ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ: ಬೇಕರಿ ಭಸ್ಮ

ಮಂಡ್ಯ, ಜು.2: ಮದ್ದೂರಿನ ಸಾರಿಗೆ ಬಸ್ ನಿಲ್ದಾಣ ಸಮೀಪದ ಇರುವ ಶ್ರೀ ರಾಘವೇಂದ್ರ ಬೇಕರಿಗೆ ಮಂಗಳವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಬೇಕರಿ ಪರಿಕರಗಳು, ಸಿಹಿ ತಿನಿಸು ಹಾಗೂ ಇನ್ನಿತರರ ವಸ್ತುಗಳು ಆಹುತಿಯಾಗಿದೆ.
ಬೇಕರಿಯು ಚಾಪುರದೊಡ್ಡಿ ಗ್ರಾಮದ ನಾಗರಾಜು ಎಂಬುವರಿಗೆ ಸೇರಿದ್ದು, ಬೆಂಕಿ ಕಂಡ ತಕ್ಷಣ ಸ್ಥಳಿಯರು ಅಗ್ನಿಶಾಮಕದಳದವರಿಗೆ ತಿಳಿಸಿದ್ದಾರೆ. ಆದರೆ, ಅಗ್ನಿ ಶಾಮಕದಳದವರು ಬಂದರೂ ಯಾವುದೇ ಪ್ರಯೋಜವಾಗಿಲ್ಲ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





