ್ಟೆವಿಶ್ವನಾಥ ಎನ್. ನೇರಳಕಟ್ಟೆ22 Jun 2019 6:22 PM IST
share
ಅಂಗಡಿ

ಕಂಠಪೂರ್ತಿ ಕುಡಿದುಕೊಂಡು ಬಂದ ಗೋಪಾಲ ಮನೆಯ ಬಾಗಿಲನ್ನು ಜೋರಾಗಿಯೇ ಬಡಿದ, ಸರಕಾರಿ ಬಸ್ಸಿಗೆ ದಬ ದಬ ಬಡಿಯುತ್ತಾರಲ್ಲಾ ಕೆಲವರು, ಹಾಗೆ. ಬಾಗಿಲು ತೆರೆದದ್ದು ಆತನ ಹೆಂಡತಿ. ಹೆದರಿಕೊಂಡಿದ್ದಳು. ಮಾತನಾಡದೆ ಒಳಹೋದಳು. ‘‘ಏನೇ, ಇಷ್ಟು ಹೊತ್ತು? ಆಯಾಸವಾಗಿ ಮನೆಗೆ ಬಂದಿರ್ತಾನೆ ಗಂಡ. ಬೇಗ ಬಾಗಿಲು ತೆಗಿಬೇಕು ಎಂಬ ಪ್ರಜ್ಞೆಯೇ ಇಲ್ವಾ?’’ ಕೇಳಿಸಿಕೊಳ್ಳಲಾರದ ಬೈಗುಳದ ಶಬ್ದವೂ ಆತನ ಮಾತಿನ ಕೊನೆಯಲ್ಲಿ ಸೇರಿಕೊಂಡಿತು. ‘‘ಆಯಾಸವಾಗಲಿಕ್ಕೆ ನೀವೇನು ಬೆಳಗ್ಗೆಯಿಂದ ರಾತ್ರಿವರೆಗೂ ದುಡಿದು ಮನೆಗೆ ಬಂದಿದ್ದೀರಾ?’’ ಅವಳು ಗೊಣಗಿಕೊಂಡದ್ದು ಮಾತ್ರ. ಅದ್ಯಾವ ಮಾಯೆಯಲ್ಲಿ ಅವನ ಕಿವಿ ಹೊಕ್ಕಿತೋ ಗೊತ್ತಿಲ್ಲ, ತಾರಸಿ ಕಿತ್ತುಹೋಗುವಂತೆ ಬೊಬ್ಬಿಡಲು ಶುರುಮಾಡಿದ. ನಿದ್ರೆಯಲ್ಲಿದ್ದ ಇಬ್ಬರು ಮಕ್ಕಳು ಎಚ್ಚೆತ್ತು ನೋಡಲಾರಂಭಿಸಿದವು. ಅಷ್ಟರವರೆಗೂ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದ ಪಕ್ಕದ ಮನೆಯ ಗಂಡ- ಹೆಂಡತಿ ಆದಷ್ಟು ಬೇಗ ಮನೆ ಸೇರಿಕೊಂಡಿದ್ದರು. ಉರಿಯುತ್ತಿದ್ದ ದೀಪಗಳೂ ಆರಿದವು. ನಮಗ್ಯಾಕೆ ಬೇಕು ಗಂಡ- ಹೆಂಡಿರ ಜಗಳದಲ್ಲಿ ತಲೆ ತೂರಿಸುವ ಕರ್ಮ? ಎಂಬ ಮನಃಸ್ಥಿತಿ ಅವರದ್ದು. ಅವರದೇನೂ ತಪ್ಪಿಲ್ಲ. ಒಂದುವಾರದ ಹಿಂದೆ ನಡೆದ ಅನುಭವ ಅವರಿಗೆ ಪಾಠ ಕಲಿಸಿದೆ. ಮಕ್ಕಳ ಮುಖ ನೋಡಿಯಾದರೂ ಕುಡಿಯಬೇಡ ಎಂಬ ಒಂದೇ ಒಂದು ಮಾತು ಹೇಳಿದ್ದರು ಅಷ್ಟ್ಟೆ, ಗೋಪಾಲನಿಗೆ. ಶುರುವಾಯಿತು ನೋಡಿ ಸಹಸ್ರನಾಮಾರ್ಚನೆ. ಯಾಕಾದರೂ ಬುದ್ಧಿ ಹೇಳಿದೆವೋ ಈ ಬುದ್ಧಿಗೆಟ್ಟವನಿಗೆ ಎಂದು ಅನಿಸಿಬಿಟ್ಟಿತ್ತು ಅವರಿಬ್ಬರಿಗೂ.

