ಹವಾಯಿಯಲ್ಲಿ ವಿಮಾನ ಪತನ: 9 ಸಾವು
ವಾಶಿಂಗ್ಟನ್, ಜೂ. 22: ಕಿರು ವಿಮಾನವೊಂದು ಉತ್ತರ ಹವಾಯಿಯಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ 9 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಓಹು ದ್ವೀಪದ ನಾರ್ತ್ ಶೋರ್ನಲ್ಲಿರುವ ಏರ್ಫೀಲ್ಡ್ ಸಮೀಪ ಅವಳಿ ಇಂಜಿನ್ಗಳ ‘ಕಿಂಗ್ ಏರ್’ ವಿಮಾನ ಪತನಗೊಂಡಿತು ಎಂದು ಹವಾಯಿ ಸಾರಿಗೆ ಇಲಾಖೆ ತಿಳಿಸಿದೆ.
ವಿಮಾನದಲ್ಲಿದ್ದ ಎಲ್ಲ 9 ಮಂದಿ ಮೃತಪಟ್ಟಿದ್ದಾರೆ ಎಂದು ಅದು ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಅದು ಸ್ಕೈಡೈವಿಂಗ್ಗೆ ಬಳಸುವ ವಿಮಾನವಾಗಿದ್ದು, ಹಾರಾಟ ಆರಂಭದ ಹಂತದಲ್ಲೇ ಸಂಜೆ 6:30ಕ್ಕೆ ಪತನಗೊಂಡಿದೆ ಎಂದು ಸ್ಥಳೀಯ ಸುದ್ದಿವಾಹಿನಿ ‘ಹವಾಯಿ ನೌ’ ವರದಿ ಮಾಡಿದೆ.
Next Story