Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಅಸಹಾಯಕತೆ

ಅಸಹಾಯಕತೆ

ಅಂಬಿ ಎಸ್. ಹೈಯ್ಯಳ್, ಮುದನೂರಅಂಬಿ ಎಸ್. ಹೈಯ್ಯಳ್, ಮುದನೂರ29 Jun 2019 6:14 PM IST
share
ಅಸಹಾಯಕತೆ

ಅಂದು ನಾನು ಕೆಲಸದ ನಿಮಿತ್ತ ಬೆಳಗಾವಿಯ ಸಿಟಿ ಬಸ್ ಸ್ಟಾಂಡ್ ನಿಂದ ಇಪ್ಪತ್ತು ಕಿ.ಮೀ. ದೂರದ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯಕ್ಕೆ ಹೊರಟಿದ್ದೆ. ಬಸ್ ನಿಲ್ದಾಣ ಜನಜಂಗುಳಿಯಿಂದ ತುಂಬಿತ್ತು. ಬಸ್ಸು ಅದ್ಯಾವುದೇ ಮೂಲೆಯಲ್ಲಿ ಪ್ರಯಾಣಿಕರ ತುಂಬಿಕೊಂಡು ಬಸುರಿಯಂತೆ ನಿಂತಿತ್ತು. ನನಗೆ ಸೀಟ್ ಸಿಗುತ್ತೆ ಎನ್ನುವ ಯಾವ ಸಾಧ್ಯತೆಯೂ ಇರಲಿಲ್ಲ. ಹೀಗಿದ್ದರೂ ‘ಸೀಟ್ ಇವೆ ಬರ್ರಿ ಹತ್ರಿ’ ಎಂಬ ನಿರ್ವಾಹಕನ ಕೂಗು ಕಿವಿಗಪ್ಪಳಿಸಿತಿತ್ತು. ದೊಡ್ಡ ಗುಂಪೊಂದು ಬಸ್ಸು ಹತ್ತಲು ಬಾಗಿಲ ಬಳಿ ತುದಿಗಾಲಲ್ಲಿ ನಿಂತಿತ್ತು. ಇಳಿಯುವವರಿಗೆ ಅನುವು ಮಾಡಿಕೊಡದೇ ನುಗ್ಗಿಕೊಂಡೇ ಬಸ್ಸ್ಸು ಹತ್ತಲು ಶುರು ಮಾಡಿದರು. ಬಸ್ಸಿನ ತುಂಬಾ ಕಾಲೇಜು ವಿದ್ಯಾರ್ಥಿಗಳೇ... ಕಾಲಿಡುವುದಕ್ಕೂ ಸಂದಿರಲಿಲ್ಲ. ಅಂತಹ ನೂಕು ನೂಗ್ಗಲಿನಲ್ಲಿ ಹೇಗೊ ಅಷ್ಟು ಪ್ರಯಾಣಿಕರ ಮಧ್ಯೆ ನೂಕಿಕೊಂಡು ನಿಲ್ಲಲು ಜಾಗ ಮಾಡಿಕೊಂಡೆ. ಸೀಟು ಸಿಕ್ಕವರು ನಿಟ್ಟುಸಿರು ಬಿಟ್ಟು ಕುಳಿತರು. ಇದರ ಮಧ್ಯೆಯೆ ಅಜ್ಜನೊಬ್ಬ ಅದೇಗೆ ಬಸ್ಸನ್ನೇನೇರಿದನೋ ನನಗೆ ಆಶ್ಚರ್ಯವಾಯಿತು.ಬಿಳಿ ವರ್ಣದ ಪಂಚೆ ಗಾಂಧಿ ಟೋಪಿ ಧರಿಸಿದ್ದ ವಯಸ್ಸಾದ ಅಜ್ಜ ನೂಕುನುಗ್ಗಲಿನ ಮಧ್ಯೆ ಬಸ್ಸು ಹತ್ತಿ ನನ್ನ ಮುಂದೆ ಬಂದು ನಿಂತ. ದೇಹ ದಣಿದಂತಿತ್ತು. ಜೋರಾಗಿ ಉಸಿರು ಬಿಡುತ್ತಾ ನಿಂತ. ಅಜ್ಜನ ಸ್ಥಿತಿ ನೋಡಿ ಅಲ್ಲಿದ್ದವರು ಮರುಗಿದರಾದರೂ ಸೀಟು ಬಿಟ್ಟು ಕೊಡಲು ಯಾರೊಬ್ಬರೂ ಮುಂದಾಗಲಿಲ್ಲ. ನನಗೆ ಸೀಟು ಸಿಕ್ಕಿದ್ದರೆ ನಾನಾದರೂ ಅಜ್ಜನಿಗೆ ಸೀಟು ಬಿಟ್ಟು