ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಅಧ್ಯಕ್ಷರಾಗಿ ಕೆ.ಎಮ್ ಅಶ್ರಫ್ ಆಯ್ಕೆ

ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರದ ಅಧ್ಯಕ್ಷರಾಗಿ ಕೆ.ಎಂ.ಅಶ್ರಫ್ ರವರು 2019-2021 ರ ಅವಧಿಗೆ ಆಯ್ಕೆಯಾಗಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಾದತುಲ್ಲ ಹುಸೈನಿಯವರು ಮುಂಬರುವ ಅವಧಿಗೆ ಕೆ.ಎಂ ಅಶ್ರಫ್ ರವರನ್ನು ನೇಮಕ ಮಾಡಿದ್ದಾರೆ.
ಕೆ.ಎಮ್. ಅಶ್ರಫ್ ರವರು ಕಳೆದ ಅವಧಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಮಾಅತ್ ನ ಸೇವಾ ವಿಭಾಗ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ ಇದರ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಳ್ಳಾಲ ಶಾಖೆಯ ಅಧ್ಯಕ್ಷರಾಗಿ ಅಬ್ದುಲ್ ಕರೀಮ್ ಉಳ್ಳಾಲ, ಬಿ.ಸಿ. ರೋಡ್ ಶಾಖೆಯ ಅಧ್ಯಕ್ಷರಾಗಿ ಅಮಾನುಲ್ಲಾ ಖಾನ್ ತರಿಕೇರೆ, ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾಗಿ ಮುಖ್ತಾರ್ ಅಹ್ಮದ್, ಕಲ್ಲಡ್ಕ ಶಾಖೆಯ ಅಧ್ಯಕ್ಷರಾಗಿ ಇಮಾರಾತ್ ಅಲಿ, ಉಪ್ಪಿನಂಗಡಿ ಶಾಖೆಯ ಅಧ್ಯಕ್ಷರಾಗಿ ಅಬ್ದುಲ್ ಹಸೀಬ್, ವಿಟ್ಲ ಶಾಖೆಯ ಅಧ್ಯಕ್ಷರಾಗಿ ಹೈದರ್ ವಿಟ್ಲ ರವರನ್ನು ರಾಷ್ಟ್ರೀಯ ಅದ್ಯಕ್ಷರು ನೇಮಕ ಮಾಡಿದ್ದಾರೆ.
Next Story





