ಹಣ ಪಣಕ್ಕಿಟ್ಟು ಜೂಜಾಡುತ್ತಿದ್ದ ಯುವಕನ ಬಂಧನ: 71 ಸಾವಿರ ನಗದು, ಮೊಬೈಲ್ ಜಪ್ತಿ

ಬೆಂಗಳೂರು, ಜು.2: ಹಣ ಪಣವಾಗಿ ಕಟ್ಟಿಕೊಂಡು ಮಟ್ಕಾ ಹೆಸರಿನ ಜೂಜಾಟ ಆಡುತ್ತಿದ್ದ ಆರೋಪದಡಿ ಯುವಕನೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ, 71 ಸಾವಿರ ನಗದು, ಮೊಬೈಲ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಆರ್‌ಪುರಂನ ವಾರಣಾಸಿ ಮುಖ್ಯರಸ್ತೆಯ ನಿವಾಸಿ ಕಿರಣ್(23) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವಾರಣಾಸಿ ಮುಖ್ಯ ರಸ್ತೆಯ ಮಹಡಿಯೊಂದರಲ್ಲಿ ವ್ಯಕ್ತಿಯೋರ್ವ ಸಾರ್ವಜನಿಕರಿಂದ ಹಣ ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ಹೆಸರಿನ ಜೂಜಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೆಆರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
Next Story





