ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ: ಪ್ರೊ.ಎಂ.ಎ.ಹೆಗಡೆ

ಉಡುಪಿ, ಜೂ.22: ಯಕ್ಷಗಾನ ಪ್ರಸಂಗ ಕೃತಿಗಳು ಎಲ್ಲರಿಗೂ ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅವುಗಳನ್ನು ಡಿಜಿಟಲೀಕರಣ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅ್ಯಕ್ಷ ಪ್ರೊ.ಎಂ.ಎ.ಹೆಗಡೆ ತಿಳಿಸಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಇಂದ್ರಾಳಿ ಯಕ್ಷಗಾನ ಕೇಂದ್ರದ ಸಹಭಾಗಿತ್ವದಲ್ಲಿ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾದ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡುತಿದ್ದರು.
ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಯಕ್ಷಗಾನ ಪ್ರಸಂಗಗಳನ್ನು ಆಸಕ್ತರು ಉಚಿತ ವಾಗಿ ಡೌನ್‌ಲೋಡ್ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಹೀಗೆ ಇದೀಗ ಬಿಡುಗಡೆಗೊಂಡಿರುವ ಎರಡು ಪ್ರಸಂಗಗಳನ್ನು ಕೂಡ ಕೃತಿಕಾರರ ಅನುಮತಿ ಪಡೆದು ವೆಬ್‌ಸೈಟ್‌ಗೆ ಹಾಕಲಾಗುವುದೆಂದು ಅವರು ಹೇಳಿದರು.
ಇಂದು ಯಕ್ಷಗಾನದ ಪ್ರಸಂಗಗಳು ಹೆಚ್ಚು ಹೆಚ್ಚು ರಚನೆಯಾದರೂ ಅದರ ಮಾರಾಟದ ಸ್ಥಿತಿಗತಿ ಬಹಳಷ್ಟು ಗಂಭೀರವಾಗಿದೆ. ಇದಕ್ಕೆ ಕಾರಣ ಮಾರಾಟದ ವ್ಯವಸ್ಥೆಯಲ್ಲಿರುವ ತೊಡಕು. ಈ ಪ್ರಸಂಗಗಳನ್ನು ಯಕ್ಷಗಾನ ಕಲಾವಿದರೇ ಕೊಂಡುಕೊಳ್ಳುವ ಪ್ರವೃತಿಯೇ ಇಲ್ಲವಾಗಿದೆ. ಆದರೂ ಪ್ರಸಂಗಗಳ ರಚನೆಯು ದಾಖಲಾತಿ, ವಿದ್ಯಾಭ್ಯಾಸ ಹಾಗೂ ಶಾಶ್ವತ ಸಾಹಿತ್ಯವಾಗಿ ಉಳಿಸುವ ನಿಟ್ಟಿನಲ್ಲಿ ಬಹಳಷ್ಟು ಮಹತ್ವವಾಗಿದೆ ಎಂದರು.
ಯಕ್ಷಗಾನವನ್ನು ಪೌರಾಣಿಕ ಪ್ರಸಂಗಗಳಿಗೆ ಸೀಮಿತವಾಗಿ ಇಟ್ಟುಕೊಳ್ಳಬೇಕೆ ಅಥವಾ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕೆ ಎಂದು ಗಂಭೀರವಾಗಿ ವಿಚಾರ ಮಾಡುವ ಕಾಲ ಒದಗಿ ಬಂದಿದೆ. ಹೊಸ ಆಶಯಕ್ಕೆ ಹೇಗೆ ಹೊಂದಿ ಕೊಳ್ಳುವುದು ಎಂಬ ಸವಾಲನ್ನು ಯಕ್ಷಗಾನ ಪ್ರಪಂಚ ಇಂದು ಎದುರಿಸುತ್ತಿದೆ. ಈ ಸವಾಲುಗಳನ್ನು ಎದುರಿಸಿ ಅದಕ್ಕೆ ಸಮರ್ಥವಾಗಿ ಉತ್ತರಿಸಿದರೆ ಮಾತ್ರ ಈ ರಂಗಭೂಮಿ ಹೆಚ್ಚಿನ ವಿಸ್ತಾರ ಹಾಗೂ ವೈಶಾಲ್ಯತೆ ಪಡೆಯಲು ಸಾ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಯಕ್ಷಗಾನ ಎಂಬುದು ಇಂದು ಕೇವಲ ಆರಾಧನೆ ಕಲೆಯಾಗಿ ಉಳಿದಿಲ್ಲ. ಅದು ರಂಗಭೂಮಿಯಾಗಿ ಸಾಕಷ್ಟು ಬೆಳವಣಿಗೆ ಮತ್ತು ಪರಿವರ್ತನೆ ಯನ್ನು ಹೊಂದುತ್ತಿದೆ. ಇಂತಹ ಸಂದರ್ಭದಲ್ಲಿ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ತಜ್ಞರು ಚಿಂತನೆ ಮಾಡೇಕಾಗಿದೆ ಎಂದು ಅವರು ಹೇಳಿದರು.
ಕೃತಿಗಳ ಲೋಕಾರ್ಪಣೆಯನ್ನು ನೆರವೇರಿಸಿದ ಯಕ್ಷಗಾನ ಕೇಂದ್ರದ ಸಂಯೋ ಜಕ ಪ್ರೊ.ವರದೇಶ ಹಿರೇಗಂಗೆ ಮಾತನಾಡಿ, ಯಕ್ಷಗಾನ ಬಹಳಷ್ಟ್ಟು ಸಮೃದ್ಧಿ ಹಾಗೂ ಸಂಕೀರ್ಣವಾಗಿ ಬೆಳೆದು ನಿಂತ ಕಲೆಯಾಗಿದೆ. ಇದರಲ್ಲಿ ಸಂಗೀತ, ನೃತ್ಯ, ನಟನೆ, ವಿಚಾರಗಳಿವೆ. ಆದುದರಿಂದ ಯಕ್ಷಗಾನವನ್ನು ಶಾಸ್ತ್ರೀಯ ಹಾಗೂ ವ್ಯವಸ್ಥಿತವಾಗಿ ಅಧ್ಯಯನ ಮಾಡಬೇಕಾಗಿದೆ. ಅದಕ್ಕೊಂದು ವ್ಯಾಕರಣ ಹಾಗೂ ಅಲಂಕಾರಿಕ ಶಾಸ್ತ್ರ ರೂಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಹಿರಿಯ ಸಾಹಿತಿ ಅಂಬಾತನ ಮುದ್ರಾಡಿ ರಚಿಸಿರುವ ‘ಪಂಚಭೂತ ಪ್ರಪಂಚ’ ಕೃತಿವನ್ನು ಯಕ್ಷಗಾನ ಕವಿ ಕೆ.ಎಂ.ರಾಘವ ನಂಬಿಯಾರ್ ಮತ್ತು ಕಂದಾವರ ರಘುರಾಮ ಶೆಟ್ಟಿ ರಚಿಸಿರುವ ‘ಪ್ರಸಂಗ ಪಂಚಮಿ’ ಕೃತಿಯನ್ನು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾ ಚಿಂತಕ ಡಾ.ಭಾಸ್ಕರಾನಂದ ಕುಮಾರ್, ಅಕಾಡೆಮಿ ಮಾಜಿ ಸದಸ್ಯ ಪಿ.ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಚ್.ಶಿವರುದ್ರಪ್ಪ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ರಾಜಶೇಖರ ೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.







