Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಭಾರತದಲ್ಲಿ ಕೇಸರಿ ಸಂಘಟನೆಗಳಿಂದ...

ಭಾರತದಲ್ಲಿ ಕೇಸರಿ ಸಂಘಟನೆಗಳಿಂದ ಅಲ್ಪಸಂಖ್ಯಾತರ ದಮನ: ಅಮೆರಿಕ ವಿದೇಶಾಂಗ ಇಲಾಖೆ ವರದಿ

ಹಿಂಸಾಚಾರಕ್ಕೆ ಆಡಳಿತದ ಕುಮ್ಮಕ್ಕು

ವಾರ್ತಾಭಾರತಿವಾರ್ತಾಭಾರತಿ22 Jun 2019 8:52 PM IST
share
ಭಾರತದಲ್ಲಿ ಕೇಸರಿ ಸಂಘಟನೆಗಳಿಂದ ಅಲ್ಪಸಂಖ್ಯಾತರ ದಮನ: ಅಮೆರಿಕ ವಿದೇಶಾಂಗ ಇಲಾಖೆ ವರದಿ

► 2018ರಲ್ಲಿ ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮರ ವಿರುದ್ಧ ಮುಂದುವರಿದ ಗುಂಪುದಾಳಿ

► ಕಳೆದ ವರ್ಷ ಕೇಸರಿ ಹಿಂಸೆಗೆ 18 ಬಲಿ

► ಮುಸ್ಲಿಂ ಸ್ಥಳನಾಮದ ನಗರಗಳ ಮರುನಾಮಕರಣದ ಹುನ್ನಾರ

► ಅನೇಕ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗದಂತೆ ನೋಡಿಕೊಂಡ ಸರಕಾರಿ ಅಧಿಕಾರಿಗಳು

ವಾಶಿಂಗ್ಟನ್, ಜೂ.22: ಅಲ್ಪಸಂಖ್ಯಾತ ಸಮುದಾಯಗಳು ಅದರಲ್ಲೂ ವಿಶೇಷವಾಗಿ ಮುಸ್ಲಿಮರ ವಿರುದ್ಧ ತೀವ್ರವಾದಿ ಕೇಸರಿ ಸಂಘಟನೆಗಳು ನಡೆಸುತ್ತಿರುವ ಗುಂಪು ದಾಳಿಗಳು 2018ರಲ್ಲಿಯೂ ಅವ್ಯಾಹತವಾಗಿ ಮುಂದುವರಿದಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಅಧಿಕೃತ ವರದಿಯೊಂದು ತಿಳಿಸಿದೆ.

ಬಹುತೇಕ ಪ್ರಕರಣಗಳಲ್ಲಿ ಬೀಫ್‌ಗಾಗಿ ದನಗಳನ್ನು ಮಾರಾಟ ಮಾಡಿದ ಅಥವಾ ಹತ್ಯೆ ಮಾಡಿದ ವದಂತಿಗಳ ಹಿನ್ನೆಲೆಯಲ್ಲಿ ಕೇಸರಿ ಸಂಘಟನೆಗಳು ಈ ಗುಂಪು ದಾಳಿಗಳನ್ನು ನಡೆಸಿವೆ ಎಂದು ಅದು ಹೇಳಿದೆ.

ಕೇಂದ್ರದ ಆಡಳಿತಾರೂಢ ಬಿಜೆಪಿಯ ಕೆಲವು ಹಿರಿಯ ನಾಯಕರು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆಂದು 2019ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತ ವಾರ್ಷಿಕ ವರದಿಯು ಆರೋಪಿಸಿದೆ.

ಭಾರತೀಯ ಸಂವಿಧಾನವು ಎಲ್ಲಾ ಪ್ರಜೆಗಳಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತೀವ್ರವಾದಿ ಚಿಂತನೆಗಳ ಬೆಳವಣಿಗೆಯೊಂದಿಗೆ ಈ ಧಾರ್ಮಿಕ ಸ್ವಾತಂತ್ರ್ಯದ ಇತಿಹಾಸವು ಆಕ್ರಮಣಕ್ಕೊಳಗಾಗುತ್ತಿದೆಯೆಂದು ವರದಿ ಕಳವಳ ವ್ಯಕ್ತಪಡಿಸಿದೆ.

ಆದರೆ ಭಾರತದ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ವರದಿಯು ಮುಕ್ತಕಂಠದಿಂದ ಶ್ಲಾಘಿಸಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯು ತನ್ನ ನ್ಯಾಯವಿವೇಚನೆಯ ಮೂಲಕ ಅಲ್ಪಸಂಖ್ಯಾತರಿಗೆ ಆಗಾಗ್ಗೆ ಅಗತ್ಯವಿರುವ ಸಂರಕ್ಷಣೆಗಳನ್ನು ಒದಗಿಸಿದೆಯೆಂದು ವರದಿ ಸಮಾಧಾನ ವ್ಯಕ್ತಪಡಿಸಿದೆ.

ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಗುಂಪು ಹಿಂಸಾಚಾರಕ್ಕೆ ಸರಕಾರ ಅವಕಾಶ ಹಾಗೂ ಉತ್ತೇಜನ ನೀಡುತ್ತಿರುವುದಾಗಿಯೂ ಅದು ಆರೋಪಿಸಿದೆ. ಕೇಸರಿ ಸಂಘಟನೆಗಳು ಹಿಂದುಯೇತರರು ಹಾಗೂ ದಲಿತ ಹಿಂದೂಗಳ ವಿರುದ್ಧ ಬೆದರಿಕೆ ಹಾಗೂ ಕಿರುಕುಳವನ್ನು ಒಳಗೊಂಡ ಹಿಂಸಾತ್ಮಕ ಅಭಿಯಾನವನ್ನು ನಡೆಸುತ್ತಿವೆ ಎಂದು ವರದಿಯು ತಿಳಿಸಿದೆ.

ಹಲವಾರು ಪ್ರಕರಣಗಳಲ್ಲಿ ಹಿಂಸಾಚಾರವನ್ನು ಎಸಗುವವರಿಗೆ ಕಾನೂನಡಿಯಲ್ಲಿ ಶಿಕ್ಷೆಯಾಗದಂತೆ ಸರಕಾರಿ ಅಧಿಕಾರಿಗಳು ರಕ್ಷಿಸಿದ್ದಾರೆಂದು ಕೆಲವು ಎನ್‌ಜಿಓ ಸಂಘಟನೆಗಳು ಆಪಾದಿಸಿದೆ. ಕಳೆದ ನವೆಂಬರ್‌ನಲ್ಲಿ ಇಂತಹ 18 ದಾಳಿಗಳು ನಡೆದಿವೆ ಹಾಗೂ ಆ ವರ್ಷ ಒಟ್ಟಾರೆ 18 ಮಂದಿ ಸಾವನ್ನಪ್ಪಿದ್ದಾರೆ ಎಂದೂ ವರದಿ ಹೇಳಿದೆ.

ಧಾರ್ಮಿಕ ಅಲ್ಪಸಂಖ್ಯಾತರು, ದುರ್ಬಲ ಸಮುದಾಯಗಳು ಹಾಗೂ ಸರಕಾರದ ಟೀಕಾಕಾರರ ಮೇಲೆ ನಡೆಯುತ್ತಿರುವ ಗುಂಪುದಾಳಿಗಳನ್ನು ತಡೆಯಲು ಸರಕಾರವು ಕೆಲವು ಸಂದರ್ಭಗಳಲ್ಲಿ ವಿಫಲವಾಗಿದೆ. ಎಂದು ಎನ್‌ಜಿಓ ಸಂಘಟನೆಗಳು ತಯಾರಿಸಿದ ವರದಿಗಳು ಬಹಿರಂಗಪಡಿಸಿವೆಯೆಂದು ಅಮೆರಿಕದ ವಿದೇಶಾಂಗ ಇಲಾಖೆಯು ತಿಳಿಸಿದೆ.

ಕೇಂದ್ರ ಹಾಗೂ ಹಲವು ರಾಜ್ಯ ಸರಕಾರಗಳು ಮತ್ತು ರಾಜಕೀಯ ಪಕ್ಷಗಳ ಸದಸ್ಯರ ನಡೆಗಳಿಂದಾಗಿ ಮುಸ್ಲಿಮರ ಆಚರಣೆಗಳು ಹಾಗೂ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆಯೆಂದು ಅದು ಹೇಳಿದೆ.

ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿರುವ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೂಡಾ ಕೇಂದ್ರ ಸರಕಾರವು ಸುಪ್ರೀಂಕೋಟ್‌ನಲ್ಲಿ ಪ್ರಶ್ನಿಸುವುದನ್ನು ಮುಂದುವರಿಸಿದೆ. ಮುಸ್ಲಿಂ ಸ್ಥಳನಾಮಗಳನ್ನು ಹೊಂದಿರುವ ಭಾರತೀಯ ನಗರಗಳಿಗೆ ಮರುನಾಮಕರಣ ಮಾಡಲಾಗುತ್ತಿದೆ. ಅಲಹಾಬಾದ್ ನಗರವನ್ನು ಪ್ರಯಾಗ್‌ರಾಜ್ ಎಂಬುದು ಮರುನಾಮಕರಣ ಮಾಡಿರುವುದು ಗಮನಾರ್ಹವಾಗಿದೆ. ಭಾರತೀಯ ಇತಿಹಾಸಕ್ಕೆ ಮುಸ್ಲಿಮರ ಕೊಡುಗೆಯನ್ನು ಅಳಿಸಿಹಾಕುವುದೇ ಇದರ ಉದ್ದೇಶವಾಗಿದೆ. ಇದರಿಂದಾಗಿ ಕೋಮು ಉದ್ವಿಗ್ನತೆಯಲ್ಲಿ ಹೆಚ್ಚಳವಾಗಿದೆಯೆಂದು ವಿದೇಶಾಂಗ ಇಲಾಖೆಯ ವರದಿ ತಿಳಿಸಿದೆ.

