ಮೊದಲ ದಿನವೇ 2 ಗಂಟೆ ವಿಳಂಬವಾದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು

ಬೆಳಗಾವಿ, ಜೂ. 30: ಬೆಂಗಳೂರಿನಿಂದ ಬೆಳಗಾವಿಗೆ ಸಂಚಾರ ಆರಂಭಿಸಿರುವ ನೂತನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮೊದಲ ದಿನವೇ 2 ಗಂಟೆ ವಿಳಂಬವಾಗಿ ಬೆಳಗಾವಿ ತಲುಪಿದೆ.
ಶನಿವಾರ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಬೆಳಗಾವಿಗೆ ಹೊರಡುವ ಈ ಸೂಪರ್‌ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು. ಶನಿವಾರ ರಾತ್ರಿ 9 ಗಂಟೆಗೆ ಹೊರಟ ರೈಲು, ಹುಬ್ಬಳ್ಳಿಗೆ ಭಾನುವಾರ ಬೆಳಗ್ಗೆ 4 ಗಂಟೆಗೆ ತಲುಪಿದೆ. ಬೆಳಗಾವಿ ಮಾರ್ಗದಲ್ಲಿ ಕಳೆದೆರೆಡು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಕಾರಣ ರೈಲು ನಿಧಾನವಾಗಿ ಸಂಚರಿಸಿ 2 ಗಂಟೆ ತಡವಾಗಿ ಬೆಳಗಾವಿಗೆ ತಲುಪಿದೆ. ನಿಗದಿತ ಸಮಯದಂತೆ ಬೆಳಿಗ್ಗೆ 7 ಗಂಟಗೆ ತಲುಪಬೇಕಾಗಿದ್ದ ಈ ರೈಲು, 9 ಗಂಟೆಗೆ ತಲುಪಿದೆ.
ಬೆಳಗಾವಿಯಿಂದ ರಾತ್ರಿ 9 ಗಂಟೆಗೆ ಹೊರಡುವ ಈ ರೈಲು ಮರುದಿನ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ಬೆಳಗಾವಿಯಿಂದ ಧಾರವಾಡಕ್ಕೆ 11.10, ಹುಬ್ಬಳ್ಳಿಗೆ 11.45, ದಾವಣಗೆರೆಗೆ 1.58, ಅರಸೀಕೆರೆಗೆ 4.10, ತುಮಕೂರಿಗೆ 5.33 ಮತ್ತು ಯಶವಂತಪುರಕ್ಕೆ ಬೆಳಿಗ್ಗೆ 6.33ಕ್ಕೆ ಬರಲಿದೆ. ಈ ನೂತನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಬೆಳವಡಿ ಮಲ್ಲಮ್ಮ ಅಥವಾ ರೇಣುಕ ಯಲ್ಲಮ್ಮ ಎಂದು ಹೆಸರಿಡಬೇಕೆಂದು ಹಲವರು ಸೂಚಿಸಿದ್ದಾರೆ. ರಾಜ್ಯ ಸರಕಾರ ಕಳುಹಿಸಿಕೊಡುವ ಹೆಸರನ್ನು ಅಂತಿಮಗೊಳಿಸುವುದಾಗಿ ಕೇಂದ್ರ ಸರಕಾರ ತಿಳಿಸಿದೆ.







