ಕಟ್ಟಡ ನಿರ್ಮಾಣದಲ್ಲಿ ಲೋಪ ಎಸಗಿದ ಬಿಲ್ಡರ್, ಇಂಜಿನಿಯರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಪಿ.ಬಿ.ಡೇಸಾ ಆಗ್ರಹ
ಮಂಗಳೂರು, ಜೂ. 30: ನಗರದ ವೆಲೆನ್ಸಿಯಾದಲ್ಲಿ ನಿರ್ಮಾಣವಾಗಿರುವ ಪೌವುಲಿನ್ ಮಂಗಳೂರು-2 ಕಟ್ಟಡ ನಿರ್ಮಾಣದಲ್ಲಿ ಬಿಲ್ಡ್‌ರ್ ಮತ್ತು ಇಂಜಿನಿಯರ್‌ನಿಂದ ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಅಲ್ಲದೆ ಎನ್‌ಬಿಸಿ ಮತ್ತು ರೇರಾ ನಿಯಮಗಳನ್ನು ಪಾಲಿಸಿಲ್ಲ ಎಂದು ಕಟ್ಟಡದ ಮಾಲಕ ಮತ್ತು ಪಿಯುಸಿಎಲ್‌ನ ರಾಷ್ಟ್ರೀಯ ಮಂಡಳಿಯ ನಿಕಟ ಪೂರ್ವ ಉಪಾಧ್ಯಕ್ಷ ಪಿ.ಬಿ.ಡೇಸಾ ಆರೋಪಿಸಿದ್ದಾರೆ ಮತ್ತು ನಿಯಮ ಉಲ್ಲಂಘಿಸಿರುವ ಇಬ್ಬರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸಂಬಂಧಪಟ್ಟವರಿಗೆ ಲಿಖಿತ ದೂರು ನೀಡಿ ಆಗ್ರಹಿಸಿದ್ದಾರೆ.
‘‘ನಾನು ಸದ್ರಿ ಕಟ್ಟಡ ನಿರ್ಮಾಣ ಸ್ಥಳದ ಮಾಲಕನಾಗಿದ್ದು ,ಕಟ್ಟಡ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆದುಕೊಂಡಿದ್ದೇನೆ. ಆದರೆ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದ ಬಿಲ್ಡರ್ ಮತ್ತು ಅದರ ಇಂಜಿನಿಯರ್‌ಗಳು ಕರಾರಿನ ಪ್ರಕಾರ ಕಟ್ಟಡವನ್ನು ನಿರ್ಮಿಸಿಲ್ಲ. ಆದರೂ ಮಹಾನಗರ ಪಾಲಿಕೆಯ ವತಿಯಿಂದ ಕಟ್ಟಡ ಪೂರ್ಣಗೊಂಡಿರುವ ಪ್ರಮಾಣಪತ್ರ ನೀಡಲಾಗಿದೆ. ನಗರ ಯೋಜನಾಧಿಕಾರಿಯೂ ಕಟ್ಟಡ ಪೂರ್ಣಗೊಂಡಿರುವ ಪ್ರಮಾಣ ಪತ್ರ ನೀಡಿರುತ್ತಾರೆ. ಶಾಪ್ ನಂಬ್ರ 2ರಲ್ಲಿ ಕಟ್ಟಡಕ್ಕೆ ಟಾಯಿಲೆಟ್ ನಿರ್ಮಿಸಿಲ್ಲ ಮತ್ತು ನೀರಿನ ಸಂಪರ್ಕ ಒದಗಿಸಿಲ್ಲ. ಹಿರಿಯ ನಾಗರಿಕರಿಗೆ ಸಾಗಲು ಅನುಕೂಲವಾಗುವಂತೆ ಸ್ಲಾಬ್ ನಿರ್ಮಿಸಲು ಸೂಚಿಸಲಾಗಿತ್ತು ಆದರೆ ಬಿಲ್ಡರ್ ಅದನ್ನು ನಿರ್ಮಿಸದೆ ಇರುವುದರಿಂದ ಹಿರಿಯ ನಾಗರಿಕನಾದ ನನಗೆ ಆ ರ್ಯಾಂಪನ್ನು ಏರಲು ಸಾಧ್ಯವಾಗುತ್ತಿಲ್ಲ. ಕಟ್ಟಡ ನಿರ್ಮಾಣದ ಎಲ್ಲಾ ನಿಯಮಗಳನ್ನು ಪಾಲಿಸದೆ ಇದ್ದರೂ, ಕರಾರಿನಲ್ಲಿ ಸಮೂದಿಸಲಾದ ಸೌಲಭ್ಯಗಳನ್ನು ಒದಗಿಸದೆ ಇದ್ದರೂ ಕಟ್ಟಡ ಪೂರ್ಣಗೊಂಡಿದೆ ಎಂದು ಪ್ರಮಾಣ ಪತ್ರ ನೀಡುವುದು ಕಾನೂನು ಬಾಹಿರ, ಈ ಬಗ್ಗೆ ಸ್ಥಳೀಯ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗೆ ದೂರು ನೀಡಿದರೂ ಯಾವೂದೇ ಪ್ರಯೋಜನ ಆಗಿಲ್ಲ ಎಂದು ಪಿ.ಬಿ.ಡೇಸಾ ಆರೋಪಿಸಿದ್ದಾರೆ.
