ಜೆಸಿಐ ಸುರತ್ಕಲ್: 'ಹ್ಯಾಪಿ ಪೇರೆಂಟಿಂಗ್' ಕಾರ್ಯಾಗಾರ

ಮಂಗಳೂರು: ಜೆಸಿಐ ಸುರತ್ಕಲ್‍ನ ಜೆಸಿರೇಟ್ ವಿಭಾಗದಿಂದ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಸಹಕಾರದೊಂದಿಗೆ ಚೇಳ್ಯಾರು ಸರಕಾರಿ ಕಾಲೇಜಿನಲ್ಲಿ 'ಹ್ಯಾಪಿ ಪೇರೆಂಟಿಂಗ್' ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ. ಇದರ ಸುರತ್ಕಲ್ ಶಾಖೆಯ ಪ್ರಬಂಧಕ ಪ್ರಕಾಶ್ ಚಂದ್ರ ರೈ ಉದ್ಘಾಟಿಸಿ, ಮಾತಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ತೆರೆಸಾ ವೇಗಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ್ ಆಚಾರ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಜೆಸಿಐ ಅಧ್ಯಕ್ಷ ಲೋಕೇಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜೆಸಿಐ ಉಪಾಧ್ಯಕ್ಷೆ ಜ್ಯೋತಿ ಜೆ ಶೆಟ್ಟಿ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ಜೆಸಿಐ ವಲಯ ತರಬೇತುದಾರೆ ರಾಜೇಶ್ವರಿ ಡಿ ಶೆಟ್ಟಿ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಜೆಸಿರೇಟ್ ಅಧ್ಯಕ್ಷೆ ಅನಿತಾ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ, ಪೂರ್ವಾಧ್ಯಕ್ಷ ಪುಷ್ಫರಾಜ್ ಶೆಟ್ಟಿ ವಂದಿಸಿದರು.














