ಅಮೆರಿಕ: ರಸ್ತೆ ಅಪಘಾತದಲ್ಲಿ ಹೈದರಾಬಾದ್ ಯುವಕ ಸಾವು

ವಾಶಿಂಗ್ಟನ್, ಜೂ. 25: ಹೈದರಾಬಾದ್‌ನ 26 ವರ್ಷದ ಚಾಲಕರೊಬ್ಬರು ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕ್ಯಾಲಿಫೋರ್ನಿಯದ ಫ್ರೆಮಂಟ್‌ನಲ್ಲಿ ವಾಸಿಸುತ್ತಿದ್ದ ಸೈಯದ್ ವಸೀಮ್ ಅಲಿ ತನ್ನ ಟೊಯೋಟ ಕಾರನ್ನು ‘ಲಿಫ್ಟ್’ ಕಂಪೆನಿಗಾಗಿ ಓಡಿಸುತ್ತಿದ್ದರು. ಸಾನ್‌ಫ್ರಾನ್ಸಿಸ್ಕೊದ ಬೇವ್ಯೆ ಜಿಲ್ಲೆಯಲ್ಲಿ ರವಿವಾರ ಸಂಭವಿಸಿದ ಅಪಘಾತದಲ್ಲಿ ಕಾರಿನ ಚಾಲಕ ಮತ್ತು ಅದರಲ್ಲಿದ್ದ ಓರ್ವ ಪ್ರಯಾಣಿಕೆ ಮೃತಪಟ್ಟಿದ್ದಾರೆ ಎಂದು ‘ಎಸ್‌ಎಫ್‌ಗೇಟ್’ ವರದಿ ಮಾಡಿದೆ.
ಮರ್ಸಿಡಿಸ್ ಬೆಂಝ್ ಕಾರು ಟೊಯೋಟ ಕಾರಿಗೆ ಢಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದರ ಚಾಲಕನು ಕಾರನ್ನು ಬಿಟ್ಟು ಓಡಿ ಪರಾರಿಯಾಗಿದ್ದಾನೆ. ಅವನನ್ನು ಇನ್ನೂ ಬಂಧಿಸಲಾಗಿಲ್ಲ.
Next Story