ಗಾಯಾಳು ನಾಯಿ ಸಹಾಯ ಕೋರಿ ಫಾರ್ಮಸಿಗೆ ಹೊಕ್ಕಾಗ !.... ವೀಡಿಯೋ ವೈರಲ್
ಇಸ್ತಾಂಬುಲ್, ಜೂ.25: ಗಾಯಗೊಂಡಿರುವ ನಾಯಿ ಹಾಗೂ ಫಾರ್ಮಸಿಸ್ಟ್ ಒಬ್ಬರು ಕಂಡುಬಂದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಲವರ ಮೊಗಗಳಲ್ಲಿ ನಗು ಮೂಡಿಸಿದೆ.
ಕಳೆದ ವಾರ ಟರ್ಕಿಯ ರಾಜಧಾನಿ ಇಸ್ತಾಂಬುಲ್ ನಲ್ಲಿ ಗಾಯಗೊಂಡ ಬೀದಿ ನಾಯಿಯೊಂದು ಬಾನು ಸೆಂಗಿರ್ ಎಂಬವರ ಫಾರ್ಮಸಿಗೆ ಬಂದಿತ್ತು. ಪ್ರಾಣಿಪ್ರಿಯರಾದ ಸೆಂಗಿರ್ ಅವರು ಬೀದಿನಾಯಿಗಳಿಗೆ ಮಲಗಲು ತಮ್ಮ ಫಾರ್ಮಸಿಯಲ್ಲಿ ಸೌಕರ್ಯ ಒದಗಿಸಿದ್ದರು. ಆದರೆ ಈ ನಿರ್ದಿಷ್ಟ ನಾಯಿ ಅಲ್ಲಿ ನಾಯಿಗಳಿಗೆಂದಿದ್ದ ಹಾಸಿಗೆಯಲ್ಲಿ ಮಲಗದೆ ಬಾಗಿಲಿನಲ್ಲಿಯೇ ನಿಂತುಕೊಂಡು ಏನನ್ನೋ ನಿರೀಕ್ಷಿಸುವಂತಿತ್ತು. ಈ ದೃಶ್ಯ ಸೆಕ್ಯುರಿಟಿ ಕ್ಯಾಮರಾದಲ್ಲಿ ದಾಖಲಾಗಿತ್ತು.
‘‘ಆಕೆ ನನ್ನನ್ನೇ ನೋಡುತ್ತಿದ್ದಳು, ಬೇಬಿ ಏನಾದರೂ ಸಮಸ್ಯೆಯೇ?’’ ಎಂದು ಆಗ ಆ ಹೆಣ್ಣು ನಾಯಿಯನ್ನು ಕೇಳಿದೆ ಎಂದು ಸೆಂಗಿರ್ ಹೇಳುತ್ತಾರೆ.
ನಾಯಿಯ ಕಾಲಿನಲ್ಲಿ ಗಾಯದಿಂದ ರಕ್ತ ಒಸರುತ್ತಿತ್ತು.
ಇನ್ನೊಂದು ವೀಡಿಯೋದಲ್ಲಿ ಫಾರ್ಮಸಿಸ್ಟ್ ನಾಯಿಗೆ ಪ್ರೀತಿಯಿಂದ ಚಿಕಿತ್ಸೆ ನೀಡುತ್ತಾ ಅದರ ಗಾಯವನ್ನು ಸ್ವಚ್ಛಗೊಳಿಸಿ ಅದಕ್ಕೆ ಔಷಧಿ ಲೇಪಿಸುತ್ತಿರುವುದು ಕಾಣಿಸುತ್ತದೆ.
ಎಲ್ಲವೂ ಮುಗಿದ ಮೇಲೆ ನಾಯಿ ನೆಲದಲ್ಲಿ ಮಲಗಿ ನನಗೆ ಧನ್ಯವಾದ ಹೇಳಿ ನಿಮ್ಮ ಮೇಲೆ ನಂಬಿಕೆಯಿದೆ ಎಂದು ಹೇಳುವಂತಿತ್ತು, ಎಂದು ಫಾರ್ಮಸಿಸ್ಟ್ ಹೇಳಿದ್ದಾರೆ. ನಂತರ ನಾಯಿ ಅಲ್ಲಿಯೇ ವಿರಮಿಸಿತ್ತು.
ಈ ವೀಡಿಯೋ ಒಂದು ಲಕ್ಷಕ್ಕೂ ಅಧಿಕ ಲೈಕ್ ಪಡೆದಿದ್ದು ಜನರು ಫಾರ್ಮಸಿಸ್ಟ್ ರ ಮಾನವೀಯತೆಯನ್ನು ಕೊಂಡಾಡಿದ್ದಾರೆ.
İstanbul’da patisi yaralanan sokak köpeği, gittiği eczanede yardım istedi. Yaralı köpeği tedavi eden Eczacı Banu Cengiz, "Yüreklerinde insan sevgisi, hayvan sevgisi, doğan sevgisi olanlar kapısına gelen bu canlıya müdahale ederdi" dedi. pic.twitter.com/rYy7OoWq1j
— Vaziyet (@vaziyetcomtr) June 22, 2019