ಕೊಡಲಿಯಿಂದ ಅಣ್ಣನನ್ನು ಕೊಚ್ಚಿ ಕೊಲೆಗೈದ ತಮ್ಮ

ಹರಪನಹಳ್ಳಿ, ಜೂ.30: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅಣ್ಣನನ್ನು ತಮ್ಮನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ತಾಲೂಕಿನ ಎರಡೆತ್ತಿನಹಳ್ಳಿ ಶನಿವಾರ ನಡೆದಿದೆ.
ಹಾಲೇಶ್ (35) ಮೃತಪಟ್ಟ ವ್ಯಕ್ತಿ. ಬೆಳಗ್ಗೆ 6 ಗಂಟೆಯ ವೇಳೆಗೆ ಘಟನೆ ನಡೆಸಿದ್ದು, ತನ್ನ ಮನೆಯಲ್ಲಿ ಮಲಗಿದ್ದ ಹಾಲೇಶ್ ನನ್ನು ಪಕ್ಕದ ಮನೆಯಲ್ಲಿದ್ದ ಹೊನ್ನಪ್ಪ ಬಂದು ಕೊಡಲಿಯಿಂದ ಹೊಡೆದು ಕೊಲೆಗೈದಿದ್ದಾನೆ. ಆಸ್ತಿ ಮತ್ತು ಸಾಲ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಹಾಲೇಶ್ ಪತ್ನಿ ಕವಿತಾ ಹರಪನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಹೊನ್ನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
Next Story





