‘ ಶಿಕ್ಷಕರು ಗೈರು’ ಶಿಕ್ಷಾಣಾಧಿಕಾರಿಗೆ ತರಾಟೆಗೆ ತೆಗೆದುಕೊಂಡು ಶಾಸಕ ಸುನಿಲ್ ನಾಯ್ಕ
ಭಟ್ಕಳ: ಜೂ.28, ಕೆಲವು ಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಬರುತ್ತಿಲ್ಲಾ, ಇದರ ಬಗ್ಗೆ ನಿಮಗೆ ಈ ಹಿಂದೆ ಸಾಕಷ್ಟೂ ಭಾರಿ ತಿಳಿಸಿದ್ದೇನೆ ಪದೇ ಪದೇ ಅದೇ ಘಟನೆಯ ಬಗ್ಗೆ ನನಗೆ ದೂರುಗಳು ಬರುತ್ತಿದೆ, ಮಳೆಗಾಲ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದೆ ಕೆಲವು ಶಾಲೆಗಳಲ್ಲಿ ಮಕ್ಕಳು ನೀರಿನಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ, ಶೀಘ್ರದಲ್ಲೇ ಅಂತಹ ಶಾಲೆಗಳಿಗೆ ಭೇಟಿ ನೀಡಿ ಪರಿಹಾರ ಕೈಗೊಳ್ಳಿ ಎಂದು ಶಾಸಕ ಸುನಿಲ್ ನಾಯ್ಕ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಮುಂಜಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಇಲ್ಲಿನ ತಾ.ಪಂ ಸಭಾಭವನದಲ್ಲಿ ಜರಗಿದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ನಡೆಯಿತು.
ತಾಲೂಕಿನ ಬಸ್ ನಿಲ್ದಾಣ ಕುಸಿತಗೊಂಡು, ಹೊಸ ನಿಲ್ದಾಣದ ಕಾರ್ಯ ಶುರುವಾಗಿ ವರ್ಷ ಕಳೆಯಲು ಇನ್ನೂ ಒಂದು ತಿಂಗಳೇ ಭಾಕಿ ಇದ್ದರೂ ಪ್ರಯಾಣಿಕರಿಗೆ ಇನ್ನೂ ತನಕ ಬಿಸಿಲು-ಮಳೆಯಲ್ಲಿ ನಿಲ್ಲಲು ತಾತ್ಕಾಲಿಕ ತಂಗುದಾಣ ಮಾಡಿಕೊಡದ ಕೆ ಎಸ್ ಆರ್ ಟಿ ಸಿ ಇಲಾಖೆ ಭಟ್ಕಳದಲ್ಲಿ ಇದೆಯೋ, ಇಲ್ಲವೋ ಎನ್ನುವುದು ಅರ್ಥವಾಗುತ್ತಿಲ್ಲಾ... ಸಭೆಗೆ ಡಿಪೋ ಮ್ಯಾನೇಜರ್ ಅನುಪಸ್ಥಿತಿಯಲ್ಲಿ ಡಿಪೋ ಮೇಲ್ವಿಚಾರಕ ಹಾಜರಿದ್ದು, ನಿಮಗೆ ಸಂಪೂರ್ಣ ಮಾಹಿತಿ ಇದ್ದರೆ ಸಭೆಯಲ್ಲಿ ಇರಿ, ಇಲ್ಲದಿದ್ದರೆ ಹೊರಹೋಗಿ, ಇಂತಹ ಯೂಸ್ ಲೇಸ್ ಡಿಪೋ ಮ್ಯಾನೇಜರ್ ನಾನು ಯಾವತ್ತೂ ನೋಡಿಲ್ಲಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಎರಡು ಲಕ್ಷ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಅವರಿಗೆ ನಾನು ಉತ್ತರ ಕೊಡಬೇಕಾಗಿದೆ, ಬಸ್ ಡ್ರೈವರ್ ಹಾಗೂ ಕಂಡಕ್ಟರ ನೋಡಿಕೊಳ್ಳೊದು, ಬಸಗಳಿಗೆ ಡಿಸೇಲ ಹಾಕಿಸೋದು ನೋಡಿಕೊಂಡರೆ ಕೆಲಸ ಆಗಲಿಲ್ಲ , ಪ್ರವಾಸಿ ತಾಣ ಮುರ್ಡೇಶ್ವರದ ನಿಲ್ದಾಣದಲ್ಲಿನ ಸಮಸ್ಯೆ ಬಗ್ಗೆ ನಿಮಗೆ ಅನೇಕ ಭಾರಿ ದೂರು ಸಲ್ಲಿಸಿದ್ದರು ಅದನ್ನು ಪರಿಹರಿಸಿಲ್ಲ ಎಂದು ಇಲಾಖೆ ನೋಟಿಸ್ ನೀಡಲು ಶಾಸಕ ಸುನೀಲ ನಾಯ್ಕ ತಿಳಿಸಿದರು.
