ಉದ್ಯೋಗ ಅರಸಿ ಮುಂಬೈಗೆ ತೆರಳಿದ್ದ ಇಂಜಿನಿಯರ್ ನಾಪತ್ತೆ

ಮಂಗಳೂರು, ಜೂ.24: ಮೂಲತಃ ಬೆಳ್ತಂಗಡಿ ಪ್ರಸ್ತುತ ಕುಂಜತ್ತಬೈಲ್ ದೇವಿನಗರ ನಿವಾಸಿ ಮುಹಮ್ಮದ್ ಫಿರೋಝ್ ಶೇಖ್ (47) ಎಂಬವರು ಹಲವು ತಿಂಗಳ ಹಿಂದೆ ನಾಪತ್ತೆಯಾದ ಬಗ್ಗೆ ಅವರ ಪತ್ನಿ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇವರು ಇಂಜಿನಿಯರ್ ಆಗಿದ್ದು, ಕೆಲಸಕ್ಕಾಗಿ 2018ರ ಸೆ.18ರಂದು ಮುಂಬೈಗೆ ಹೋಗಿದ್ದರು. ಅಲ್ಲಿಂದ ಒಳ್ಳೆಯ ಕೆಲಸ ಸಿಕ್ಕಿದರೆ ವಿದೇಶಕ್ಕೆ ಹೋಗುವುದಾಗಿ ಪತ್ನಿ ಬಳಿ ಹೇಳಿ ಹೋಗಿದ್ದರು. ಆದರೆ ಆ ಬಳಿಕ ಮನೆಯವರನ್ನು ಸಂಪರ್ಕಿಸಲೇ ಇಲ್ಲ. ಮನೆಯವರು ಅವರು ಬರುತ್ತಾರೆಂಬ ನಿರೀಕ್ಷೆಯಲ್ಲಿ ಕಾದು ತಡವಾಗಿ ಕಾವೂರು ಠಾಣೆಗೆ ದೂರು ನೀಡಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಚಹರೆ: ಎತ್ತರ 5.4 ಅಡಿ, ಗೋಧಿ ಮೈಬಣ್ಣ, ದೃಢಕಾಯ ಶರೀರ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕ್ರೀಮ್ ಕಲರ್ ಉದ್ದ ತೋಳಿನ ಶರ್ಟ್, ಹಿಂದಿ, ಇಂಗ್ಲೀಷ್, ಅರೆಬಿಕ್, ಕನ್ನಡ, ತುಳು, ಉರ್ದು ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಸಿಕ್ಕವರು ನಗರ ನಿಯಂತ್ರಣ ಕೊಠಡಿ ಅಥವಾ ಕಾವೂರು ಪೊಲೀಸ್ ಠಾಣೆ (0824- 2220533) ಯನ್ನು ಸಂಪರ್ಕಿಸಬಹುದು.





