Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 2030ರ ವೇಳೆಗೆ ಭಾರತದಲ್ಲಿ ಕುಡಿಯಲೂ...

2030ರ ವೇಳೆಗೆ ಭಾರತದಲ್ಲಿ ಕುಡಿಯಲೂ ನೀರಿಲ್ಲ: ರಾಜಕಾರಣಿಗಳಿಗೆ ಚಿಂತೆಯೂ ಇಲ್ಲ!

ಪರಿಸರ ಬಿಕ್ಕಟ್ಟಿನ ಕಡೆಗಣನೆಯಿಂದ ಭಾರೀ ವಿನಾಶ

ವಾರ್ತಾಭಾರತಿವಾರ್ತಾಭಾರತಿ25 Jun 2019 7:38 PM IST
share
2030ರ ವೇಳೆಗೆ ಭಾರತದಲ್ಲಿ ಕುಡಿಯಲೂ ನೀರಿಲ್ಲ: ರಾಜಕಾರಣಿಗಳಿಗೆ ಚಿಂತೆಯೂ ಇಲ್ಲ!

ಹೊಸದಿಲ್ಲಿ,ಜೂ.25: ಚೆನ್ನೈ ನಗರದಲ್ಲಿ ಹನಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಬಿಹಾರದಲ್ಲಿ ಉಷ್ಣ ಮಾರುತವು 150ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಮೊನ್ನೆ ಮೊನ್ನೆ ದಕ್ಷಿಣ ಆಫ್ರಿಕಾದ ಬಿಲಿಯಾಧಿಪತಿ ಗುಪ್ತಾ ಕುಟುಂಬದಲ್ಲಿಯ ಎರಡು ಭರ್ಜರಿ ಮದುವೆಗಳ ಬಳಿಕ ಉತ್ತರಾಖಂಡವು 4,000 ಕೆ.ಜಿ.ಗಳಷ್ಟು ತ್ಯಾಜ್ಯಗಳ ಸಮಸ್ಯೆಯನ್ನೆದುರಿಸುತ್ತಿದೆ.

ಇವು ಕಳೆದ ಕೆಲವು ವಾರಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾದ ಕೆಲವು ಬೆಳವಣಿಗೆಗಳಷ್ಟೇ. ಸ್ಪಷ್ಟವಾಗಿ ಹೇಳಬೇಕೆಂದರೆ ದೇಶವು ಇಂದು ಪರಿಸರ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿದೆ. ಆದರೆ ದೇಶದ ನಾಯಕರೆನ್ನಿಸಿಕೊಂಡವರಿಗೆ ಈ ಬಗ್ಗೆ ಚೂರೂ ಕಳವಳವಿಲ್ಲ.

ಭಾರತೀಯ ರಾಜಕಾರಣದಲ್ಲಿ ಪರಿಸರದ ಪ್ರಸ್ತಾಪವಾಗುವುದೇ ಇಲ್ಲ. ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಪಾಕಿಸ್ತಾನದಿಂದ ಹಿಡಿದು ತೆರಿಗೆಗಳವರೆಗೆ ಪ್ರತಿಯೊಂದರ ಬಗ್ಗೆಯೂ ಚರ್ಚೆಗಳು ನಡೆದಿದ್ದವು,ಆದರೆ ಭಾರತೀಯರು ಉಸಿರಾಡುತ್ತಿರುವ ವಾಯುವಿನ ಕಳಪೆ ಗುಣಮಟ್ಟದ ಬಗ್ಗೆ ಅಥವಾ ಅರಣ್ಯನಾಶದಿಂದ ತಾಪಮಾನ ಹೆಚ್ಚುತ್ತಿರುವ ಬಗ್ಗೆ ಮಾತನಾಡುವ ವ್ಯವಧಾನ ಯಾವುದೇ ರಾಜಕಾರಣಿಗಿರಲಿಲ್ಲ.

ಭಾರತೀಯ ಪ್ರಜಾಪ್ರಭುತ್ವದ ಸ್ವರೂಪವೇ ಅಪರಿಪೂರ್ಣವಾಗಿದೆ,ಇಲ್ಲಿ ದೈನಂದಿನ ಜೀವನದ ಲೌಕಿಕ ವಿಷಯಗಳಿಗಿಂತ ಭಾವೋದ್ವೇಗವೇ ಪ್ರಮುಖತೆಯನ್ನು ಪಡೆದುಕೊಳ್ಳುತ್ತವೆ. ಇದರಿಂದಾಗಿಯೇ ಜನರ ಜೀವನಮಟ್ಟವನ್ನು ಹೆಚ್ಚಿಸುವಲ್ಲಿ ಏನೇನೂ ಪಾತ್ರವನ್ನು ಹೊಂದಿರದ ಪಾಕಿಸ್ತಾನದ ಮೇಲಿನ ವಾಯುದಾಳಿಯನ್ನು ಬಿಜೆಪಿಯು ತನ್ನ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿತ್ತು,ಇದು ಗಣನೀಯ ಸಂಖ್ಯೆಯ ಭಾರತೀಯರಲ್ಲಿ ಭಾವೋದ್ವೇಗದ ತಂತುವನ್ನು ಮಿಡಿದಿತ್ತು ಮತ್ತು ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು.