ಕಾಲ ಮನುಷ್ಯನನ್ನು ಎಷ್ಟರಮಟ್ಟಿಗೆ ಬದಲಾಯಿಸಬಲ್ಲದು ಎಂಬುವುದಕ್ಕೆ ಈ ಗೋಪಾಲನೇ ಸಾಕ್ಷಿ. ಮೂರು ತಿಂಗಳುಗಳ ಹಿಂದೆ ಇವನನ್ನು ನೋಡಿದ್ದವರು ಈಗೇನಾದರೂ ಮತ್ತೆ ನೋಡಿದರೆ ಮೈ ಚಿವುಟಿಕೊಳ್ಳುತ್ತಾರೆ. ಇದು ಕನಸೇ ಇರಬೇಕು ಅಂದುಕೊಳ್ಳುತ್ತಾರೆ. ಕುಡಿಯಬೇಡಿ. ಒಳ್ಳೆಯದಲ್ಲ. ಹಣವೂ ಹಾಳು, ಆರೋಗ್ಯವೂ ಕೆಡುತ್ತದೆ. ನಿಮ್ಮನ್ನೇ ನಂಬಿಕೊಂಡಿರುವ ಮನೆಯವರ ಗತಿಯೇನು? ಎಂದು ಗೆಳೆಯರೆದುರು ವಾರಕ್ಕೆರಡು ಬಾರಿ ಭಾಷಣ ಬಿಗಿಯುತ್ತಿದ್ದ ಗೋಪಾಲ ಇವನೇನಾ? ಎಂದು ಅಚ್ಚರಿಗೆ ಒಳಗಾಗುತ್ತಾರೆ.

*****

ಹೌದು! ಗೋಪಾಲ ಈಗ್ಗೆ ಮೂರು ತಿಂಗಳ ಹಿಂದೆ ಹಾಗೆಯೇ ಇದ್ದ. ಅವನ ಸಾವಿತ್ರಮ್ಮ ಸ್ಟೋರ್ ಹೆಸರು ಕೇಳದವರೇ ಇಲ್ಲ ಆ ಊರಿನಲ್ಲಿ. ತಾಯಿಯ ಹೆಸರಿನಲ್ಲಿ ಆತ ಶುರುಮಾಡಿದ ಅಂಗಡಿ ಅದು. ಬ್ಯಾನರ್ ಕಟ್ಟಲು ಹುರಿಹಗ್ಗ ಹುಡುಕುವವರಿಂದ ಹಿಡಿದು ಉರಿಮೂತ್ರಕ್ಕೆ ನೆಗ್ಗಿನಮುಳ್ಳಿನ ಕಷಾಯ ತಯಾರಿಸಿಕೊಡುವ ನಾಟಿ ಪಂಡಿತರವರೆಗೆ, ಎಲ್ಲರಿಗೂ ಇವನ ಅಂಗಡಿಯೇ ಆಗಬೇಕು. ಏನೇ ಕೇಳಿದರೂ ಸಿಗುತ್ತದೆ ಗೋಪಾಲಣ್ಣನ ಅಂಗಡಿಯಲ್ಲಿ ಅಂತಲೇ ವರ್ಲ್ಡ್‌ಫೇಮಸ್ ಆ ಊರಿನ ತುಂಬಾ! ವ್ಯಾಪಾರಿಗಿರಬೇಕಾದ ಮಾತಿನ ಕೌಶಲ್ಯ ಗೋಪಾಲನಿಗೆ ಸಿದ್ಧಿಸಿತ್ತು. ಸದಾ ಕಪ್ಪು ಪ್ಯಾಂಟು, ಬಿಳಿ ಶರ್ಟ್ ಧರಿಸುವ ಕಾರಣಕ್ಕೆ ಬ್ಲಾಕ್ ಆ್ಯಂಡ್ ವೈಟ್ ಮಾಸ್ಟ್ರು ಅಂತ ಊರವರ ಬಾಯಿಯಲ್ಲಿ ಕರೆಸಿಕೊಳ್ಳುತ್ತಿದ್ದ ಶ್ರೀನಿವಾಸ ರಾಯರಲ್ಲಿ ರಾಜ್ಯ- ರಾಷ್ಟ್ರ ರಾಜಕಾರಣದ ಕುರಿತಂತೆ ಘನಗಂಭೀರ ಚರ್ಚೆ ನಡೆಸುತ್ತಿದ್ದ. ಮರುಕ್ಷಣವೇ ಪುಟ್ಟಮ್ಮಜ್ಜಿಯಲ್ಲಿ ಅವಳ ಮೊಮ್ಮಗಳ ಮದುವೆ ವಿಷಯ ಪ್ರಸ್ತಾಪಿಸಿ ತಮಾಷೆಯಾಡುತ್ತಿದ್ದ. ಹಾಗೆ ನೋಡಿದರೆ ಹೆಚ್ಚಿನವರು ಸರಕು ಕೊಳ್ಳುವ ಉದ್ದೇಶವೇ ಇಲ್ಲದಿದ್ದರೂ ಅಂಗಡಿಗೆ ಬರುತ್ತಿದ್ದುದುಂಟು, ಗೋಪಾಲನಲ್ಲಿ ಮಾತನಾಡಬೇಕೆಂಬ ಕಾರಣಕ್ಕೆ.

