ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ; ಆರೋಪಿ ಪರಾರಿ
ಮಂಗಳೂರು, ಜು.2: ನಗರದ ಕಣ್ಣೂರಿನ ಮನೆಯೊಂದರ ಹಿಂಭಾಗ ಕಾರ್ಯಾಚರಣೆ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಣ್ಣೂರು ನಿವಾಸಿ ಬದ್ರು (40) ಪರಾರಿಯಾದ ಆರೋಪಿ.
ಕಣ್ಣೂರು ಮನೆಯೊಂದರ ಸಮೀಪ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಸಿಸಿಬಿಯವರ ಮಾಹಿತಿ ಮೇರೆಗೆ ಕಂಕನಾಡಿ ನಗರ ಪೊಲೀಸರು ಕಂಕನಾಡಿ ನಗರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಈ ವೇಳೆ ಮೂರು ಜಾನುವಾರುಗಳ ಚರ್ಮ, ದನದ ಮಾಂಸ ಮತ್ತು ತ್ಯಾಜ್ಯ ವಸ್ತು, ಇತರ ಪರಿಕರಗಳನ್ನು ಪಂಚರ ಸಮಕ್ಷಮ ಮಹಜರು ನಡೆಸಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