ಕೊಡಬಹುದಾಗಿತ್ತಲ್ಲ ಅನಿಸಿತು. ಆದರೆ ನನಗೆ ಊರು ಹೊಸದು. ಪರಿಚಯದವರಿದ್ದರೆ ವೃದ್ಧನಿಗೆ ಜಾಗಮಾಡಿ ಕೊಡಿ ಎನ್ನಬಹುದಿತ್ತು. ಮನದಲ್ಲೇ ಮಂಡಿ ತಿನ್ನುತಿದ್ದ ನಾನು ತೀರಾ ಅಸಹಾಯಕನಾಗಿದ್ದೆ. ಅಜ್ಜನಿಗೂ ನಿಲ್ಲಲು ಕಷ್ಟವಾಗಿದ್ದರೂ ಹೇಗೋ ಸಾವರಿಸಿಕೊಂಡು ನಿಂತಿದ್ದ. ಮೊದಲ ಸ್ಟಾಪ್ ಬಂದಾಗ ಕೆಲ ಪ್ರಯಾಣಿಕರು ಇಳಿದಿದ್ದರಿಂದ ನಾನು ಸ್ವಲ್ಪ ಅಲುಗಾಡುವುದಕ್ಕೆ ಅವಕಾಶವಾಯಿತು. ಆವಾಗ ಕಂಡಕ್ಟರ್ ‘ಟಿಕೆಟ್ ಟಿಕೆಟ್’ ಅಂತ ಹೇಗೊ ಆ ಗದ್ದಲದ ನಡುವೆ ತೂರಿಕೊಂಡು ಬಂದ. ಈ ಮೊದಲೇ ಉಸಿರಾಡುವುದಕ್ಕೂ ಜಾಗವಿರದ ಕಾರಣ ನಾನು ಟಿಕೆಟ್ ಪಡೆಯಲು ದುಡ್ಡು ಕೈಯಲ್ಲಿ ಹಿಡಿದುಕೊಂಡಿದ್ದೆ. ಹಾಗಾಗಿ ಟಿಕೆಟ್ ಪಡೆಯಲು ಅನುಕೂಲವಾಯಿತು. ಆದರೆ ನನ್ನ ಮುಂದೆ ನಿಂತಿದ್ದ ಅಜ್ಜ ಟಿಕೆಟ್ ಪಡೆಯಲು ಕಿಸೆಗೆ ಕೈ ಹಾಕಿ ತಡಕಾಡಿದ. ಜೇಬಿನೊಳಗಿಂದ ಕೈ ಹೊರಗೆ ಬಂತು. ಅಜ್ಜನ ಮೊಗದಲ್ಲಿ ಆತಂಕ. ಉಳಿದ ಜೇಬುಗಳನೆಲ್ಲಾ ಹುಡುಕಿದ ಆದರೆ ಒಂದು ರೂ. ಸಿಗಲಿಲ್ಲ. ಯಾರೊ ಕಿಸೆ ಎಗರಿಸಿದ್ದಾರೆಂದು ಖಾತ್ರಿಯಾಯಿತು. ಅಜ್ಜ ದಂಗಾಗಿ ಹೋದ ಮೈ ಬೆವರತೊಡಗಿತು. ಅವನ ಅದೃಷ್ಟಕ್ಕೆ ಮೇಲಿನ ಜೇಬಿನಲ್ಲಿ ಹೇಗೂ ಇಪ್ಪತ್ತು ರೂಪಾಯಿ ಇದ್ದುದರಿಂದ ಟಿಕೆಟ್ ಪಡೆದ. ಆದರೆ ಇನ್ನುಳಿದ ದುಡ್ಡಿನ ಬಗೆಗೆ ಅಜ್ಜನಿಗೆ ಚಿಂತೆ ಶುರುವಾಯಿತು. ಅಲ್ಲಿದ್ದ ಪ್ರಯಾಣಿಕರಿಗೆ ಅಜ್ಜ ವಿಚಾರಿಸ ತೊಡಗಿದ. ಅಲ್ಲಿದ್ದವರೆಲ್ಲರೂ ನಾವು ನೋಡಿಲ್ಲ ಗೊತ್ತಿಲ್ಲ ಅಂದರಷ್ಟೆ. ಅಷ್ಟು ಜನ ಪ್ರಯಾಣಿಕರಿರುವಾಗ ಯಾರನ್ನು ಕಳ್ಳನೆಂದು ನಂಬುವುದೆಂದು ಅಜ್ಜನಿಗೆ ತಿಳಿಯಲಿಲ್ಲ. ಅಲ್ಲಿದ್ದ ಸಹಪ್ರಯಾಣಿಕರೆಲ್ಲಾ ಪೊಲೀಸ್ ಸ್ಟೇಷನ್‌ಗೆ ಕಂಪ್ಲೇಟ್ ಕೊಡಿಯೆಂದು ಸಲಹೆ ನೀಡಿದರು. ಅಂತಹ ದೊಡ್ಡ ನಗರದಲ್ಲಿ ಸ್ಟೇಷನ್ ಎಲ್ಲಿ ಹುಡುಕಾಡುವುದು ದೂರು ಹೇಗೆ ಸಲ್ಲಿಸಬೇಕೆಂದು ತಿಳಿಯದೆ ಅಜ್ಜ ಆ ಪ್ರಯತ್ನಕ್ಕೆ ಮುಂದಾಗಲಿಲ್ಲ. ಅಜ್ಜನ ಸ್ಥಿತಿ ಕಂಡು ಮರುಗಿದರೇ ಹೊರತು ಅಲ್ಲಿದ್ದವರಾರು ಸಹಾಯ ಮಾಡದೆ ತಮ್ಮ ತಮ್ಮ ಕೆಲಸಕ್ಕೆ ಹೊರಟರು. ಮಧ್ಯಾಹ್ನದ ಬಿಸಿಲು ನೆತ್ತಿ ಸುಡುತಿತ್ತು. ಮುಂದೇನು ಮಾಡಬೇಕೆಂದು ತಿಳಿಯದೆ ಅತ್ತಿತ್ತ ನೋಡುತ್ತಾ ಕಂಗಾಲಾಗಿ ನಿಂತ. ಎಲ್ಲವು ಅಪರಿಚಿತವೆನಿಸಿತು ಅಜ್ಜನಿಗೆ. ಆಗ ಅಜ್ಜನೊಂದಿಗೆ ಮಾತಿಗಿಳಿದೆ... ಅಜ್ಜ ಪಕ್ಕದ ಪುಟ್ಟ ಹಳ್ಳಿಯಿಂದ ಬಂದಿದ್ದ. ಊರಿಗೆ ಹೊಸಬ. ಮಗಳ ಹೆರಿಗೆಯ ಸಲುವಾಗಿ ದುಡ್ಡಿನ ಅವಶ್ಯಕತೆಯಿತ್ತು. ಆ ಸಮಯಕ್ಕೆ ತನ್ನ ಬಳಿ ಹಣವಿರದಿದ್ದರಿಂದ ತನ್ನ ವಾರಗೆಯವರ ಬಳಿ ಕೈಗಡವಾಗಿ ಐದು ಸಾವಿರ ಸಾಲ ತಂದಿದ್ದ. ದವಾಖಾನೆಗೆ ಫೀಸು ತುಂಬುವ ಸಲುವಾಗಿ ಕೆಳ ಜೇಬಿನಲ್ಲಿ ಹಣ ಇಟ್ಟುಕೊಂಡಿದ್ದ. ವೃದ್ಧ್ದನ ಬಳಿ ಹಣವಿರುವುದನ್ನು ಕಳ್ಳರು ಖಚಿತಪಡಿಸಿಕೊಂಡಿದ್ದಾರೆ.ಹಾಗಾಗಿ ಅವರೂ ಬಸ್ಸನ್ನೆರಿದ್ದಾರೆ. ಬಸ್ಸು ರಶ್ ಇದ್ದುದರಿಂದ ಆ ಸಮಯವನ್ನೇ ಸದುಪಯೋಗಪಡಿಸಿಕೊಂಡ ಕಳ್ಳರು ಅಜ್ಜನಿಗೆ ಹತ್ತಿರ ನಿಂತು ಯಾರಿಗೂ ಗೊತ್ತಾಗದ ಹಾಗೆ ಹರಿತವಾದ ಚಾಕುವಿನಿಂದ ಜೇಬು ಕತ್ತರಿಸಿ ಹಣ ಲಪಟಾಯಿಸಿ ಮೊದಲ ಸ್ಟಾಪ್ ಬಂದಾಗ ಬಸ್ಸಿನಿಂದ ಇಳಿದು ಪರಾರಿಯಾಗಿದ್ದರು.ಆ ಗದ್ದಲದಲ್ಲಿ ಇದ್ಯಾವುದು ಅಜ್ಜನ ಗಮನಕ್ಕೆ ಬಂದಿಲ್ಲ. ನಂತರ ಟಿಕೆಟ್ ಪಡೆದುಕೊಳ್ಳಲು ಜೇಬಿಗೆ ಕೈ ಹಾಕಿದಾಗ ಹಣ ಕಳುವಾಗಿರುವ ವಿಷಯ ಗೊತ್ತಾಗಿದೆ. ಕಳ್ಳರನ್ನು ಮನದಲ್ಲೆ ಶಪಿಸತೊಡಗಿದ. ಹಿಡಿಶಾಪ ಹಾಕಿದ. ಆ ಕ್ಷಣದಲ್ಲಿ ಅಜ್ಜನ ಮೊಗದಲ್ಲಿ ಅಸಹಾಯಕತೆ ಎದ್ದು ಕಾಣತೊಡಗಿತು. ನಗರ ಬದುಕಿನ ವಾಸ್ತವ ಚಿತ್ರಣ ಕಂಡು ಬೇಸರಗೊಂಡ. ಅಜ್ಜನ ಸ್ಥಿತಿ ನೋಡಿ ನನ್ನ ಕಣ್ಣಲ್ಲಿ ನೀರು ಜೀನುಗಿತು. ನಾನು ತಿರುಗಿ ನೋಡುವಷ್ಟರಲ್ಲೇ ದಿಗಂತದಲ್ಲಿ ಅಜ್ಜ ಮರೆಯಾಗಿದ್ದ.

share
ಅಂಬಿ ಎಸ್. ಹೈಯ್ಯಳ್, ಮುದನೂರ
ಅಂಬಿ ಎಸ್. ಹೈಯ್ಯಳ್, ಮುದನೂರ
Next Story
X