ಹಾಗಾದರೆ ಗೋಪಾಲ ಅಂಗಡಿಯಿಂದ ಭಾರೀ ಲಾಭ ಮಾಡಿಕೊಂಡಿರಬೇಕು ಎಂದು ಅಂದುಕೊಂಡರೆ ದೊಡ್ಡ ತಪ್ಪು. ಅತ್ತ ಪಟ್ಟಣವೂ ಅಲ್ಲದ, ಇತ್ತ ಹಳ್ಳಿಯೆಂದೂ ಕರೆಸಿಕೊಳ್ಳದ ಊರದು. ಅಲ್ಲಿನ ವ್ಯಾಪಾರವೇ ಹಾಗೆ. ತುರಿಸಲೂ ಪುರುಸೊತ್ತು ಮಾಡಿಕೊಳ್ಳದೆ ವ್ಯಾಪಾರ ಮಾಡಬೇಕು. ರಾತ್ರಿ ಅಂಗಡಿಗೆ ಬೀಗ ಜಡಿದು ಮನೆ ಕಡೆಗೆ ಹೆಜ್ಜೆ ಹಾಕುವಾಗ ತುಂಬಿರುತ್ತಿದ್ದದ್ದು ಅರ್ಧ ಜೇಬು ಮಾತ್ರ. ಎರಡು ರೂಪಾಯಿಯ ನಶ್ಯ ಕೊಳ್ಳುವುದಕ್ಕೆಂದು ಬಂದವರು ಅರ್ಧಗಂಟೆ ಕಳೆಯದೆ ನಿಂತಲ್ಲಿಂದ ಕದಲುತ್ತಿರಲಿಲ್ಲ. ನೋಡಿದರೆ ಯಾವಾಗಲೂ ರಶ್ಶೋ ರಶ್ಶು. ಆದರೆ ವ್ಯಾಪಾರ ಎರಡು ರೂಪಾಯಿಯದ್ದು ಮಾತ್ರ. ಸಾಲದ ಗಿರಾಕಿಗಳಿಗೂ ಕೊರತೆ ಇರಲಿಲ್ಲ. ಆದರೆ ತಕ್ಕಮಟ್ಟಿಗೆ ಚೆನ್ನಾಗಿಯೇ ವ್ಯಾಪಾರ ಸಾಗುತ್ತಿತ್ತು. ಆರಕ್ಕೇರದೆ, ಮೂರಕ್ಕಿಳಿಯದೆ ಬದುಕು ಸಾಗಿಸುವುದಕ್ಕೇನೂ ತೊಂದರೆ ಇರಲಿಲ್ಲ.