ಇದಲ್ಲದೆ ಬಿಲ್ಡರ್ ವಾಣಿಜ್ಯ ಉದ್ದೇಶಕ್ಕಾಗಿ ಗೃಹ ಬಳಕೆಯ ವಿದ್ಯುತ್ತನ್ನು ಕಾನೂನು ಬಾಹಿರವಾಗಿ ಬಳಕೆ ಮಾಡಿದ್ದಾರೆ ಎಂದು ವಿದ್ಯುತ್ಚಕ್ತಿ ಇಲಾಖೆಗೆ ಹಾಗೂ ಅಗ್ನಿ ಶಾಮಕ ವ್ಯವಸ್ಥೆಯ ನಿಯಮಗಳನ್ನು ಪಾಲಿಸದೆ ತುರ್ತು ಸಂದರ್ಭದಲ್ಲಿ ಕಟ್ಟಡದ ನಿವಾಸಿಗಳಿಗೆ ಸಂರಕ್ಷಣೆಗ ಪೂರಕವಾದ ವ್ಯವಸ್ಥೆಗಳನ್ನು ಅಳವಡಿಸಡಲಾಗಿಲ್ಲಾ ಎಂದು ಅಗ್ನಿ ಶಾಮಕ ಇಲಾಖೆಗೆ ಪಿ.ಬಿ.ಡೇಸಾ ದೂರು ನೀಡಿದ್ದಾರೆ. ತನಗೆ ಬಿಲ್ಡ್‌ರ್‌ನಿಂದ ಮೋಸ ಆಗಿದೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪಾಂಡೇಶ್ವರ ಪೊಲೀಸರಿಗೂ ಹಿರಿಯ ನಾಗರಿಕರಾದ ಪಿ.ಬಿ.ಡೇಸಾ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
‘‘ರಿಯಲ್ ಎಸ್ಟೇಟ್ ವಿಷಯಕ್ಕೆ ಸಂಬಂದಿಸಿದಂತೆ ಸಾರ್ವಜನಿಕರಿಗೆ ಸಾಕಷ್ಟು ಮಾಹಿತಿಯ ಕೊರತೆ ಇರುವುದರಿಂದ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ,ಪ್ಲಾಟ್ ಖರೀದಿಯ ಸಂದರ್ಭದಲ್ಲಿ ಮೋಸ ಹೋಗುವ ಸಂದರ್ಭಗಳಿಗೆ ಇತ್ತೀಚೆಗೆ ಮುಂಬೈಯ ಮಹಿಳೆಯೊಬ್ಬರು ತಾವು ಖರೀದಿಸಿದ ಪ್ಲಾಟ್‌ನಲ್ಲಿ ಕಾರ್ಪೆಟ್ ಏರಿಯಾ ಎಂದು ನಮೂದಿಸಲಾದ ಸ್ಥಳಕ್ಕಿಂತ ಕಡಿಮೆ ಸ್ಥಳ ಇತ್ತು. ಕಾರ್ಪೆಟ್ ಏರಿಯಾ ಎಂದು ಕಟ್ಟಡದ ನಿವಾಸಿ ವಾಸ ಮಾಡುವ ಸ್ಥಳದ ಅಲ್ಲದೆ ಹೊರಗಿನ ಸ್ಥಳವನ್ನು ಸೇರಿಸಿ ಗ್ರಾಹಕರಿಂದ ಹಣ ವಸೂಲು ಮಾಡಿರುವ ಹಗರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಬಿಲ್ಡರ್‌ಗಳಿಗೆ ಭೂಮಿ ನೀಡುವ ಮಾಲಕರ ಮೂಲಕರು ಜಿಎಸ್‌ಟಿ ಪಾವತಿಸಬೇಕು ಎಂದು ಕೆಲವು ಬಿಲ್ಡರ್‌ಗಳು ಹಣ ವಸೂಲಾತಿ ಮಾಡುತ್ತಿದ್ದಾರೆ. ರೇರಾ ನಿಯಮಗಳನ್ನು ಹಾಗೂ ನ್ಯಾಯಾಲಯದ ಆದೇಶಗಳನ್ನು ಮೀರಿ ಕಟ್ಟಡ ನಿರ್ಮಿಸುತ್ತಿರುವ ಬಿಲ್ಡರ್‌ಗಳ ವಿರುದ್ಧ ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿದೆ’’ ಇಂತಹ ಹಲವು ಸಮಸ್ಯೆಗಳ ಬಗ್ಗೆ ಹೋರಾಟ ಮುಂದುವರಿಸುವುದಾಗಿ ಪಿ.ಬಿ.ಡೇಸಾ ತಿಳಿಸಿದ್ದಾರೆ.







