ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಉಡುಪಿ, ಜೂ.29: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮತೀಯ ಅಲಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್‌ರು ಮತ್ತು ಪಾರ್ಸಿ ಜನಾಂಗದವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ಧಿಗಾಗಿ ಅನುಷ್ಟಾನಗೊಳಿಸುತ್ತಿರುವ ರಾಜ್ಯ ಸರಕಾರದ ಪ್ರಾಯೋ ಜಿತ ಯೋಜನೆಗಳಡಿ 2019-20ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ವೆಬ್ ಪೇಜ್ kmdc.kar.nic.in/loan ಇದರಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ಸ್ವಯಂ ಉದ್ಯೋಗ ಯೋಜನೆ, ಶ್ರಮಶಕ್ತಿ ಯೋಜನೆ, ಕಿರುಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಕೃಷಿಭೂಮಿ ಖರೀದಿ ಯೋಜನೆ, ಗೃಹ ನಿರ್ಮಾಣ ಮಾರ್ಜಿನ್ ಹಣ ಸಾಲ ಯೋಜನೆ, ವೃತ್ತಿ ಪ್ರೊತ್ಸಾಹ ಯೋಜನೆ, ಪಶು ಸಂಗೋಪನಾ ಯೋಜನೆ, ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ, ಪ್ರವಾಸಿ ಸ್ವಯಂ ಉದ್ಯೋಗ ಯೋಜನೆ(ಕೇರಳ ಮಾದರಿ), ಅಲ್ಪಸಂಖ್ಯಾತ ರೈತರ ಕಲ್ಯಾಣ ಯೋಜನೆ, ಮನೆ-ಮಳಿಗೆ ಯೋಜನೆ, ಆಟೋಮೊಬೈಲ್ ಸರ್ವಿಸ್ ಯೋಜನೆಗಳಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
2018-19 ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆಯಲಾಗದಿರುವ ಅರ್ಜಿದಾರರು 2019-20 ನೇ ಸಾಲಿನಲ್ಲಿ ಪುನಃ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ನಿಗಮದ ಯೋಜನೆಗಳಲ್ಲಿ ಸಾಲ ಸೌಲ್ಯ ಪಡೆಯಲಿಚ್ಛಿಸುವವರು ಕರ್ನಾಟಕ ರಾಜ್ಯದಲ್ಲಿ ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ 81,000 ರೂ. ಮತ್ತು ನಗರ ಪ್ರದೇಶದವರಿಗೆ 1,03,000 ರೂ. ಮೀರಿರಬಾರದು.
ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ, ಪ್ರವಾಸೀ ಸ್ವಯಂ ಉದ್ಯೋಗ ಯೋಜನೆ(ಕೇರಳ ಮಾದರಿ) ಯೋಜನೆಯಡಿ ಆದಾಯ 4,50,000 ರೂ. ಮಿತಿ ಇರುತ್ತದೆ. ಅರ್ಜಿದಾರರ ವಯಸ್ಸು ಕನಿಷ್ಟ 18 ವರ್ಷಗಳು ಮತ್ತು ಗರಿಷ್ಟ 55 ವರ್ಷಗಳಾಗಿರಬೇಕು. ಪಶು ಸಂಗೋಪನಾ ಯೋಜನೆ, ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ, ಪ್ರವಾಸೀ ಸ್ವಯಂ ಉದ್ಯೋಗ ಯೋಜನೆ(ಕೇರಳ ಮಾದರಿ), ವೃತ್ತಿ ಪ್ರೋತ್ಸಾಹ ಯೋಜನೆ, ಕೃಷಿ ಯಂತ್ರೋಪಕರಣ ಖರೀದಿ ಯೋಜನೆ, ಆಟೋ ಮೊಬೈಲ್ ಸರ್ವಿಸ್ ತರಬೇತಿ ಯೋಜನೆ, ಮನೆ-ಮಳಿಗೆ ಯೋಜನೆಯಡಿ ಅರ್ಜಿದಾರರ ವಯಸ್ಸು 18ರಿಂದ 45 ವರ್ಷಗಳಾಗಿರಬೇಕು.
ಅರ್ಜಿದಾರರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ವಾಸದ ದೃಢೀಕರಣಕ್ಕಾಗಿ ಪಡಿತರ ಚೀಟಿಯನ್ನು ಹೊಂದಿರಬೇಕು. ನಿಗಮದ ಇತರ ಯೋಜನೆಗಳಡಿಯಲ್ಲಿ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ನಿಗಮದಿಂದ ಈಗಾಗಲೇ ಸಾಲ ಸೌಲಭ್ಯ ಪಡೆದಿರಬಾರದು. ಅರ್ಜಿದಾರರು ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು.
ಅರ್ಜಿದಾರರು ಆನ್‌ಲೈನ್ ಅರ್ಜಿಯ ಹಾರ್ಡ್ ಕಾಪಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಎ ಬ್ಲಾಕ್ 1ನೇ ಮಹಡಿ, ಕೊಠಡಿ ಸಂಖ್ಯೆ ಎ207, ರಜತಾದ್ರಿ ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ, ಉಡುಪಿ ಕಛೇರಿಗೆ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.







