ಅಮ್ಟಾಡಿ ಗ್ರಾಪಂನಲ್ಲಿ ಶಾಸಕರ ಗ್ರಾಮ ಸ್ಪಂದನ ಕಾರ್ಯಕ್ರಮ

ಬಂಟ್ವಾಳ, ಜೂ. 29: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ "ಗ್ರಾಮದ ಕಡೆ ಶಾಸಕರ ನಡೆ" ಗ್ರಾಮ ಸ್ಪಂದನ ಕಾರ್ಯಕ್ರಮ ಶುಕ್ರವಾರ ಅಮ್ಟಾಡಿ ಗ್ರಾಪಂನಲ್ಲಿ ನಡೆಯಿತು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದ ಶಾಸಕರು, ಸರಕಾರದ ಯೋಜನೆ ಪ್ರತಿಯೋಬ್ಬರಿಗೂ ತಲುಪಬೇಕು ಮತ್ತು ಜನರಿಗೆ ಯೋಜನೆಗಳ ಮಾಹಿತಿ ಸಿಗಬೇಕು ಎಂದು ಒತ್ತುನೀಡಿ ಅಧಿಕಾರಿಗಳ ಜೊತೆ ನಿಮ್ಮ ಬಳಿ ಬಂದಿದ್ದೇನೆ. ಗ್ರಾಮಮಟ್ಟದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಂಚಾಯತ್ ಅನುದಾನದಲ್ಲಿ ಕುರಿಯಾಳ ಕುಟಿಲ ನಿವಾಸಿ ವಿಕಲಾಂಗೆ ಭವಾನಿ ಅವರಿಗೆ ವೀಲ್ ಚೇರ್‍ನ್ನು ಶಾಸಕರು ನೀಡಿದರು. ಅಮ್ಟಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಡೆದ ಕಾಮಗಾರಿಗಳ ವೀಕ್ಷಣೆ ನಡೆಸಿದ ಬಳಿಕ, ರಸ್ತೆಗಳ ಉದ್ಘಾಟನೆ ಮಾಡಲಾಯಿತು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ತಾಪಂ ಸದಸ್ಯೆ ಮಲ್ಲಿಕಾ ವಿ.ಶೆಟ್ಟಿ, ಉಪಾಧ್ಯಕ್ಷ ಯಶೋಧ, ಗ್ರಾಪಂ ಸದಸ್ಯರಾದ ಶೇಖರ್ ಶೆಟ್ಟಿ, ಬಬಿತಾ ಕೋಟ್ಯಾನ್, ಚೇತನಾ, ಪೂರ್ಣಿಮಾ, ಶ್ರೀಮತಿ ಶೆಟ್ಟಿ, ಐರಿನ್ ಡಿಸೋಜ, ಮೋಹಿನಿ, ವಿಶ್ವನಾಥ, ದೇವದಾಸ್, ಚಂದ್ರಾವತಿ ನಾಯ್ಕ, ಸುನಿಲ್ ಕೆ., ಸುರೇಂದ್ರ, ಸುಧಾಕರ ಶೆಟ್ಟಿ, ರತಿ ಭಂಡಾರಿ, ಪಿಡಿಒ ಮುಹಮ್ಮದ್, ಕಂದಾಯ ಅಧಿಕಾರಿ ನವೀನ್, ಗ್ರಾಮ ಕರಣೀಕರಾದ ಶಶಿ ಕುಮಾರ್, ಅಮೃತಾಂಶಿ, ಸಿಡಿಪಿಒ ಗಾಯತ್ರಿ ಬಾಯಿ, ಪಂ.ಕಾರ್ಯದರ್ಶಿ ಲಕ್ಮೀನಾರಾಯಣ ಕೆ.
ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ರಾಮ್‍ದಾಸ ಬಂಟ್ವಾಳ, ಶ್ರೀಕಾಂತ ಶೆಟ್ಟಿ ಸಜೀಪ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಪುರುಷೋತ್ತಮ ವಾಮದಪದವು, ನಂದರಾಮ್ ರೈ, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ ಬಜ, ಗಣೇಶ್ ರೈ ಮಾಣಿ, ಮತ್ತಿತರರು ಉಪಸ್ಥಿತರಿದ್ದರು.
ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಸ್ವಾಗತಿಸಿ, ಪಿಡಿಒ ಮುಹಮ್ಮದ್ ವಂದಿಸಿ, ನಿರೂಪಿಸಿದರು






.jpg)
.jpg)