ಅದೊಂದು ದಿನ ಗೋಪಾಲನ ಅಂಗಡಿಯ ಮುಂದೆ ಸರಕಾರಿ ವಾಹನವೊಂದು ನಿಂತಿತ್ತು. ಅದರಿಂದ ಇಳಿದ ನಾಲ್ಕು ಜನ ರಸ್ತೆಯನ್ನು ಅಳೆಯುವುದಕ್ಕೆ ಆರಂಭಿಸಿದ್ದರು. ಗೋಪಾಲನೂ ತುಂಬಾ ಹೊತ್ತು ನೋಡುತ್ತಾ ನಿಂತ. ಏನೊಂದೂ ಅರ್ಥವಾಗಲಿಲ್ಲ. ಅವರಲ್ಲೇ ಕೇಳಿದ.

‘‘ಇದು ಸರಕಾರದ ಹೊಸ ಯೋಜನೆ. ಕೆಲವು ಪ್ರದೇಶಗಳನ್ನು ಸ್ಪೆಶಲ್ ಇಕಾನಮಿಕ್ ರೆನ್ ಆಗಿ ಮಾಡ್ತಿದ್ದೇವೆ. ಇಲ್ಲಿ ಹೊಸ ಕಂಪೆನಿಗಳು ಶುರು ಆಗ್ತವೆ. ನಿಮ್ಮ ಊರು ಡೆವಲಪ್‌ಮೆಂಟ್ ಆಗ್ತದೆ’’ ಇದ್ದ ನಾಲ್ವರಲ್ಲಿ ದಪ್ಪಗಿದ್ದವನು ನುಡಿದ.

ಗೋಪಾಲನ ತಲೆ ಉಳಿಸಿಕೊಂಡದ್ದು ಒಂದೇ ಮಾತು- ಇಲ್ಲಿ ಹೊಸ ಕಂಪೆನಿಗಳು ಶುರು ಆಗ್ತವೆ. ಅವನ ಬುದ್ಧಿ ನೂರು ಕಿ.ಮೀ. ವೇಗದಲ್ಲಿ ಓಡಿತು. ಇವರ ಮಾತು ಕೇಳಿದರೆ ಕಂಪೆನಿ ದೊಡ್ಡದೇ ಆಗಿರಬೇಕು. ಹಾಗಿದ್ದರೆ ಕಂಪೆನಿಗೆ ಕಡಿಮೆ ಅಂದ್ರೂ ದಿನಕ್ಕೆ ನೂರು ಜನ ಬರುವುದು ಖಂಡಿತ. ಹೇಗೂ ನಮ್ಮ ಊರಲ್ಲಿ ಒಳ್ಳೆಯ ಹೋಟೆಲ್ ಇಲ್ಲ. ನನ್ನ ಅಂಗಡಿಯ ಪಕ್ಕದಲ್ಲೇ ಜಾಗ ಇದೆ. ಅಲ್ಲಿ ಒಂದು ಒಳ್ಳೆಯ ಹೋಟೆಲ್ ಇಟ್ಟರೆ ಹೇಗೆ? ಹೇಗೂ ಕಂಪೆನಿಯವರು. ಸಾಲದ ಗಿರಾಕಿಗಳು ಒಬ್ಬರೂ ಇರಲಿಕ್ಕಿಲ್ಲ. ಒಳ್ಳೆ ವ್ಯಾಪಾರವಂತೂ ಗ್ಯಾರಂಟಿ.. ನಿಂತಲ್ಲಿಂದಲೇ ದೇವರಿಗೆ ಕೈ ಮುಗಿದಿದ್ದ.

‘‘ನಿಮ್ಮ ಅಂಗಡಿಯ ಜಾಗ ಹೋಗ್ತದೆ’’ ದಪ್ಪಗಿದ್ದವನು ಮುಂದುವರಿಸಿದ ಮಾತಿನಿಂದ ಗೋಪಾಲನ ಎದೆ ಧಸಕ್ಕೆಂದಿತು.

‘‘ಅಂಗಡಿ ಹೋದರೆ ನಮ್ಮ ಗತಿ?’’ ಪ್ರಶ್ನಿಸುವಾಗ ಗೋಪಾಲನ ಮುಖ ಸಪ್ಪಗಾಗಿತ್ತು.

