Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ನನ್ನ ಧರ್ಮ ಎಂಬ ಪ್ರವೃತ್ತಿ ಬೇಸರದ...

ನನ್ನ ಧರ್ಮ ಎಂಬ ಪ್ರವೃತ್ತಿ ಬೇಸರದ ಸಂಗತಿ: ಮೂಡ್ನಾಕೂಡು ಚಿನ್ನಸ್ವಾಮಿ

ವಾರ್ತಾಭಾರತಿವಾರ್ತಾಭಾರತಿ30 Jun 2019 8:21 PM IST
share
ನನ್ನ ಧರ್ಮ ಎಂಬ ಪ್ರವೃತ್ತಿ ಬೇಸರದ ಸಂಗತಿ: ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು, ಜೂ.30: ಇದು ನನ್ನ ಧರ್ಮ, ಇಲ್ಲಿ ನಾನು ಮಾತ್ರ ಇರಬೇಕು ಎಂದು ಹೇಳುವ ಪ್ರವೃತ್ತಿಯನ್ನು ಕಂಡಾಗ ತುಂಬಾ ಬೇಸರವಾಗುತ್ತದೆ ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ವಿಷಾದಿಸಿದರು.

ರವಿವಾರ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಗೋಮಿನಿ ಹಾಗೂ ನಿವೇದಿತಾ ಪ್ರಕಾಶನ ಆಯೋಜಿಸಿದ್ದ ವಾಸುದೇವ ನಾಡಿಗ್‌ರ ‘ಕವನ ಸಂಕಲನ- ಅವನ ಕರವಸ್ತ್ರ, ಕಥಾ ಸಂಕಲನ- ಅನುಕ್ತ’ ಹಾಗೂ ಎ.ಆರ್.ಶುಭಾರ ‘ಕವನ ಸಂಕಲನ- ತುಟಿ ಬೇಲಿ ದಾಟಿದ ನಗು, ಕಥಾ ಸಂಕಲನ- ತುಂಡು ಭೂಮಿ ತುಣಿಕು ಆಕಾಶ’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಇತ್ತೀಚಿಗೆ ಸಮಾಜದಲ್ಲಿ ಇದು ನನ್ನದು, ನಾನೊಬ್ಬನೇ ಇಲ್ಲಿ ಬದುಕಬೇಕು ಎಂಬ ಕೌರ್ಯದ ಮನೋಭವ ಬೆಳೆಯುತ್ತಿರುವುದು ದೊಡ್ಡ ದುರಂತವಾಗಿದೆ. ಎರಡು ತಿಂಗಳ ಮಗುವನ್ನು ಅತ್ಯಾಚಾರ ಮಾಡಿರುವುದನ್ನು ನೋಡಿದಾಗ ಇದು ಸಮಾಜನಾ, ಇವರು ಮನುಷ್ಯರಾ ಎಂಬ ಭಾವನೆ ಮೂಡುತ್ತದೆ. ಹೀಗಾಗಿ ಇಂತಹ ಕ್ರೌರ್ಯವನ್ನು ಕಾವ್ಯ ಹೋಗಲಾಡಿಸಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಕವಿತೆ ಬರೆಯುವುದರಿಂದ ಸಮಾಜಕ್ಕೆ ಏನು ಸಿಗುತ್ತದೆ ಎಂಬುದನ್ನು ಕವಿ ಅರಿತಿರಬೇಕು. ಕಾವ್ಯ ವೃದ್ಧಿ ನಮ್ಮ ದೇಶದಲ್ಲಿ ಸಂಪದ್ಭರಿತವಾಗಿದೆ. ಆದರೆ ಸಮಾಜಕ್ಕೆ ಕಾವ್ಯದ ಪ್ರಯೋಜನ ದೊರೆಯುತ್ತಿಲ್ಲ. ಕವಿತೆಗೆ ಒಣ ವೈಚಾರಿಕತೆ ಇರಬಾರದು. ಸೂಕ್ಷ್ಮ ವಸ್ತುಗಳ ಆಯ್ಕೆ, ಭಾಷೆ ಹಿಡಿತ, ರೂಪಕಗಳ ಚೌಕಟ್ಟು ಕವಿತೆಗೆ ಇರಬೇಕು. ಇವೆಲ್ಲ ಅಂಶಗಳು ಒಂದು ಕವಿತೆಯಲೇ ಇರಬೇಕೆಂದೇನೂ ಇಲ್ಲ ಎಂದು ಅಭಿಪ್ರಾ ಯಪಟ್ಟರು.

