ಹಳೆಯಂಗಡಿ: ಕಡಲ್ಕೊರೆತ ಪ್ರದೇಶಕ್ಕೆ ಐವನ್ ಭೇಟಿ

ಮಂಗಳೂರು, ಜೂ.28: ನಗರ ಹೊರವಲಯದ ಹಳೆಯಂಗಡಿಯ ಸರ್ಫಿಂಗ್ ಏರಿಯಾ ಕಡಲು ಕೊರೆತ ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಕಡಲ್ಕೊರೆತದಿಂದ ಹಳೆಯಂಗಡಿಯ ಸರ್ಫಿಂಗ್ ಪ್ರದೇಶವು ಅಪಾಯದಂಚಿನಲ್ಲಿ ಇದ್ದುದನ್ನು ಗಮನಿಸಿದ ಐವನ್ ಡಿಸೋಜ ತುರ್ತು ತಡೆಗೋಡೆಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಕೃತಿ ವಿಕೋಪದಡಿ ಹೆಚ್ಚಿನ ಅನುದಾನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಜೊತೆ ಚರ್ಚಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು.
ಈ ಸಂದರ್ಭ ಶಾಹುಲ್ ಹಮೀದ್ ಕದಿಕೆ, ಅಲ್ಟೈನ್ ಡಿಕುನ್ಹ, ಅಧಿಕಾರಿಗಳು ಹಾಜರಿದ್ದರು.
Next Story





