ಶ್ರೀರಾಮನ ಕುರಿತು ಅಸಭ್ಯ ಬರಹ; ಫೇಸ್‌ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜೂ.27: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಪುಟವೊಂದರಲ್ಲಿ ಶ್ರೀರಾಮ ಕುರಿತು ಅಸಭ್ಯ ಬರಹ ಪ್ರಕಟಿಸಿರುವ ಆರೋಪದಡಿ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
'ವಾಯ್ಸ್ ಆಫ್ ಕರ್ನಾಟಕ ಮುಸ್ಲಿಮ್' ಹೆಸರಿನಲ್ಲಿದ್ದ ಫೇಸ್‌ಬುಕ್ ಪುಟದ ಆಡ್ಮಿನ್ ಮೇಲೆ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಾಮನ ಬಗ್ಗೆ ಅಸಭ್ಯ ಬರಹ ಪ್ರಕಟಿಸಿದ್ದ ಹಿನ್ನಲೆ ವ್ಯಕ್ತಿಯೊಬ್ಬರು ನೀಡಿದ ದೂರಿನನ್ವಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
Next Story