ತಾಲೂಕಾಸ್ಪತ್ರೆಯಲ್ಲಿ ಈಗಾಗಲೇ ನಾಲ್ಕು ಡಯಾಲಿಸಿಸ್ ಇದ್ದು ಒಬ್ಬರಿಗೆ ನಾಲ್ಕು ತಾಸು ಬೇಕಾಗುತ್ತದೆ, ಮೊದಲು ರೋಗಿಗಳು ಕಾಯುವ ಪರಿಸ್ಥಿತಿ ಇತ್ತು ಇವಾಗ ಡಯಾಲಿಸಿಸ್ ಅಲ್ಲಿ ಯಾವುದೇ ತೊಂದರೆ ಇಲ್ಲಾ, ಮೊದಲಿಗ್ಗಿಂತಲೂ ಹೋರ ರೋಗಿಗಳು 90 ಜನರಷ್ಟೂ ಬರುತ್ತಿದ್ದಾರೆ, ಕಳೆದ ತಿಂಗಳುಗಳಿಗ್ಗಿಂತ ಈ ತಿಂಗಳು ಅತೀ ಹೆಚ್ಚು ಹೆರಿಗೆಗಳು ನಮ್ಮಲ್ಲಿ ಆಗಿವೆ ಜನೌಷಧಿ ಉತ್ತಮ ಮಟ್ಟದ ಔಷಧೀಗಳು ಬರುತ್ತಿವೆ, ಆಯುಷ್ಮಾನ ಕಾರ್ಡಿನ ಬಗ್ಗೆ ಶಾಸಕ ಸುನೀಲ ನಾಯ್ಕ ವಿಷಯ ಪ್ರಸ್ತಾಪಿಸಿದಾಗ ಆಯುಷ್ಮನ ಕಾರ್ಡಿನ ಬಗ್ಗೆ ಇರುವ ಗೊಂದಲ ಗಳನ್ನು ತಾಲೂಕಾರೋಗ್ಯಾಧಿಕಾರಿ ಸವಿತಾ ಕಾಮತ್ ಹೆಚ್ಚಿನ ಮಾಹಿತಿಗಾಗಿ ನೋಂದಣಿ ಕೌಂಟರನಲ್ಲಿ ಬ್ಯಾನರ ಮಾಡಿ ಹಾಕುತ್ತೆವೆ ಎಂದರು.
ಮುಂಡಳ್ಳಿಯಲ್ಲಿ ನಾಯಿ ಕಡಿತದಿಂದ ಒರ್ವ ವೃದ್ದೆ ಸಾವನ್ನಪ್ಪಿದ್ದು, ಇಬ್ಬರೂ ಗಾಯಗೊಂಡಿರುವ ಘಟನೆ ಮತ್ತೆ ಸಭೆಯಲ್ಲಿ ಪ್ರತಿಧ್ವನಿಸಿತು.
