ಕಟ್ಟಡಕ್ಕೆ ಢಿಕ್ಕಿಯಾದ ವಿಮಾನ; ಇಬ್ಬರು ಸಿಬ್ಬಂದಿ ಮೃತ್ಯು
43 ಪ್ರಯಾಣಿಕರು ಅದೃಷ್ಟವಶಾತ್ ಪಾರು

ಮಾಸ್ಕೋ, ಜೂ. 27: ರಶ್ಯದ ಪ್ರಯಾಣಿಕ ವಿಮಾನವೊಂದು ಸೈಬೀರಿಯ ವಿಮಾನ ನಿಲ್ದಾಣದಲ್ಲಿ ಗುರುವಾರ ಇಳಿಯುವಾಗ ರನ್‌ವೇ ಮೀರಿ ಧಾವಿಸಿದ್ದು, ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮವಾಗಿ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೈಬೀರಿಯದ ಉಲಾನ್-ಉಡೆಯಿಂದ ಬಂದ ಸಣ್ಣ ಎಎನ್-24 ವಿಮಾನವು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ನಡೆಸಲು ಯತ್ನಿಸುತ್ತಿತ್ತು ಎಂದು ಬುರ್ಯಾಟಿಯ ರಾಜ್ಯ ಸರಕಾರ ತಿಳಿಸಿದೆ.
ಈ ಪ್ರಯತ್ನದಲ್ಲಿ ವಿಮಾನವು ರನ್‌ವೇಯನ್ನು ಮೀರಿ 100 ಮೀಟರ್ ಮುಂದಕ್ಕೆ ಚಲಿಸಿದ್ದು, ತ್ಯಾಜ್ಯ ಸಂಸ್ಕರಣ ಕಟ್ಟಡವೊಂದಕ್ಕೆ ಢಿಕ್ಕಿಯಾಗಿದೆ.
ಬಳಿಕ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಇಬ್ಬರು ಸಿಬ್ಬಂದಿ ಮೃತಪಟ್ಟರು. 43 ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.
Next Story





