ರಶ್ಯ ಕ್ಷಿಪಣಿ ಒಪ್ಪಂದ ತ್ಯಜಿಸಲು ಟರ್ಕಿಗೆ ಅಮೆರಿಕ ಗಡುವು

ಒಸಾಕ, ಜೂ. 29: ರಶ್ಯದ ಕ್ಷಿಪಣಿಗಳನ್ನು ಟರ್ಕಿ ಖರೀದಿಸುವುದು ‘ಸಮಸ್ಯೆಗೆ ಕಾರಣವಾಗಿದೆ’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಶನಿವಾರ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಜೊತೆ ನಡೆಸಿದ ಮಾತುಕತೆಯ ವೇಳೆ ಟ್ರಂಪ್ ಈ ಮಾತುಗಳನ್ನು ಹೇಳಿದರು.
ರಶ್ಯದ ಎಸ್-400 ಕ್ಷಿಪಣಿಗಳನ್ನು ಟರ್ಕಿ ಖರೀದಿಸುವುದನ್ನು ತಾನು ವಿರೋಧಿಸುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ ಹಾಗೂ ಒಪ್ಪಂದವನ್ನು ತ್ಯಜಿಸಲು ಟರ್ಕಿಗೆ ಜುಲೈ 31ರ ಗಡುವು ನೀಡಿದೆ. ಟರ್ಕಿಯು ಕ್ಷಿಪಣಿಗಾಗಿ ರಶ್ಯ ಜೊತೆ ಮಾಡಿಕೊಂಡಿರುವ ಒಪ್ಪಂದವು, ಅದು ಅಮೆರಿಕ ಜೊತೆ ಎಫ್-35 ಯುದ್ಧವಿಮಾನಗಳ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಡಿಕೊಂಡಿರುವ ಒಪ್ಪಂದಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅಮೆರಿಕ ಹೇಳಿದೆ.
Next Story





