ಗಾಂಜಾ ಮತ್ತಿನಲ್ಲಿ ಯುವಕನಿಗೆ ಹಲ್ಲೆ: ಆರೋಪ

ಬೆಂಗಳೂರು, ಜೂ.22: ಮಾದಕ ವಸ್ತು ಗಾಂಜಾ ಅಮಲಿನಲ್ಲಿದ್ದ ದುಷ್ಕರ್ಮಿಗಳ ಗುಂಪೊಂದು ಯುವಕನ ಮೇಲೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ದೇವರ ಜೀವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಲೋಹಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿ ಎಂದು ತಿಳಿದುಬಂದಿದೆ.
ಡಿಜೆಹಳ್ಳಿಯ ಎಲ್‌ಆರ್ ಬಂಡೆ ಬಳಿ ಗಾಂಜಾ ಅಮಲಿನಲ್ಲಿದ್ದ ಪ್ರದೀಪ್, ಮನೋಜ್ ಹಾಗೂ ಪ್ರದೀಪ್ ಎಂಬುವರು ಲೋಹಿತ್ ಕುಮಾರ್ ಜೊತೆ ಕ್ಲುಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಬಳಿಕ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿದ್ದಾರೆ. ಇದರ ಪರಿಣಾಮ ಲೋಹಿತ್ ಕುಮಾರ್ ಬಲಗೈ ಹೆಬ್ಬೆರಳು ತುಂಡಾಗಿದ್ದು, ಬೆನ್ನಿಗೆ ಗಂಭೀರವಾಗಿ ಗಾಯವಾಗಿದೆ ಎನ್ನಲಾಗಿದೆ.
ಈ ಸಂಬಂಧ ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Next Story





