ಉಡುಪಿ ಮಲಬಾರ್‌ನಲ್ಲಿ ಅಲಿಯಂ ವಜ್ರಾಭರಣಗಳ ಸಂಗ್ರಹ ಬಿಡುಗಡೆ

ಉಡುಪಿ, ಜೂ.22: ಸುಂದರವಾದ ಅಲಿಯಂ ಹೂಗಳಿಂದ ಪ್ರೇರಿತವಾಗಿ ತಯಾರಿಸಿದ ಮೈನ್ ಡೈಮಂಡ್ಸ್ ಬ್ರಾಂಡ್‌ನ ವಜ್ರಾಭರಣಗಳ ಸಂಗ್ರಹದ ಬಿಡುಗಡೆ ಶನಿವಾರ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನ ಉಡುಪಿ ಮಳಿಗೆಯಲ್ಲಿ ನಡೆಯಿತು.
ಅನುಷಾ ಶೆಟ್ಟಿ ಮಣಿಪಾಲ, ಲೀಸಾ ಸಾರಾ ಪಿಂಟೊ ಬೆಳ್ಮಣ್, ರಶ್ಮಿ ಶೆಣೈ, ಭವ್ಯ ನಾಯಕ್ ಮಣಿಪಾಲ, ರಶ್ಮಿ ನಾಯಕ್ ಕಾರ್ಕಳ ಅಲಿಯಂ ವಜ್ರಾ ಭರಣಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಅಲಿಯಂ ಸಂಗ್ರಹದಲ್ಲಿ ನೆಕ್ಲೆಸ್ ಮತ್ತು ಪೆಂಡೆಂಟ್ ಸೆಟ್ಗಳು, ಓಲೆಗಳು ಮತ್ತು ಬಳೆಗಳು ಅತ್ಯಂತ ಸುಂದರವಾಗಿ ಪರಿಣತಿ ಹೊಂದಿದ ಕುಶಲ ಕರ್ಮಿ ಗಳಿಂದ ತಯಾರಿಸಲ್ಪಟ್ಟಿವೆ. ಈ ಸಂಗ್ರಹವು 50,000ರೂ.ನಿಂದ ಆರಂಭ ವಾಗುತ್ತದೆ. ಅಲಿಯಂ ಸಂಗ್ರಹವು ವಜ್ರದ ಪ್ರೇಮಿಗಳಿಗೆ ಅತ್ಯಂತ ಸೂಕ್ತವಾದ ಸಂಗ್ರಹವಾಗಿದೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಐ.ಜಿ.ಐ ಮತ್ತು ಜಿ.ಐ.ಎ. ಪ್ರಾಮಾಣೀಕೃತ ವಜ್ರಾಭರಣಗಳನ್ನು ಮತ್ತು ಬಿ.ಐ.ಎಸ್. ಹಾಲ್ಮಾರ್ಕ್ 916 ಇರುವ ಚಿನ್ನಾಭರಣವನ್ನು ಮಾರಾಟ ಮಾಡುತ್ತದೆ. ಎಲ್ಲಾ ಉತ್ಪನ್ನಗಳು ವಿವರವಾದ ಮತ್ತು ಪಾರದರ್ಶಕವಾದ ದರ ಪಟ್ಟಿಯನ್ನು ಹೊಂದಿರುತ್ತವೆ.
ಇರ್ಷಾದ್ ಕೋಡಿ ಅಲಿಯಂ ವಜ್ರಾಭರಣದ ಪರಿಚಯ ಮಾಡಿದರು. ಉಡುಪಿ ಮಳಿಗೆಯ ಮೆನೇಜರ್ ರಾಘವೇಂದ್ರ ನಾಯಕ್ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು.








