ಬಿಡ್ಲುಎಸ್‌ಎಸ್‌ಬಿ: ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಪಟ್ಟಿ ಪ್ರಕಟ
ಬೆಂಗಳೂರು, ಜು.2: ಬೆಂಗಳೂರು ಜಲ ಮಂಡಳಿಯ ಬ್ಯಾಕ್‌ಲಾಗ್ ನೇಮಕಾತಿಗೆ ಸಂಬಂಧಿಸಿದಂತೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ವೃಂದವಾರು ಮೂಲ ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಿ ಪಟ್ಟಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಬಿಡ್ಲುಎಸ್‌ಎಸ್‌ಬಿ ನೇಮಕಾತಿ ಅಧಿಸೂಚನೆ ಅನ್ವಯ ವಿವಿಧ ವೃಂದದ ಬ್ಯಾಕ್‌ಲಾಗ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳನ್ನು 1:5ಅನುಪಾತದಲ್ಲಿ ಪಟ್ಟಿಯನ್ನು ಸಿದ್ಧಪಡಿಸಿ. ಅಂತಹ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಿದ್ದ ಜೂ.21ರ ಪ್ರಕಟನೆಯನ್ನು ತಾಂತ್ರಿಕ ಕಾರಣಗಳಿಂದ ಹಿಂಪಡೆದು ಪರಿಷ್ಕೃತ ಅಭ್ಯರ್ಥಿಗಳ ಪಟ್ಟಿಯನ್ನು ಮಂಡಳಿಯು ಪ್ರಕಟಿಸಿದೆ.
ಪರಿಷ್ಕೃತ ಅಭ್ಯರ್ಥಿಗಳ ಪಟ್ಟಿಯ ವೃಂದವಾರು ದಾಖಲೆ ಪರಿಶೀಲನೆಯನ್ನು ಜು.15ರಿಂದ ಜು.15ರವರೆಗೆ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ತಮಗೆ ನಿಗದಿ ಪಡಿಸಿರುವ ದಿನದಂದು ಪೂರಕ ದಾಖಲೆಗಳೊಂದಿಗೆ ಹಾಜರಾಗಲು ಕೋರಿದೆ. ದಾಖಲೆ ಪರಿಶೀಲನೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ, ದಿನಾಂಕ, ಸಮಯ, ಸ್ಥಳ ಮತ್ತಿತರ ಮಾಹಿತಿಗೆ ಮಂಡಳಿಯ ವೆಬ್‌ಸೈಟ್ www.bwssb.gov.in ನಲ್ಲಿ ಸಂರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.