‘‘ನಿಮ್ಗೆಲ್ಲಾ ಕಂಪೆನಿಯಿಂದ ಹಣ ಸಿಗ್ತದೆ’’ ಹೇಳಿದವನು ಮತ್ತೆ ಅಳೆಯುವುದರಲ್ಲಿ ತಲ್ಲೀನನಾದ. ಕನಸಿನ ಲೋಕದಲ್ಲಿಯೇ ಸುಖ ಕಾಣುತ್ತಿದ್ದವನ ಮುಖಕ್ಕೆ ತಣ್ಣೀರು ಎರಚಿದಂತಾಗಿತ್ತು ಗೋಪಾಲನ ಪರಿಸ್ಥಿತಿ. ಪರಿಹಾರ ವೇನೆಂದು ಲೆಕ್ಕ ಹಾಕಿದ. ಕರುಣಾಕರ ಗೌಡರು. ಗ್ರಾಮ ಪಂಚಾಯತ್ ಪ್ರೆಸಿಡೆಂಟ್. ಹೌದು. ತಕ್ಷಣಕ್ಕೆ ಅವನಿಗೆ ಹೊಳೆದದ್ದಿದು. ಆ ಸಂಜೆ ಆರರ ಮುಳ್ಳು ಹೊಡೆಯುವುದಕ್ಕೂ ಮೊದಲೇ ಅಂಗಡಿಗೆ ಬೀಗ ಹಾಕಿದವನು ಪಂಚಾಯತ್ ಪ್ರೆಸಿಡೆಂಟರ ಮನೆಯ ದಾರಿ ತುಳಿದ. ಅದೃಷ್ಟ. ಇಡೀ ಲೋಕವೇ ತನ್ನಿಂದ ನಡೆಯುತ್ತಿದೆ ಎಂಬಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಊರು ಸುತ್ತುವ ಕರುಣಾಕರ ಗೌಡರು ಮನೆಯಲ್ಲೇ ಇದ್ದರು. ‘‘ಏನೋ ಗೋಪಾಲ, ಇಲ್ಲಿವರೆಗೂ ಬಂದಿದ್ದೀಯ. ಏನು ವಿಷಯ?’’ ವರಾಂಡದಲ್ಲಿದ್ದ ಗೌಡರು ಪ್ರಶ್ನಿಸಿದ್ದರು.

‘‘ಅದೇನೋ ಕಂಪೆನಿ ಶುರುವಾಗುತ್ತದಂತಲ್ಲಾ ಗೌಡ್ರೇ. ನನ್ನ ಅಂಗಡಿ ಜಾಗವೂ ಹೋಗುತ್ತದಂತೆ. ನನ್ನ ಅಂಗಡಿ ಹೋದರೆ ನಾನು, ನನ್ನ ಸಂಸಾರ ಬೀದಿಗೆ ಬೀಳುತ್ತದೆ. ನೀವೇ ಹೇಗಾದ್ರೂ ಮಾಡಿ ನನ್ನ ಅಂಗಡಿ ಉಳಿಸಿಕೊಡಬೇಕು’’ ಚಿಂತೆಯಲ್ಲಿದ್ದುದರಿಂದಲೋ ಏನೋ, ಒಂದೇ ಉಸಿರಿಗೆ ಎಲ್ಲಾ ವಿಷಯವನ್ನೂ ಹೇಳಿ ಮುಗಿಸಿದ್ದ ಗೋಪಾಲ.