ಸಾಮಾನ್ಯರು ಕಾಣದೆ ಇರುವುದನ್ನು ಕವಿ ಕಾಣುತ್ತಾನೆ. ಕಂಡದನ್ನು ಹೇಳುವ ಪ್ರಕ್ರಿಯೆಯೇ ಕವಿಯ ಕಾವ್ಯದ ಗುಣವಾಗಿದೆ. ಕಾವ್ಯ ಹುಟ್ಟುದಕ್ಕೆ ಕಾರಣ ಕವಿಯ ಅತೃಪ್ತಿ ಹಾಗೂ ಹಸಿವು. ಜತೆಗೆ ಕಾವ್ಯದ ಹುಟ್ಟು ಸತ್ಯ ಮತ್ತು ಸೌದರ್ಯದ ಅಭಿವ್ಯಕ್ತಿಯಾಗಿದೆ. ಅಲ್ಲದೆ ಆತ್ಮಾನು ಸಂಧಾನವಿಲ್ಲದೆ ಕವಿತೆ ಹುಟ್ಟುವುದಿಲ್ಲ. ಕವಿತೆ ಉದ್ಭವಿಸುವುದು ಮೊದಲು ಓಳ್ಳೆಯ ಓದುಗನಲ್ಲಿ. ಕವಿತೆ ಹೇಗಿರಬೇಕೆಂದರೆ ಕವಿಯನ್ನು ಗುರುತಿಸುವಂತೆ ಇರಬೇಕು ಎಂದು ತಿಳಿಸಿದರು.

30 ವರ್ಷಗಳ ಹಿಂದೆ ಯಾವ ಕವಿಗೋಷ್ಠಿ ನಡೆದರೂ ಹೋಗುತ್ತಿದೆ. ಆಗ ಪ್ರಚಾರವೇ ಹೆಚ್ಚು ಸಿಗುತ್ತಿರಲಿಲ್ಲ. ಏಕೆಂದರೆ ಈಗಿನ ರೀತಿ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಈಗ ಎಲ್ಲ ಕವಿಗೋಷ್ಠಿಗಳ ವಿಚಾರ, ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದು ಓಳ್ಳ್ಳೆಯ ಬೆಳವಣಿಗೆ ಇರಬಹುದು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಕವಿತೆಗಳನ್ನು ಕೆಲವರು ವೈಭವಿಕರಿಸಿ ಟೊಳ್ಳಿದರೂ ಹೊಗಳುತ್ತಾರೆ. ಇದರಿಂದಾಗಿ ನಮ್ಮಂತ ಕವಿಗಳಿಗೆ ಅವಮಾನ ಎಂದು ಬೇಸರ ವ್ಯಕ್ತಪಡಿಸಿದರು.

ತುಟಿ ಬೇಲಿ ದಾಟಿದ ನಗು ಕವನ ಸಂಕಲನದಲ್ಲಿ ಅದ್ಭುತವಾದ ಕವಿತೆಗಳಿವೆ. ಶುಭಾರವರು ಉತ್ತಮ ಕವಿಯತ್ರಿಯೂ ಹೌದು. ಇವತ್ತಿನ ಕವಿತೆಗಳು ಹೇಗೆ ಇರಬೇಕು ಎಂದು ತಿಳಿಯಬೇಕಾದರೆ ಶುಭಾರ ಮೊದಲ ಸಂಕಲನವನ್ನು ಓದಿದರೆ ಸಾಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಜಿ.ಕೆ.ರವೀಂದ್ರ ಕುಮಾರ್ ಮಾತನಾಡಿ, ಸೃಷ್ಠಿ ವಿನ್ಯಾಸ ಹಾಗೂ ಜೀವಿ ವಿನ್ಯಾಸವನ್ನು ಹೇಳುತ್ತಲೇ, ಕಾವ್ಯದ ವಿಕಾಸವನ್ನು ವಾಸುದೇವ್ ನಾಡಿಗ್ ‘ಅವನ ಕರವಸ್ತ್ರ’ ಕವನ ಸಂಕಲನದಲ್ಲಿ ತಿಳಿಸಿದ್ದಾರೆ. ಅವರು ವಸ್ತು ವಿಷಯವನ್ನು ವಿಶಿಷ್ಟವಾಗಿ ವರ್ಣಿಸಿದ್ದು, ಇಡೀ ಕವನ ಸಂಕಲನದಲ್ಲಿ ಒಂದು ಸರಳವಾದ ಹಾಗೂ ಗಹನವಾದ ಅಂಶಗಳನ್ನು ಪೋಣಿಸಿದ್ದಾರೆ. ಕವಿತೆಯನ್ನು ಕಟ್ಟುವಾಗ ಜನ ಸಾಮಾನ್ಯರ ಆಡು ಭಾಷೆಯನ್ನೇ ಬಳಸಿರುವುದು ವಿಶೇಷ. ನಮ್ಮ ಸಮಕಾಲೀನ ಸವಾಲುಗಳನ್ನು ಕವಿತೆಗಳ ಮೂಲಕ ಹೇಗೆ ಎದುರಿಸಬೇಕೆಂದು ನಾಡಿಗ್‌ಗೆ ಗೊತ್ತಿದೆ. ಆದರೆ ಅವರಿಗೆ ಆಸಕ್ತಿಯಿಲ್ಲವೇನೊ ಎನ್ನುವ ಪ್ರಶ್ನೆ ಮೂಡುತ್ತದೆ ಎಂದರು.

