ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ಭಾರತ
ಬಾಂಗ್ಲಾ ವಿರುದ್ಧ 28 ರನ್‌ಗಳ ಜಯ

ಬರ್ಮಿಂಗ್‌ಹ್ಯಾಮ್, ಜು.2: ವಿಶ್ವಕಪ್‌ನ 40ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 28ರನ್‌ಗಳ ಜಯ ಗಳಿಸಿರುವ ಭಾರತ ಸೆಮಿಫೈನಲ್‌ನಲ್ಲಿ ದೃಢಪಡಿಸಿದೆ.
ಭಾರತ 8 ಪಂದ್ಯಗಳಲ್ಲಿ 6ನೇ ಗೆಲುವಿನೊಂದಿಗೆ 13 ಅಂಕಗಳನ್ನು ಜಮೆ ಮಾಡಿ ಉಪಾಂತ್ಯಕ್ಕೆ ಲಗ್ಗೆ ಇಟ್ಟಿದೆ.
ಗೆಲುವಿಗೆ 315 ರನ್‌ಗಳ ಸವಾಲನ್ನು ಪಡೆದ ಬಾಂಗ್ಲಾದೇಶ 48 ಓವರ್‌ಗಳಲ್ಲಿ 286 ರನ್‌ಗಳಿಗೆ ಆಲೌಟಾಗಿ. ಸೆಮಿಫೈನಲ್‌ಗೇರುವ ಅವಕಾಶ ಕಳೆದುಕೊಂಡಿತು. ಬಾಂಗ್ಲಾ ತಂಡದ ಪರ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ (66) ಮತ್ತು ಮುಹಮ್ಮದ್ ಸೈಫುದ್ದೀನ್(ಔಟಾಗದೆ 51)ಗಳಿಸಿ ಹೋರಾಟ ನಡೆಸಿದರೂ ಅವರ ಹೋರಾಟ ಫಲ ನೀಡಲಿಲ್ಲ. ಭಾರತದ ಬೌಲರ್‌ಗಳಾದ ಹಾರ್ದಿಕ್ ಪಾಂಡ್ಯ(60ಕ್ಕೆ 3), ಜಸ್‌ಪ್ರೀತ್ ಬುಮ್ರಾ(55ಕ್ಕೆ 4), ಯಜುವೇಂದ್ರ ಚಹಾಲ್(50ಕ್ಕೆ 1), ಮುಹಮ್ಮದ್ ಶಮಿ(68ಕ್ಕೆ 1), ಭುವನೇಶ್ವರ್ ಕುಮಾರ್(51ಕ್ಕೆ 1) ದಾಳಿಗೆ ಸಿಲುಕಿದ ಬಾಂಗ್ಲಾದೇಶ ತಂಡಕ್ಕೆ ಗೆಲುವಿನ ಹಾದಿಯಲ್ಲಿ ಮುಗ್ಗರಿಸಿತು.
ತಮೀಮ್ ಇಕ್ಬಾಲ್(22), ಸೌಮ್ಯ ಸರ್ಕಾರ್(33), ಮುಶ್ಫಿಕುರ್ರಹೀಂ (24), ಲಿಟನ್‌ದಾಸ್(22), ಸಬೀರ್ ರಹ್ಮಾನ್(36) ಮೊಸಾದಿಕ್ ಹುಸೈನ್ ಎರಡಂಕೆಯ ಸ್ಕೋರ್ ದಾಖಲಿಸಿದರು. ರುಬೇಲ್ ಹುಸೈನ್ 9 ರನ್ ಗಳಿಸಿದರು.