ಬಾಯಿಯಲ್ಲಿದ್ದ ತಾಂಬೂಲವನ್ನು ಅಂಗಳದಾಚೆ ಉಗುಳಿಬಂದ ಗೌಡರು ನಿಧಾನಕ್ಕೆ ಹೇಳಲಾರಂಭಿಸಿದರು ‘‘ಹೌದು ಗೋಪಾಲ, ಅದು ಸ್ಪೆಶಲ್ ಇಕಾನಮಿಕ್ ರೆನ್ ಅಂತ. ಸರಕಾರದ ಯೋಜನೆ. ಆರ್ಥಿಕವಾಗಿ ದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶದ್ದು. ಸುಮಾರು 80 ಎಕರೆ ಜಾಗವನ್ನು ಬಹುರಾಷ್ಟ್ರೀಯ ಕಂಪೆನಿಯೊಂದು ಕೊಂಡುಕೊಳ್ಳುತ್ತದೆ. ಅದರಲ್ಲಿ ನಿನ್ನ ಅಂಗಡಿ ಇರುವ ಜಾಗವೂ ಸೇರಿದೆ. ನಿನ್ನ ಅಂಗಡಿ ಹೋದರೂ ನಿನಗೆ ನಷ್ಟ ಏನಿಲ್ಲ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯನ್ನು ನಿನ್ನ ಅಂಗಡಿ ಇರುವ ಜಾಗಕ್ಕೆ ಆ ಕಂಪೆನಿ ಕೊಡುತ್ತದೆ. ಇದು ನಿಜವಾಗಿ ನಿನಗೆ ಲಾಭವೇ’’.

*****

ಮನೆಗೆ ಬಂದವನು ಹೆಂಡತಿಯಲ್ಲಿ ವಿಚಾರ ತಿಳಿಸಿದ. ಅವಳೂ ಸಂತಸದಲ್ಲಿ ಸಲಹೆಯೊಂದನ್ನು ಕೊಟ್ಟಿದ್ದಳು ‘‘ಹೇಗೂ ಹೊಸ ಜಾಗದಲ್ಲಿ ಅಂಗಡಿ ಆರಂಭಿಸಬೇಕು. 80 ಎಕರೆ ಜಾಗ ಕಂಪೆನಿಗೇ ಹೋಗುವುದಾದರೆ ಇದೇ ಊರಲ್ಲಿ ಅಂಗಡಿ ನಿರ್ಮಿಸಲು ಸೂಕ್ತ ಸ್ಥಳ ಸಿಗುವ ಹಾಗಿಲ್ಲ. ಆದ್ದರಿಂದ ಪೇಟೆಯಲ್ಲಿ ಆರಂಭಿಸುವುದೇ ಒಳ್ಳೆಯದು. ಸಾಲದ ಗಿರಾಕಿಗಳ ತೊಂದರೆಯೂ ಇರುವುದಿಲ್ಲ. ವ್ಯಾಪಾರವೂ ಜೋರಾಗಿ ನಡೆಯುತ್ತದೆ’’.

ಹೆಂಡತಿಯ ಸಲಹೆ ಗೋಪಾಲನಿಗೆ ಇಷ್ಟವಾಗಿತ್ತು. ಅದಾಗಿ ಒಂದೇ ವಾರದಲ್ಲಿ ಪೇಟೆಯಲ್ಲಿ ಆತನ ಹೊಸ ಅಂಗಡಿ ಉದ್ಘಾಟನೆಯಾಗಿತ್ತು. ಅಂದು ಗೋಪಾಲ ನಿರಾಳನಾಗಿದ್ದ. ಸಿಕ್ಕಿದ್ದ ಅಧಿಕ ಹಣ, ಹೊಸತೊಂದು ಜಾಗದಲ್ಲಿ ಹೊಸ ಅಂಗಡಿ ಆರಂಭಿಸಿದ ಹುಮ್ಮಸ್ಸು, ತನ್ನ ಹೆಂಡತಿ- ಮಕ್ಕಳ ನಗು ಗೋಪಾಲನ ಕಣ್ಣಲ್ಲೀಗ ಕೋಟಿ ಕನಸುಗಳು ಗೂಡುಕಟ್ಟಲಾರಂಭಿಸಿದ್ದವು.

