ಉಡುಪಿ: ಮರ ಬಿದ್ದು ಮನೆಗೆ ಹಾನಿ
ಉಡುಪಿ, ಜೂ.28: ಇಲ್ಲಿನ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ಪೂಜಾರಿ ಎಂಬವರ ಪಕ್ಕಾ ಮನೆಯ ಮೇಲೆ ಗುರುವಾರ ಮರ ಬಿದ್ದು ಭಾಗಶ: ಹಾನಿ ಯಾಗಿದ್ದು ಅಂದಾಜು 25,000 ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಬೈಂದೂರು ತಾಲೂಕು ಶಿರೂರು ಗ್ರಾಮದ ಅಣ್ಣಪ್ಪ ಇವರ ಅಡಿಕೆ ಹಾಗೂ ತೆಂಗಿನ ಮರಗಳ ಮೇಲೆ ದೊಡ್ಡ ಅರಳಿ ಮರ ಕುಸಿದು ಬಿದ್ದು 25,000ರೂ. ಗಳಿಗೂ ಅಧಿಕ ಹಾನಿ ಸಂಭವಿಸಿದೆ. ಅದೇ ರೀತಿ ಬ್ರಹ್ಮಾವರ ತಾಲೂಕು ನೀಲಾವರ ಗ್ರಾಮದ ಮಧ್ಯಸ್ಥರಬೆಟ್ಟುವಿನ ಲೀಲಾವತಿ ಸೇರ್ವೇಗಾರ್ತಿ ಎಂಬವರ ಮನೆಯ ಬಚ್ಚಲು ಮನೆಗೆ ಅಕಸ್ಮಿಕವಾಗಿ ಬೆಂಕಿ ತಗಲಿ 25,000 ರೂ.ಗಳ ನಷ್ಟ ಸಂಭವಿಸಿದೆ.
Next Story





