ಜಿ20 ಸಮ್ಮೇಳನದಲ್ಲಿ ಹಾಂಕಾಂಗ್ ವಿಷಯದ ಚರ್ಚೆ ಇಲ್ಲ: ಚೀನಾ
ಬೀಜಿಂಗ್, ಜೂ. 24: ಈ ವಾರ ನಡೆಯಲಿರುವ ಜಿ20 ದೇಶಗಳ ಶೃಂಗ ಸಮ್ಮೇಳನದಲ್ಲಿ ಹಾಂಕಾಂಗ್ ವಿಷಯ ಚರ್ಚೆಯಾಗಲು ಚೀನಾ ಅವಕಾಶ ನೀಡುವುದಿಲ್ಲ ಎಂದು ಚೀನಾದ ವಿದೇಶ ವ್ಯವಹಾರಗಳ ಸಹಾಯಕ ಸಚಿವ ಝಾಂಗ್ ಜುನ್ ಸೋಮವಾರ ಹೇಳಿದ್ದಾರೆ.
ಹಾಂಕಾಂಗ್ನ ಆರೋಪಿಗಳನ್ನು ವಿಚಾರಣೆಗಾಗಿ ಮಾತೃ ನೆಲ ಚೀನಾಕ್ಕೆ ಗಡಿಪಾರು ಮಾಡಲು ಅವಕಾಶ ನೀಡುವ ಹಾಂಕಾಂಗ್ನ ಮಸೂದೆಯನ್ನು ವಿರೋಧಿಸಿ ಕಳೆದೆರಡು ವಾರಗಳಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.
‘‘ಹಾಂಕಾಂಗ್ ವಿಷಯದ ಬಗ್ಗೆ ಜಿ20ಯಲ್ಲಿ ಚರ್ಚೆ ನಡೆಯುವುದಿಲ್ಲ ಎನ್ನುವುದನ್ನು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ. ಹಾಂಕಾಂಗ್ ವಿಷಯ ಚರ್ಚೆಯಾಗಲು ನಾವು ಅವಕಾಶ ನೀಡುವುದಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಝಾಂಗ್ ಹೇಳಿದರು.
Next Story