ಅಂಶು ಸಂಹಿತ್ ಕೃತಿ ಪ್ರಶಸ್ತಿಗೆ ಆಯ್ಕೆ

ಉಡುಪಿ, ಜೂ.27: ಕನ್ನಡ ಸಾಹಿತ್ಯ ಪರಿಷತ್‌ನಿಂದ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗೆ ನೀಡುವ ‘ಸಿಸು ಸಂಗಮೇಶ ದತ್ತಿ’ ಪ್ರಶಸ್ತಿಗೆ ಉಡುಪಿಯ ಅಂಶು ಸಂಹಿತ್ ಬರೆದ ಮಕ್ಕಳ ನಾಟಕ ‘ಕ್ಯಾಂಡಲ್‌ಡಾಲ್’ ಆಯ್ಕೆಯಾಗಿದೆ.
ಅಂಶು ಸಂಹಿತ್ ರಂಗಭೂಮಿ ಉಡುಪಿಯ ರಂಗನಿರ್ದೇಶಕ ರವಿರಾಜ್ ಎಚ್.ಪಿ. ಹಾಗೂ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇವರ ಪುತ್ರ ನಾಗಿದ್ದು, ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಯಾಗಿದ್ದಾನೆ.
Next Story





