ಕತರ್ನಿಂದ ಪಾಕ್ಗೆ 500 ಮಿ. ಡಾಲರ್ ಹಸ್ತಾಂತರ
ಇಸ್ಲಾಮಾಬಾದ್ಜೂ.30: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಪಾಕಿಸ್ತಾನಕ್ಕೆ ನೆರವಿನ ಹಸ್ತ ಚಾಚಿರುವ ಕತರ್ ತಾನು ನೀಡಿದ್ದ ಭರವಸೆಯಂತೆ 500 ದಶಲಕ್ಷ ಡಾಲರ್ಗಳ ಮೊದಲ ಕಂತಿನ ನೆರವನ್ನು ನೀಡಿದೆ.
ಕತರ್ನಿಂದ 500 ದಶಲಕ್ಷ ಡಾಲರ್ ಹಣವನ್ನು ಸ್ವೀಕರಿಸಿರುವುದಾಗಿ ಸ್ಟೇಟ್ಬ್ಯಾಂಕ್ ಆಫ್ ಪಾಕಿಸ್ತಾನ್ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪಾಕಿಸ್ತಾನವು ತೀವ್ರವಾದ ಹಣಕಾಸು ಬಿಕ್ಕಟ್ಟಿನಿಂದ ಹೊರಬರುವುದಕ್ಕೆ ನೆರವಾಗುವ ಉದ್ದೇಶದಿಂದ ಆ ದೇಶದಲ್ಲಿ 3 ಶತಕೋಟಿ ಡಾಲರ್ಗಳ ಹೂಡಿಕೆ ಮಾಡಲು ತಾನು ನಿರ್ಧರಿಸಿರುವುದಾಗಿ ಕತರ್ ಜೂನ್ 24ರಂದು ಘೋಷಿಸಿತ್ತು.
Next Story