ಆದರೆ ಮೂರೇ ತಿಂಗಳುಗಳಲ್ಲಿ ಆತನ ಕನಸು ನುಚ್ಚುನೂರಾಗಿತ್ತು. ಆತನ ಊರಿನಲ್ಲಿ ಆತನಿಗೆ ಎಲ್ಲರೂ ಪರಿಚಯದವರೇ. ಎಲ್ಲರೂ ಆತನ ಅಂಗಡಿಗೆ ಬರುವವರೇ. ಎಲ್ಲರೂ ಆತನ ಮಾತುಗಳನ್ನು ಇಷ್ಟಪಡುವವರೇ. ಆದರೆ ಈ ಗಡಿಬಿಡಿಯ ಪೇಟೆಯಲ್ಲಿ ಆತನ ಮಾತುಗಳು ಯಾರಿಗೂ ಬೇಕಾಗಿರಲಿಲ್ಲ, ಕೇಳುತ್ತಾ ನಿಲ್ಲುವ ಪುರುಸೊತ್ತೂ ಇರಲಿಲ್ಲ. ಆತ ಬಲೇ ಮಾತಾಡುತ್ತಾನೆ. ಮಾತಾಡಿ ಮರುಳು ಮಾಡುವ ಮೋಸಗಾರನೇ ಇರಬೇಕು ಎಂದುಕೊಂಡೇ ಎಷ್ಟೋ ಜನ ಅಂಗಡಿಗೆ ಬಾರದಿರುವವರೂ ಇದ್ದರು. ಊರಿನಲ್ಲಿ ಇದ್ದಾಗ ಹೊಟ್ಟೆಪಾಡಿನ ಸಂಪಾದನೆಗೇನೂ ಕೊರತೆಯಾಗಿರಲಿಲ್ಲ. ಆದರೆ ಈ ಪೇಟೆಯಲ್ಲಿ ಅಂಗಡಿ ಇಟ್ಟಮೇಲೆ ದಿನದ ಖರ್ಚನ್ನು ನಿಭಾಯಿಸುವುದೂ ಕಷ್ಟವಾಗತೊಡಗಿತು ಗೋಪಾಲನಿಗೆ.

ಎಪ್ರಿಲ್ ಬಂದಿದೆ. ಇನ್ನೊಂದೆರಡು ತಿಂಗಳುಗಳೊಳಗೆ ಮಕ್ಕಳ ಶಾಲೆಯ ಫೀಸ್ ಕಟ್ಟಿ ಆಗಬೇಕು. ಮನೆಯ ದಿನಸಿ ಖರೀದಿ, ವಿದ್ಯುತ್ ಬಿಲ್, ಮಾಡಿದ ಸಾಲ......ಅಂಗಡಿಯಲ್ಲಿ ಕುಳಿತಿದ್ದ ಗೋಪಾಲನ ತಲೆ ಕೊರೆಯಲಾರಂಭಿಸಿದ್ದವು. ಕಂಪೆನಿ ದುಪ್ಪಟ್ಟು ದುಡ್ಡು ಕೊಟ್ಟಿದೆ ನಿಜ. ಹಳೆಯ ಗ್ರಾಹಕರನ್ನು ಕೊಡುತ್ತದಾ? ಸ್ವಗತವೆಂಬಂತೆ ಪ್ರಶ್ನಿಸಿಕೊಂಡ ಗೋಪಾಲ. ಸಂಜೆಯವರೆಗೂ ಖಾಲಿ ಕುಳಿತ ಗೋಪಾಲನಿಗೆ ತಲೆಗೆ ಹತ್ತಿದ್ದ ಚಿಂತೆಯನ್ನು ನಿಭಾಯಿಸುವುದಕ್ಕೆ ಸಾಧ್ಯವೇ ಇಲ್ಲ ಎನಿಸತೊಡಗಿತು. ಇದು ಇದೆಯಲ್ಲ, ಅಮೃತ. ಎಂತಹ ನೋವು, ಚಿಂತೆಯನ್ನು ಬೇಕಿದ್ದರೂ ದೂರ ಮಾಡುತ್ತದೆ ಕೈಯಲ್ಲಿ ಮದ್ಯದ ಬಾಟಲಿಯನ್ನು ಎತ್ತಿ ಹಿಡಿದುಕೊಂಡು ತನ್ನ ಗೆಳೆಯ ಹಿಂದೊಮ್ಮೆ ಆಡಿದ್ದ ಮಾತು ಆತನಿಗೀಗ ನೆನಪಾಗಿತ್ತು. ತನ್ನಲ್ಲಿದ್ದ ನೂರರ ನಾಲ್ಕು ನೋಟುಗಳನ್ನೇ ನಂಬಿಕೊಂಡು ಬಾರ್ ಹೊಕ್ಕವನು ಮರಳಿ ಬರುವಾಗ ಖಾಲಿ ಕಿಸೆಯವನಾಗಿದ್ದ. ಚಿಂತೆ ಪರಿಹಾರ ಆಗದಿದ್ದರೂ ತನ್ನಿಂದ ಚಿಂತೆ ದೂರಾದಂತೆ ಆತನಿಗೆ ಅನ್ನಿಸತೊಡಗಿತು. ಇದುವೇ ಚಿಂತೆ ಹೋಗಲಾಡಿಸುವ ಸುಲಭ ಉಪಾಯ ಎಂದುಕೊಂಡ.

