ದ.ಕ.ಜಿಲ್ಲಾ ಸಮಸ್ತಾಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ

ಮೊಹಿದಿನಬ್ಬ
ಮಂಗಳೂರು: ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಮತ್ತು ಜಿಲ್ಲಾ ಜಂ-ಇಯ್ಯತುಲ್ ಮುಅಲ್ಲಿಮೀನ್ ನೇತೃತ್ವದಲ್ಲಿ ನಗರದ ಕೇಂದ್ರ ಜುಮಾ ಮಸೀದಿಯ ಸಮೀಪ ನಿರ್ಮಾಣಗೊಂಡಿರುವ ಜಿಲ್ಲೆಯ ಸಮಸ್ತದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ‘ಮರ್ಹೂಮ್ ಶೈಖುನಾ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ ಸ್ಮಾರಕ ಸಮಸ್ತಾಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ಸೋಮವಾರ ಐ.ಮೊಹಿದಿನಬ್ಬ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ವಾಗತ ಸಮಿತಿಯ ಗೌರವ ಸಲಹೆಗಾರರಾರಾಗಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಲಹೆಗಾರರಾಗಿ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಅಬ್ದುಲ್ ರಹ್ಮಾನ್ ಹಾಜಿ ಕೊಳ್ಳೆಜಾಲ್ ಆಯ್ಕೆಯಾದರು.
ಅಧ್ಯಕ್ಷರಾಗಿ ಐ.ಮೊಹಿದಿನಬ್ಬ ಹಾಜಿ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಕಡಬ, ಪ್ರಧಾನ ಸಂಚಾಲಕರಾಗಿ ಉಮರ್ ದಾರಿಮಿ ಪಟ್ಟೋರಿ, ವರ್ಕಿಂಗ್ ಕನ್ವೀನರ್ ಆಗಿ ರಫೀಕ್ ಹಾಜಿ ಕೊಡಾಜೆ, ಕೋಶಾಧಿಕಾರಿಯಾಗಿ ಮೆಟ್ರೋ ಶಾಹುಲ್ ಹಮೀದ್ ಹಾಜಿ, ಮಾಧ್ಯಮ ಕಾರ್ಯದರ್ಶಿಯಾಗಿ ಇಬ್ರಾಹೀಂ ಕೊಣಾಜೆ, ಕಚೇರಿ ಕಾರ್ಯದರ್ಶಿಯಾಗಿ ರಿಯಾಝ್ ಹಾಜಿ ಬಂದರ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಪಿ.ಎಂ. ಶರೀಫ್ ಫೈಝಿ ಪನ್ಯ ,ಕಾಸಿಮ್ ದಾರಿಮಿ ಸವಣೂರ್, ಸ್ವದಕತುಲ್ಲಾ ಫೈಝಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಉಮರ್ ದಾರಿಮಿ ಸಾಲ್ಮರ, ರಶೀದ್ ಹಾಜಿ ಪರ್ಲಡ್ಕ, ಶರೀಫ್ ಮೂಸಾ ಕುದ್ದುಪದವು, ಬಿ.ಎ.ಹಮೀದ್ ಕರಾವಳಿ, ಹಕೀಮ್ ಪರ್ತಿಪ್ಪಾಡಿ, ನೌಶಾದ್ ಹಾಜಿ ಸೂರಲ್ಪಾಡಿ, ಮುಹಮ್ಮದ್ ಶಾಫಿ ಮೂಡುಬಿದಿರೆ, ಯೂಸುಫ್ ಬದ್ರಿಯಾ ಕೊಲ್ತಮಜಲ್, ಅಬ್ದುಲ್ ರಝಾಕ್ ಹೇಂತಾರ್, ಮೊಯಿದೀನ್ ನಿಟ್ಟೆ ಉಡುಪಿ, ಹೈದರ್ ಮಂಗಳೂರು, ಮೊಹಿದಿನಬ್ಬ ಗುಂಡುಕಲ್ಲು, ಎಂ.ಎಸ್. ಹಮೀದ್ ವಿಟ್ಲ, ಅಬ್ದುಲ್ ರಝಾಕ್ ಕರಾಜೆ, ಬಶೀರ್ ನಂದಾವರ, ಫಝಲ್ ತಂಙಳ್ ಮಿತ್ತಬೈಲ್, ಬಶೀರ್ ದಾರಿಮಿ, ಸಂಶುದ್ದೀನ್ ದಾರಿಮಿ ಕುಂಬ್ರ, ಮುಹಮ್ಮದ್ ಫೈಝಿ ಉಡುಪಿ, ಅಬ್ದುರ್ರವೂಫ್ ಮುಸ್ಲಿಯಾರ್ ವಿಟ್ಲ, ಅಬ್ದುಲ್ ರಝಾಕ್ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್ ಸುಳ್ಯ, ಸಿದ್ದೀಕ್ ಫೈಝಿ ಆತೂರ್ ಅವರನ್ನು ಆಯ್ಕೆ ಮಾಡಲಾಯಿತು.
ಸಮಸ್ತಾಲಯ ಕಟ್ಟಡವನ್ನು ನ. 3ರಂದು ಬೆಳಗ್ಗೆ 10ಕ್ಕೆ ತ್ವಾಖಾ ಉಸ್ತಾದ್ರ ಅಧ್ಯಕ್ಷತೆಯಲ್ಲಿ ಪಾಣಕ್ಕಾಡ್ ತಂಙಳ್, ಶೈಖುನಾ ಆಲಿಕುಟ್ಟಿ ಉಸ್ತಾದ್, ಶೈಖುನಾ ಎಂ.ಟಿ.ಉಸ್ತಾದ್, ಶೈಖುನಾ ಕಾಸಿಮ್ ಉಸ್ತಾದ್ ತಾಯಲಂಗಡಿ, ಶೈಖುನಾ ಪೂಕಟೂರ್ ಉಸ್ತಾದ್ ಮತ್ತಿತರ ಸಮಸ್ತದ ಮುಂಚೂಣಿ ನಾಯಕರ ಉಪಸ್ಥಿತಿಯಲ್ಲಿ ಶೈಖುನಾ ಜಿಫ್ರಿ ತಂಙಳ್ ಅವರಿಂದ ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