ಅನುವಾದಕ ಡಾ.ಟಿ.ಎನ್.ವಾಸುದೇವಮೂರ್ತಿ ಮಾತನಾಡಿ, ಸಮಗ್ರ ಕಾವ್ಯ ಹೊರಬರುತ್ತಿದೆ ಎಂದರೆ ಸಾಮಾನ್ಯವಾಗಿ ಆ ಕವಿಯ ಕಾವ್ಯದ ನಿವೃತ್ತಿಯಾಗುತ್ತಿದೆ ಎಂಬುದು ಸಾಮಾನ್ಯ. ಕವಿಯ ಯಾವ ಕಾವ್ಯವೂ ಸಂಪೂರ್ಣ ಆಗಿರುವುದಿಲ್ಲ. ನಂತರ ದಿನಗಳಲ್ಲಿ ಪೂರ್ಣಗೊಳಿಸಲು ಕವಿ ಅಣಿಗೊಳ್ಳುತ್ತಾನೆ. ಇದು ಕೊನೆಗೆ ಕಾವ್ಯದ ಪಯಣವಾಗುತ್ತದೆ. ಹೀಗಾಗಿ ಯಾವುದೋ ಹಂತದಲ್ಲಿ ಪಯಣದ ದಾರಿ ಇಷ್ಟೇ ಸಾಕು ಎಂದು ಕವಿ ಮೌನವಾಗುತ್ತಾನೆ ಎಂದು ಹೇಳಿದರು.

ಅನೇಕ ಪುಸ್ತಕದ ಅಂಗಡಿಗಳನ್ನು ಭೇಟಿಯಾಗಿ ತಿಳಿದಿದ್ದೇನೆ. ಕವನ ಸಂಕಲನಗಳು ಮಾರಾಟವಾಗಿರುವುದಿಲ್ಲ. ಆದರೆ ನಾಡಿಗರ ಕವನ ಸಂಕಲನಗಳು ಅಧಿಕ ಮಟ್ಟದಲ್ಲಿ ಮಾರಾಟ ಆಗಿರುವುದನ್ನು ಕಂಡಾಗ ಕನ್ನಡದ ಓದುಗರಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದರು.

ದಿನೇ ದಿನೇ ದತ್ತಿ ಪ್ರಶಸ್ತಿಗಳು ಅಧಿಕಗೊಳ್ಳುತ್ತಿದ್ದು, ಎಲ್ಲರನ್ನೂ ಕವಿಗಳೆಂದು ಪರಿಗಣಿಸಿ ಪುರಸ್ಕಾರ ನೀಡುತ್ತಿರುವುದು ಸರಿಯಾದ ಮಾರ್ಗವಲ್ಲ. ಇದರಿಂದಾಗಿ ಕವಿಗಳು ಜಾಸ್ತಿಯಾಗಿದ್ದಾರೆ. ಕವಿತೆಗಳ ಗುಣಮಟ್ಟ ಕಡಿಮೆಯಾಗಿದೆ.

-ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಾಹಿತಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X