ಟ್ರಂಪ್ ನೈತಿಕ ಸಿದ್ಧಾಂತ ಇಲ್ಲದ ಮನುಷ್ಯ: ದಲಾಯಿ ಲಾಮಾ

ಲಂಡನ್, ಜೂ. 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೈತಿಕ ಸಿದ್ಧಾಂತ ಹೊಂದಿರದ ಮನುಷ್ಯ ಎಂದು ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಹೇಳಿದ್ದಾರೆ.
ಬಿಬಿಸಿ ಟೆಲಿವಿಶನ್‌ನಲ್ಲಿ ಗುರುವಾರ ಪ್ರಸಾರಗೊಂಡ ಸಂದರ್ಶನವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟ್ರಂಪ್‌ರ ಭಾವನೆಗಳು ‘ಸ್ವಲ್ಪ ಸಂಕೀರ್ಣ’ವಾಗಿವೆ ಎಂಬುದಾಗಿಯೂ ಅವರು ಹೇಳಿದರು.
‘‘ಒಂದು ದಿನ ಅವರು ಒಂದು ರೀತಿ ಮಾತನಾಡುತ್ತಾರೆ. ಇನ್ನೊಂದು ದಿನ ಬೇರೆಯೇ ಮಾತನಾಡುತ್ತಾರೆ. ಇದಕ್ಕೆ ನೈತಿಕ ಸಿದ್ಧಾಂತ ಇರದಿರುವುದು ಕಾರಣ ಎಂದು ನನಗನಿಸುತ್ತದೆ’’ ಎಂದು 83 ವರ್ಷದ ಬೌದ್ಧ ಧರ್ಮಗುರು ಹೇಳಿದರು.
ಟ್ರಂಪ್‌ರ ‘ಅಮೆರಿಕ ಮೊದಲು’ ನೀತಿಯ ಬಗ್ಗೆಯೂ ಅವರು ತನ್ನ ಆಕ್ಷೇಪಗಳನ್ನು ವ್ಯಕ್ತಪಡಿಸಿದರು.
‘‘ಅವರು ಅಧ್ಯಕ್ಷರಾದಾಗ, ಅವರು ‘ಅಮೆರಿಕ ಮೊದಲು’ ಎಂದು ಹೇಳಿದರು. ಅದು ತಪ್ಪು’’ ಎಂದು ದಲಾಯಿ ಲಾಮ ಹೇಳಿದರು. ‘‘ಜಾಗತಿಕ ಜವಾಬ್ದಾರಿಯನ್ನು ಅಮೆರಿಕ ತೆಗೆದುಕೊಳ್ಳಬೇಕು’’ ಎಂದು ಅವರು ಅಭಿಪ್ರಾಯಪಟ್ಟರು.
Next Story





