ಶರಣರ ಸಾಹಿತ್ಯ ಉತ್ತಮ ಸಂದೇಶವುಳ್ಳ ವಾಣಿಗಳು: ನಿವೃತ್ತ ಐಎಎಸ್ ಅಧಿಕಾರಿ ಡಾ.ಡಿ.ಸೋಮಶೇಖರ್

ಬೆಂಗಳೂರು, ಜೂ. 30: ಬಸವಾದಿ ಶರಣರ ವಚನ, ದಾಸ ಸಾಹಿತ್ಯದ ವಚನಗಳು ಸಮಾಜಕ್ಕೆ ಮಾನವೀಯ ಮೌಲ್ಯಗಳ ಉತ್ತಮ ಸಂದೇಶ ನೀಡುವ ವಾಣಿಗಳಾಗಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ. ಡಿ. ಸೋಮಶೇಖರ ಹೇಳಿದ್ದಾರೆ.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚಿನ್ಮಯಿ ಸಂಗೀತ ಶಾಲೆ, ಕಸ್ತೂರಿ ಕನ್ನಡ ಬಳಗ ಹಾಗೂ ಐಸಿರಿ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ದಾಸ ಸಾಹಿತ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶರವೇಗದಲ್ಲಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ನಡುವೆಯೂ ಜ್ಞಾನದ ದಾಸೋಹ ನೀಡುವ ಈ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿವೆ ಎಂದರು.
ಜೀವನದ ಸಂಪದ್ಬರಿತ ಮಾನವೀಯ ಮೌಲ್ಯಗಳ ಸಂದೇಶಗಳನ್ನು ಸಮಾಜಕ್ಕೆ ನೀಡಿದ ಹರಿದಾಸರ ವಚನ, ಚಿಂತನೆಗಳು ಯುವಕರಿಗೆ ಸ್ಪೂರ್ತಿಯಾಗಲಿ. ಯುವ ಜನರಿಗೆ ಸ್ಪೂರ್ತಿಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲಿ ಎಂದು ಕಿವಿಮಾತು ಹೇಳಿದರು.
ದಾಸ ಸಾಹಿತ್ಯದಲ್ಲಿ ತಾಳ್ಮೆ, ಸಂಯಮ, ಆನಂದ, ಪ್ರೀತಿ, ಮೂಢನಂಬಿಕೆ ಸೇರಿದಂತೆ ಅನೇಕ ಆದರ್ಶಮಯ ವಿಚಾರಗಳ ಸಮ್ಮಿಲನವಿದೆ. ಮಾನವನ ಕಲ್ಯಾಣಕ್ಕಾಗಿಯೇ ರಚನೆಗೊಂಡಿರುವ ವಚನಗಳು ಬದುಕಿನ ಕಲೆಯನ್ನು ರೂಪಿಸುತ್ತವೆ. ಶುದ್ಧವಾದ ಮನಸ್ಸು, ಆತ್ಮ ವಿಶ್ವಾಸ, ನಡೆ, ಮನಸ್ಸು, ಭಾವಗಳು, ಧಾರ್ಮಿಕ ಭಾವನೆಗಳ ಚಿಲುಮೆಗಳು. ಈ ಚಿಂತನೆಗಳು ಬದುಕಿಗೆ ಸ್ಪೂರ್ತಿಯಾಗಿದ್ದು, ಉತ್ತಮ ಜೀವನ ಸಾಗಿಸಲು ದಾರಿದೀಪವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಆರ್.ವಾದಿರಾಜ ಅವರ ತಾಳುಕೆಗಿಂತ ತಪವು ಇಲ್ಲ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ವಿಷ್ಣುನಾರಾಯಣ ಭಟ್, ರಘುರಾಮ್, ವಾದಿರಾಜ, ಡಾ. ತುಕಾರಾಮ, ಎಂ. ತಿಮ್ಮಯ್ಯ ಸೇರಿದಂತೆ ಮತ್ತಿತರರಿದ್ದರು.
.jpg)







