ಪಶ್ಚಿಮ ದಂಡೆಯಲ್ಲಿ ರಾಯಭಾರ ಕಚೇರಿ: ಒಮಾನ್
ದುಬೈ, ಜೂ. 26: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನೂತನ ರಾಜತಾಂತ್ರಿಕ ಕಚೇರಿಯೊಂದನ್ನು ಆರಂಭಿಸಲು ಯೋಚಿಸುತ್ತಿರುವುದಾಗಿ ಒಮಾನ್ ಬುಧವಾರ ಹೇಳಿದೆ. ಈ ಉದ್ದೇಶಕ್ಕಾಗಿ ತನ್ನ ವಿದೇಶ ಸಚಿವಾಲಯದ ನಿಯೋಗವೊಂದು ರಮಲ್ಲಾಕ್ಕೆ ಹೋಗಲಿದೆ ಎಂದು ಅದು ತಿಳಿಸಿದೆ.
‘‘ಫೆಲೆಸ್ತೀನಿಯನ್ ಸಹೋದರರಿಗೆ ಬೆಂಬಲ ನೀಡುವ ಒಮಾನ್ ನೀತಿಯ ಭಾಗವಾಗಿ, ರಾಯಭಾರ ಕಚೇರಿ ಮಟ್ಟದಲ್ಲಿ ಫೆಲೆಸ್ತೀನಿಯರಿಗಾಗಿ ನೂತನ ರಾಜತಾಂತ್ರಿಕ ಕಚೇರಿಯೊಂದನ್ನು ತೆರೆಯಲು ಒಮಾನ್ ನಿರ್ಧರಿಸಿದೆ’’ ಎಂದು ವಿದೇಶ ಸಚಿವಾಲಯ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿದೆ.
Next Story