ಹೀಗೆ ಕುಡಿತದ ಚಟ ಬೆಳೆಸಿಕೊಂಡವನು ಇಂದು ಕುಡುಕನೇ ಆಗಿಹೋಗಿದ್ದಾನೆ. ಪೇಟೆಯಲ್ಲಿದ್ದ ಮನೆ ಮಾರಿದವನು ಈಗ ಇರುವುದು ಬಾಡಿಗೆ ಮನೆಯಲ್ಲಿ. ಆತನ ಹೆಂಡತಿ ನಾಲ್ಕೈದು ಮನೆಗಳ ಕೂಲಿನಾಲಿ ಮಾಡಿ ಸಂಸಾರ ದೂಡುತ್ತಿದ್ದಾಳೆ. ಈತನ ಉಪಟಳದಿಂದ ಬೇಸತ್ತ ಅಕ್ಕಪಕ್ಕದ ಮನೆಯವರು ಮನೆ ಮಾಲಕನಲ್ಲಿ ದೂರಿಕೊಂಡಿದ್ದಾರೆ. ಆತ ನಾಳೆಯೋ ನಾಡಿದ್ದೋ ಇವರನ್ನು ಮನೆಯಿಂದ ಹೊರದಬ್ಬುವ ಯೋಚನೆಯಲ್ಲಿದ್ದಾನೆ.

*****

ಮೊದಲು ತನ್ನ ಅಂಗಡಿ ಇದ್ದ ಸ್ಥಳದಲ್ಲಿ ನಡೆದುಬರುತ್ತಿದ್ದ ಗೋಪಾಲ ಸಿಡಿಮಿಡಿಗುಟ್ಟುತ್ತಿದ್ದ. ಹಣ ಕೊಡುವ ಯೋಗ್ಯತೆ ಇಲ್ಲದ ಮೇಲೆ ಯಾಕೋ ಕುಡಿಯಬೇಕು ಬೋ...ಮಗನೇ ತನ್ನ ಶರ್ಟಿನ ಕಾಲರ್ ಹಿಡಿದು ಬಾರ್ ಓನರ್ ಹೇಳಿದ ಮಾತು ಮತ್ತೆ ಮತ್ತೆ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿತ್ತು. ಅಲ್ಲೇ ನಿಂತವನು ಆಕಾಶ ಮುಟ್ಟುವಂತೆ ಬೆಳೆದುನಿಂತಿದ್ದ ಕಂಪೆನಿಯ ಕಟ್ಟಡವನ್ನು ನೋಡಿದ. ಏನಾಯಿತೋ ಏನೋ, ದಪ್ಪದ ಕಲ್ಲೊಂದನ್ನು ಹುಡುಕಿ ಎತ್ತಿಕೊಂಡವನು ಆ ಕಟ್ಟಡದ ಕಡೆಗೆ ಬಲವಾಗಿ ಎಸೆದ.

ಮರುದಿನದ ಪೇಪರ್‌ನಲ್ಲಿ ಸುದ್ದಿ ಪ್ರಕಟವಾಗಿತ್ತು ‘ಎಂ.ಎ.ಎಸ್.ಎಸ್. ಕಂಪೆನಿ ಕಟ್ಟಡಕ್ಕೆ ಕಲ್ಲೆಸೆದ ಮಾನಸಿಕ ಅಸ್ವಸ್ಥ: ಪೊಲೀಸರಿಂದ ಬಂಧನ’

share
ವಿಶ್ವನಾಥ ಎನ್. ನೇರಳಕಟ್ಟೆ
ವಿಶ್ವನಾಥ ಎನ್. ನೇರಳಕಟ್ಟೆ
Next Story
X