ಕಳವು ಪ್ರಕರಣ: ನಾಲ್ವರ ಬಂಧನ, 16 ಬೈಕ್ ಗಳು ಜಪ್ತಿ

ಬೆಂಗಳೂರು, ಜೂ.28: ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಆರೋಪ ಪ್ರಕರಣ ಸಂಬಂಧ ನಾಲ್ವರನ್ನು ಇಲ್ಲಿನ ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ಬೆಲೆ ಬಾಳುವ 16 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಶಿವಾಜಿನಗರದ ಯಾಸೀನ್(20), ಆರ್‌ಟಿ ನಗರದ ನಿಖಿಲ್(19), ನಾಸೀರ್(19), ಆರೀಫ್(20) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಜ.18ರಂದು ಶ್ರೀರಾಮಪುರದ 3ನೆ ಮುಖ್ಯರಸ್ತೆಯ 2ನೆ ಕ್ರಾಸ್‌ನಲ್ಲಿರುವ ಕೃಷ್ಣ ಸ್ಟೋರ್ ಮುಂಭಾಗ ರಾಜೇಶ್ ಎಂಬುವರು ಬೈಕ್ ನಿಲ್ಲಿಸಿ ಕೆಲಸದ ನಿಮಿತ್ತ ಹೋಗಿದ್ದರು. ಸಂಜೆ ಬಂದು ನೋಡಿದಾಗ ಬೈಕ್ ಕಳ್ಳತನವಾಗಿದ್ದ ಬಗ್ಗೆ ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
Next Story





