ಮಹತ್ವದ ಪಂದ್ಯದಲ್ಲಿ ಮಂಕಾದ ಲಂಕಾ: ಹರಿಣ ಪಡೆಗೆ 9 ವಿಕೆಟ್ ಗಳ ಭರ್ಜರಿ ಜಯ

ಮಾಂಚೆಸ್ಟರ್, ಜೂ.28: ಶ್ರೀಲಂಕಾ ವಿರುದ್ಧ ವಿಶ್ವಕಪ್‌ನ 35ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಗೆಲುವಿಗೆ 204 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ಇನ್ನೂ 76 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್ ನಷ್ಟದಲ್ಲಿ 206 ರನ್ ಗಳಿಸುವ ಮೂಲಕ ಗೆಲುವು ದಾಖಲಿಸಿದೆ.
ಆಫ್ರಿಕ ತಂಡದ ನಾಯಕ ಎಫ್‌ಡು ಪ್ಲೆಸಿಸ್ ಔಟಾಗದೆ 96ರನ್ (103ಎ, 10ಬೌ, 1ಸಿ), ಹಾಶಿಂ ಅಮ್ಲ ಔಟಾಗದೆ 80 ರನ್(105ಎ, 5ಬೌ) ಮತ್ತು ಕ್ವಿಂಟನ್ ಡೆ ಕಾಕ್ 15 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಇದಕ್ಕೂ ಮೊದಲು ಶ್ರೀಲಂಕಾ 49.3 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟಾಗಿತ್ತು.
Next Story