ಗ್ರಾಮೀಣ ಪ್ರದೇಶಗಳಲ್ಲಿನ ಜಾನುವಾರುಗಳಿಗೆ ಏನಾದರೂ ಸಮಸ್ಯೆಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಲು ಸಾದ್ಯವಾಗು ವುದಿಲ್ಲ, ಆದ ಕಾರಣ ತಾವು ಒಂದು ಟ್ರೋಲ್ ಪ್ರೀ ನಂಬರ ಜಾರಿಗೆ ತಂದು ಸಮಸ್ಯೆ ಪರಿಹರಿಸಲು ಸಹಕರಿಸಿ ಎಂದು ಶಾಸಕ ಸುನೀಲ ನಾಯ್ಕ ತಿಳಿಸಿದರು.
ಈಗಾಗಲೇ ಕೃಷಿ ಚಟುವಟಿಕೆ ನಡೆಯುತ್ತಿದು, 1000ಕ್ಟೀಂಟಾಲ ಬಿಜವನ್ನು ಪ್ರತಿ ಕೆಜಿಗೆ ಎಂಟು ರೂಪಾಯಿಯಂತೆ ರೈತರಿಗೆ ನಿಡಲಾಗಿದೆ. ಬಿಜ ಬಿತ್ತನೆ ಕಾರ್ಯ ಶುರುವಾಗಿದ್ದು, ಕೆಲವು ಕಡೆ ನ್ಟಿ ಕಾರ್ಯ ಪ್ರಾರಂಭವಾಗಿದೆ ಎಂದರು.
ರೈತರಿಗೆ ಬೆಳೆ ಸಂರಕ್ಷಿಸಲು ನೀಡುವ ತಾಡಪತ್ರ ವಿಚಾರವಾಗಿ ಸಭೆಯಲ್ಲಿ ಗೊಂದಲವೇ ಉಂಟಾಗಿ, ಬಂದಂತಹ 430 ತಾಡಪತ್ರವನ್ನು ಯಾವ ರೈತನಿಗೆ ನೀಡಿದ್ದಿರಿ, ಆ ರೈತನ ಆರ್ ಟಿ ಸಿ ಜೊತೆಗೆ ಯಾವ ಜನಪ್ರತಿನಿಧಿ ಲೇಟರ ಮೂಲಕ ಕೊಟ್ಟಿದ್ದಿರಿ, ಅದರ ಸಂಪೂರ್ಣ ಮಾಹಿತಿಯ ಪಟ್ಟಿ 24ಘಂಟೆಯೊಳಗೆ ನನಗೆ ನೀಡಬೇಕು ಎಂದು ಕೃಷಿ ಅಧಿಕಾರಿಗೆ ಶಾಸಕ ಸುನೀಲ ನಾಯ್ಕ ಗಡುವು ನೀಡಿದರು.
ಉದ್ಘಾಟನೆ ಆಗಬೇಕಾಗಿದ್ದ ರೈತ ಸಂಪರ್ಕ ಇನ್ನೂ ಉದ್ಘಾಟನೆ ಆಗಿಲ್ಲಾ ಆದಷ್ಟೂ ಬೇಗಾ ಉದ್ಘಾಟನೆ ಮಾಡಿ ಇನ್ನೂ ವಿಳಂಬ ಮಾಡಬೇಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಆಗ್ರಹಿಸಿದರು.
ಜಿ.ಪಂ.ಅಧ್ಯಕ್ಷ ಜಯಶ್ರೀ ಮೊಗೇರ್, ತಾ.ಪಂ ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ಮೊಗೇರ್, ತಹಸಿಲ್ದಾರ್ ವಿ.ಎನ್.ಬಾಡ್ಕರ್, ತಾ.ಪಂ ಕಾರ್ಯನಿರ್ವಾಣಾಧಿಕಾರಿ ಪ್ರಭಾಕರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







