ವಿಶ್ವಕಪ್: ಪಾಕ್ ಗೆಲುವಿಗೆ 228 ರನ್ ಗುರಿ ನೀಡಿದ ಅಫ್ಘಾನಿಸ್ತಾನ

ಲೀಡ್ಸ್, ಜೂ.29: ಪಾಕಿಸ್ತಾನ ವಿರುದ್ಧ ಶನಿವಾರ ನಡೆದ ವಿಶ್ವಕಪ್‌ನ 36ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು.
ಟಾಸ್ ಜಯಿಸಿದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಅಫ್ಘಾನ್ ಪರ ಅಸ್ಗರ್ ಅಫ್ಘಾನ್(42) ಹಾಗೂ ನಜೀಬುಲ್ಲಾ ಝದ್ರಾನ್(42) ತಲಾ 42 ರನ್ ಗಳಿಸಿ ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು.
ರಹ್ಮತ್ ಶಾ(35) ನಿಕ್ರಂ ಅಲಿ(24) ಹಾಗೂ ಸಮೀವುಲ್ಲಾ ಶಿನ್ವಾರಿ(ಔಟಾಗದೆ 19) ಎರಡಂಕೆಯ ಸ್ಕೋರ್ ಗಳಿಸಿದರು.
ಪಾಕ್ ಪರವಾಗಿ ಶಾಹೀನ್ ಶಾ ಅಫ್ರಿದಿ(4-47) ಯಶಸ್ವಿ ಬೌಲರ್ ಎನಿಸಿಕೊಂಡರು. ಇಮಾದ್ ವಸೀಂ(2-48) ಹಾಗೂ ವಹಾಬ್ ರಿಯಾಝ್(2-29) ತಲಾ 2 ವಿಕೆಟ್ ಪಡೆದರು.
Next Story





