ಪಾಣೆಮಂಗಳೂರು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಬಂಟ್ವಾಳ, ಜೂ. 22: ಪಾಣೆಮಂಗಳೂರು ಎಸ್‍ವಿಎಸ್ ಅ.ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಶಾಲಾ ಸಂಚಾಲಕ ವೆಂಕಟ್ರಾಯ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾಧ್ಯಾಪಕ ಜಯಾನಂದ ಪೆರಾಜೆ, ಉದ್ಯಮಿ ರಘು ಸಪಲ್ಯ ಮಾತನಾಡಿದರು. ಯೋಗ ಶಿಕ್ಷಕ ಶಂಕರ್ ವಿ. ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣರಾಜ ಶೆಟ್ಟಿ, ಸಮಾಜ ಸೇವಕ ಪಾಂಡುರಂಗ ಪ್ರಭು, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ನಯನ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರೇಶ್ಮಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ವಿನೋದ್ ಎನ್. ಸ್ವಾಗತಿಸಿ, ಕೇಶವ ಬಂಗೇರ ವಂದಿಸಿದರು. ರಾಜೇಂದ್ರ ಗೌಡ ನಿರೂಪಿಸಿದರು.
Next Story