ತಕ್ಷಣದ ಸಮಸ್ಯೆಗಳ ಪರಿಹಾರಕ್ಕಾಗಿ ಕೂಡ ಸರಕಾರಗಳ ಮೇಲೆ ಒತ್ತಡ ಹೇರಲು ಮತದಾರರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಪರಿಗಣಿಸಿದರೆ ಪರಿಸರ ರಕ್ಷಣೆಯ ಹೆಚ್ಚು ಸಂಕೀರ್ಣ,ದೀರ್ಘಕಾಲಿಕ ಸವಾಲು ಎಂದೂ ಚುನಾವಣಾ ರಾಜಕೀಯದ ಭಾಗವಾಗುವುದಿಲ್ಲ ಎಂದರೆ ಅಚ್ಚರಿ ಪಡಬೇಕಿಲ್ಲ.

ಆದರೆ ವಾಸ್ತವಿಕ ಅಂಕಿಅಂಶಗಳು ನಿಜಕ್ಕೂ ದಿಗಿಲು ಹುಟ್ಟಿಸುತ್ತಿವೆ. ಭಾರತದಲ್ಲಿಂದು ಕ್ಯಾನ್ಸರ್,ಕ್ಷಯರೋಗ,ಏಡ್ಸ್ ಮತ್ತು ಮಧುಮೇಹಕ್ಕೆ ಬಲಿಯಾಗುತ್ತಿರುವ ಒಟ್ಟು ಜನರಿಗಿಂತ ಹೆಚ್ಚಿನ ಜನರು ಪರಿಸರ ಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ. 2020ರ ವೇಳೆಗೆ ದೇಶದ 21 ನಗರಗಳಲ್ಲಿ ಅಂತರ್ಜಲ ಬರಿದಾಗಲಿದೆ ಮತ್ತು 2030ರ ವೇಳೆಗೆ ಶೇ.40ರಷ್ಟು ಭಾರತೀಯರಿಗೆ ಕುಡಿಯಲೂ ನೀರು ಸಿಗುವುದಿಲ್ಲ ಎಂದು ಸರಕಾರದ ಚಿಂತನ ಚಾವಡಿ ನೀತಿ ಆಯೋಗವು ತನ್ನ ಇತ್ತೀಚಿನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ತಾಪಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಹೆಚ್ಚುತ್ತಿರುವುದರಿಂದ ಕರಾವಳಿಯಲ್ಲಿನ ಜನದಟ್ಟಣೆಯ ಪ್ರದೇಶಗಳು ಮುಳುಗಡೆಯಾಗಲಿವೆ ಮತ್ತು ಮಾರಣಾಂತಿಕ ಉಷ್ಣ ಮಾರುತಗಳು ಹೆಚ್ಚಲಿವೆ.

ವಾತಾವರಣದಲ್ಲಿಯ ಇಂತಹ ಬದಲಾವಣೆಗಳು ಯಾವುದೇ ದೇಶಕ್ಕೆ ವಿನಾಶಕಾರಿಯಾಗುತ್ತವೆ. ಭಾರತದಲ್ಲಿ ಬಡತನದ ಹೆಚ್ಚಿನ ಮಟ್ಟ ಮತ್ತು ಭಾರೀ ಜನಸಂಖ್ಯೆಯನ್ನು ಪರಿಗಣಿಸಿದರೆ ಇಂತಹ ಬದಲಾವಣೆಗಳು ಸಾಮೂಹಿಕ ಸ್ಥಳಾಂತರ ಮತ್ತು ಸಂಘರ್ಷಗಳಿಗೆ ಕಾರಣವಾಗಲಿವೆ. ಭವಿಷ್ಯದ ರಕ್ಷಣೆಗಾಗಿ ದೇಶವು ತನ್ನ ನೀತಿಗಳಲ್ಲಿ ಕಠಿಣ ಬದಲಾವಣೆಗಳನ್ನು ತರಲು ನಾಯಕರು ನೆರವಾಗಬೇಕಿದೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X