ಕಳೆದ ವರ್ಷ ಧಾರ್ಮಿಕವಾಗಿ ಪ್ರೇರಿತವಾದ ಹತ್ಯೆಗಳು, ದಾಳಿಗಳು, ದೊಂಬಿಗಳು, ತಾರತಮ್ಯ,ಗೂಂಡಾಗಿರಿಗಳು ನಡೆದಿವೆ. ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸುವ ಹಾಗೂ ಮತಾಂತರದ ಹಕ್ಕನ್ನು ನಿರ್ಬಂಧಿಸುವಂತಹ ಪ್ರಕರಣಗಳು ವರದಿಯಾಗಿವೆ.

ಆದಾಗ್ಯೂ ಕಳೆದ ವರ್ಷ ಕೆಲವೊಂದು ಧನಾತ್ಮಕ ಬದಲಾವಣೆಗಳು ಕೂಡಾ ಕಂಡುಬಂದಿರುವ ಬಗ್ಗೆ ವರದಿ ಗಮನಸೆಳೆದಿದ್ದು, ಕೆಲವು ಸರಕಾರಿ ಸಂಸ್ಥೆಗಳು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಎದುರಿಸಲು ಪ್ರಯತ್ನಿಸಿರುವುದಾಗಿ ತಿಳಿಸಿದೆ. 2017ನೇ ಇಸವಿಗೆ ಹೋಲಿಸಿದಲ್ಲಿ, 2018ರಲ್ಲಿ ದೇಶದಲ್ಲಿ ಕೋಮುಹಿಂಸಾಚಾರಾದ ಪ್ರಕರಣಗಳಲ್ಲಿ ಶೇ. 12ರಷ್ಟು ಇಳಿಕೆಯಾಗಿರುವುದಾಗಿ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್‌ ಹೇಳಿರುವುದಾಗಿ ವರದಿಯು ತಿಳಿಸಿದೆ.

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ವರದಿಯು ಅಮೆರಿಕ ಸರಕಾರಕ್ಕೆ ಕೆಲವೊಂದು ಶಿಫಾರಸುಗಳನ್ನು ಮಾಡಿದೆ. ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ನಿಯೋಗವು ಭಾರತಕ್ಕೆ ಭೇಟಿ ನೀಡುವುದಕ್ಕೆ ಅವಕಾಶ ನೀಡುವಂತೆ ಅಮೆರಿಕ ಸರಕಾರವು ಭಾರತ ಸರಕಾರದ ಮೇಲೆ ಒತ್ತಡ ಹೇರಬೇಕು ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಮೌಲ್ಯಮಾಪನ ಮಾಡಲು ಸಂಬಂಧಪಟ್ಟವರನ್ನು ಭೇಟಿಯಾಗಬೇಕೆಂದು ವರದಿ ಹೇಳಿದೆ.

ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಮಾನವಕ್ಕುಗಳ ಆಯೋಗಗಳನ್ನು ಹಾಗೂ ಮಾನವಹಕ್ಕುಗಳ ನ್ಯಾಯಾಲಯಗಳನ್ನು ಸ್ಥಾಪಿಸಲು 2018ರ ಮಾವಹಕ್ಕುಗಳ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸುವಂತೆ ಅಮೆರಿಕವು ಭಾರತವನ್ನು ಉತ್ತೇಜಿಸಬೇಕು ಎಂದು ವರದಿಯು ಹೇಳಿದೆ.

ಅಂತಾರಾಷ್ಟ್ರೀಯ ಮಿಶನರಿ ಹಾಗೂ ಮಾನವಹಕ್ಕುಗಳ ಗುಂಪುಗಳ ವಿರುದ್ಧ ಗುರಿಯಿರಿಸಲು ಕೇಂದ್ರ ಸರಕಾರವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಬಳಸಕೂಡದೆಂದು ವರದಿಯು ಅಮೆರಿಕ ಸರಕಾರವನ್ನು ಕೋರಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X