ವಿಟ್ಲದಲ್ಲಿ ಬಸ್ ಗಳಿಗೆ ಕಲ್ಲೆಸೆದ ಪ್ರಕರಣ: ಮತ್ತೆ ಇಬ್ಬರು ಸೆರೆ

ಬಂಟ್ವಾಳ, ಜು. 2: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್‍ಗಳಿಗೆ ಕಲ್ಲೆಸೆದ ಹಾಗೂ ಶಾಂತಿಭಂಗಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಠಾಣೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಡ್ಯನಡ್ಕ ನಿವಾಸಿ ಜಯೇಶ್ (27) ಹಾಗೂ ಅಳಿಕೆ ಗ್ರಾಮದ ನೆಕ್ಕಿತ್ತಪುಣಿ ನಿವಾಸಿ ಮಂಜುನಾಥ (27) ಬಂಧಿತ ಆರೋಪಿಗಳು.
ಜೂ. 25ರ ಮುಂಜಾನೆ ಪುತ್ತೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆಯ ಬಸ್‍ಗೆ ಕೇಪು ಸಮೀಪದ ಮೈರ ಎಂಬಲ್ಲಿ ಕಲ್ಲೆಸೆಯಲಾಗಿತ್ತು. ಈ ಸಂಬಂಧ ಬಸ್ ಚಾಲಕ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇದೀಗ ಬಂಧಿತರ ಸಂಖ್ಯೆ 5ಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





