ಆಟೊ ಕಳವು ಪ್ರಕರಣ: ಆರೋಪಿ ಬಂಧನ

ಬೆಂಗಳೂರು, ಜೂ.30: ಆಟೊ ರಿಕ್ಷಾ ಕಳವು ಪ್ರಕರಣ ಸಂಬಂಧ ವ್ಯಕ್ತಿಯೊರ್ವನನ್ನು ಇಲ್ಲಿನ ಚಾಮರಾಜಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿ ಚಂದ್ರು ಯಾನೆ ಚಂದ್ರಶೇಖರ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಮನೆಗಳ ಬಳಿ ನಿಲ್ಲಿಸಿದ ಆಟೊ ರಿಕ್ಷಾಗಳನ್ನು ಗುರಿಯಾಗಿಸಿಕೊಂಡು ನಕಲಿ ಕೀ ಬಳಸಿ ಆಟೊ ಕಳವು ಮಾಡುತ್ತಿದ್ದ ಸಂಬಂಧ ದೂರು ದಾಖಲಿಸಿಕೊಂಡಿದ್ದ ಚಾಮರಾಜಪೇಟೆ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ಚಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತನಿಂ 6 ಆಟೊ ರಿಕ್ಷಾಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.
Next Story





