ಆನೆಗಳ ದಾಳಿಗೆ ಕಬ್ಬಿನ ಬೆಳೆ ನಾಶ: ಸೂಕ್ತ ಕ್ರಮಕ್ಕೆ ಒತ್ತಾಯ

ಮಂಡ್ಯ, ಜೂ.30: ಆನೆಗಳ ಹಿಂಡು ಕಬ್ಬಿನ ಬೆಳೆ ನಾಶ ಮಾಡಿರುವ ಘಟನೆ ಮಲವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಗ್ರಾಮದ ಚಿಕ್ಕ ಉರುಫ್ ರಾಜು ಎಂಬುವರ ಕಬ್ಬನ್ನು ಆನೆಗಳ ಹಿಂಡು ಬಂದು ತಿಂದು ನಾಶಪಡಿಸಿ ಪಂಪ್‍ಸೆಟ್‍ನ ನೀರಿನ ಡ್ರಿಫ್ ಪೈಪ್‍ಗಳನ್ನು ಹಾಳು ಮಾಡಿದೆ.
ಆನೆ, ಹಂದಿಗಳ ಹಿಂಡು ಕಬ್ಬು, ಬಾಳೆ, ಮಾವು, ಟೊಮ್ಯಾಟೋ ಮುಂತಾದ ಬೆಳೆಗಳನ್ನು ಹಾಳು ಮಾಡುತ್ತಿದ್ದರೂ ಅರಣ್ಯ ಇಲಾಖೆ ಕ್ರಮವಹಿಸಿಲ್ಲ ಎಂದು ಕರ್ನಾಟಕ ಪ್ರಾಂತ ರೈತಸಂಘದ ಮುಖಂಡ ಎನ್.ಎಲ್.ಭರತ್‍ರಾಜ್ ಆರೋಪಿಸಿದ್ದಾರೆ.
ಮಂಚನಹಳ್ಳಿ, ಹೆಬ್ಬಣಿ, ನೆಟ್ಕಲ್, ಧನಗೂರು, ವಡ್ಡರ ಕಾಲನಿ, ತಾಳೆಹಳ್ಳ, ಕದಂಬಪುರ, ದಬ್ಬಹಳ್ಳಿ, ಹೊಸಹಳ್ಳಿ ಗ್ರಾಮದವರು ಅರಣ್ಯ ಇಲಾಖಾಧಿಕಾರಿಗಳಿಗೆ ಹತ್ತಾರು ಬಾರಿ ಅಲ್ಲದೆ ಬೆಂಗಳೂರಿನ ಅರಣ್ಯ ಭವನದಲ್ಲಿ ಕಾರ್ಯದರ್ಶಿ ಅವರಿಗೂ ದೂರು ನೀಡಿದ್ದರೂ ಆನೆ, ಹಂದಿ ದಾಳಿಗಳನ್ನು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಬೇಕಾಬಿಟ್ಟಿ ಕೆಲಸ ಮಾಡುತ್ತಾ ಇಲಾಖೆಗೆ ಬಂದ ಅನುದಾನವನ್ನು ಖರ್ಚುಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ನಷ್ಟಕ್ಕೆ ಅನಿಗುಣವಾಗಿ ವೈಜ್ಞಾನಿಕ ಪರಿಹಾರವನ್ನು ಸಹ ನೀಡುತ್ತಿಲ್ಲ. ಸೋಲಾರ್ ಬೇಲಿ, ರೈಲ್ವೆ ಕಂಬಿ, ಟ್ರಂಚ್‍ಗಳ ತೆಗೆದಿಲ್ಲ. ಹೀಗೆಯೇ ಮುಂದುವರಿದರೆ ಪ್ರತಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.







