ಸಚಿವ ಡಿಕೆಶಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
ಐಟಿ ದಾಳಿ ವೇಳೆ ನಡೆದದ್ದೇನು ?

ಬೆಂಗಳೂರು, ಜೂ.28: ಐಟಿ ದಾಳಿ ನಡೆಸಿದ ವೇಳೆ ಪ್ರಮುಖ ದಾಖಲೆಗಳನ್ನು ಹರಿದು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಐಟಿ ಸಲ್ಲಿಸಿರುವ ಮೇಲ್ಮನವಿಗೆ ಉತ್ತರಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮರ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಜನಪ್ರತಿನಿಧಿಗಳ ಕೋರ್ಟ್ ಐಟಿ ದಾಖಲಿಸಿದ್ದ ಪ್ರಕರಣಗಳಿಂದ ಡಿಕೆಶಿಯನ್ನು ಮುಕ್ತಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಐಟಿ ಇಲಾಖೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಡಿಕೆಶಿಗೆ ನೋಟಿಸ್ ಜಾರಿಗೊಳಿಸಿ, ಉತ್ತರಿಸಲು ಸೂಚನೆ ನೀಡಿದೆ.
ಆ.2 ರಂದು ಡಿಕೆಶಿ ಒಡೆತನದ ಬಿಡದಿಯ ಈಗಲ್‌ಟನ್ ರೆಸಾರ್ಟ್ ಮೇಲೆ ಐಟಿ ದಾಳಿ ಆಗಿತ್ತು. ಈ ವೇಳೆ ಡಿಕೆಶಿ ಪ್ರಮುಖ ಕಾಗದ ಪತ್ರಗಳನ್ನು ಹರಿದು ಹಾಕಿದ್ದರು. ಈ ವೇಳೆ ದಾಖಲೆಗಳ ಸಾಕ್ಷ ನಾಶ ಮಾಡಿದ್ದರೆಂದು ಐಟಿ ತಂಡ ಆದಾಯ ತೆರಿಗೆ ಕಾಯ್ದೆಯಡಿ ದೂರು ದಾಖಲಿಸಿತ್ತು.
Next Story





