ಉಡುಪಿ: ಸ್ವಚ್ಛ ಭಾರತ ಬೇಸಿಗೆ ಸ್ವಚ್ಛತಾ ಕಾರ್ಯಕ್ರಮ
ಉಡುಪಿ, ಜು.3: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವಕೇಂದ್ರ ಉಡುಪಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಭಾರತ ಬೇಸಿಗೆ ಪಾಯೋಜಿತ ಸ್ವಚ್ಛತಾ ಕಾರ್ಯಕ್ರಮವನ್ನು ಯುವಜನರ ಮೂಲಕ ಮಾಡಿಸಲು ನಿರ್ಣಯಿಸಲಾಗಿದೆ.
ಈ ಕಾರ್ಯಕ್ರಮ ಜೂ.10ರಿಂದ ಜು.31ರವರೆಗೆ 50 ಗಂಟೆಗಳ ಕಾಲ ಸ್ವಚ್ಚತೆ ಹಾಗೂ ಪರಿಸರ ಕಾಳಜಿಯಲ್ಲಿ ಮಾಡಿದ ವರದಿಗಳನ್ನು ಪೊಟೊ ಸಹಿತ ನೆಹರು ಯುವ ಕೇಂದ್ರ ಉಡುಪಿ ಇವರಿಗೆ ಪ್ರತಿನಿತ್ಯ ಕಳುಹಿಸಬೇಕಾಗುತ್ತದೆ. ಉಡುಪಿ ನೆಹರು ಯುವ ಕೇಂದ್ರದ ಜೊತೆ ಸಂಯೋಜನೆಗೊಂಡಿರುವ ಯುವ ಮಂಡಳ ಹಾಗೂ ಯುವತಿ ಮಂಡಳಗಳು ಮತ್ತು ಅವುಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳಬಹುದಾಗಿದೆ.
ಭಾಗವಹಿಸುವವರು ಜು.5ರ ಒಳಗೆ ನೆಹರು ಯುವಕೇಂದ್ರ, ಉಡುಪಿ ಇಲ್ಲಿ ಹೆಸರು ನೆಂದಣಿ ಮಾಡಿ ಕೊಳ್ಳಬಹುದು. ಗ್ರಾಮೀಣ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ತರಬೇತಿಗಳನ್ನು ಹಮ್ಮಿಕೊಳ್ಳುವುದು. ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಗೆ ಬಗ್ಗೆ ಮಾಹಿತಿ ನೀಡುವುದು. ಸ್ವಚ್ಛತೆ ಅರಿವು ಮೂಡಿಸುವ ಬೀದಿ ನಾಟಕಗಳನ್ನು ಮಾಡಿಸುವುದು, ಸ್ವಚ್ಛತೆ ಅರಿವು ಮೂಡಿಸುವ ರ್ಯಾಲಿಗಳನ್ನು ಹಮ್ಮಿಕೊಳ್ಳುವುದು, ಸ್ವಚ್ಛತೆ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ನೈರ್ಮಲ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವ ಶೌಚಾಲಯ, ಕೈತೊಳೆಯುವಿಕೆ, ನೈರ್ಮಲ್ಯದ ಅರಿವು ಇತ್ಯಾದಿಗಳನ್ನು ಬಳಸಿಕೊಂಡು ಉತ್ತಮ ನೈರ್ಮಲ್ಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು, ನೈರ್ಮಲ್ಯದ ಬಗ್ಗೆ ಮನೆ ಮನೆಗೆ ತೆರಳಿ ತಿಳುವಳಿಕೆ ಮೂಡಿಸುವುದು.
ಗ್ರಾಮೀಣ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ತರಬೇತಿಗಳನ್ನು ಹಮ್ಮಿಕೊಳ್ಳುವುದು. ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಗೆ ಬಗ್ಗೆ ಮಾಹಿತಿ ನೀಡುವುದು. ಸ್ವಚ್ಛತೆ ಅರಿವು ಮೂಡಿಸುವ ಬೀದಿ ನಾಟಕಗಳನ್ನು ಮಾಡಿಸುವುದು, ಸ್ವಚ್ಛತೆ ಅರಿವು ಮೂಡಿಸುವ ರ್ಯಾಲಿಗಳನ್ನು ಹಮ್ಮಿಕೊಳ್ಳುವುದು, ಸ್ವಚ್ಛತೆ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ನೈರ್ಮಲ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವ ಶೌಚಾಲಯ, ಕೈತೊಳೆಯುವಿಕೆ, ನೈರ್ಮಲ್ಯದ ಅರಿವು ಇತ್ಯಾದಿಗಳನ್ನು ಬಳಸಿಕೊಂಡು ಉತ್ತಮ ನೈರ್ಮಲ್ಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು, ನೈರ್ಮಲ್ಯದ ಬಗ್ಗೆ ಮನೆ ಮನೆಗೆ ತೆರಳಿ ತಿಳುವಳಿಕೆ ಮೂಡಿಸುವುದು. ಘನ ತ್ಯಾಜ್ಯ ನಿರ್ವಹಣೆ ಸಂಬಂಧಿತ ಚಟುವಟಿಕೆಗಳು, ತ್ಯಾಜ್ಯ ಸಂಗ್ರಹಣೆ, ಪ್ರತ್ಯೇಕತೆ, ವಿಲೇವಾರಿ ಮತ್ತು ಮುಕ್ತ ಸ್ವಚ್ಛ ವಾತಾವರಣದ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಹಳ್ಳಿಗಳಲ್ಲಿ ಬಯಲು ಮಲ ವಿಸರ್ಜನೆ ನಿಲ್ಲಿಸಲು ನಿಗಾ ಸಮಿತಿಗಳನ್ನು ರಚಿಸುವುದು, ಶೌಚಾಲಯ ನಿರ್ಮಿಸುವುದು ಅಥವಾ ನಿರ್ಮಿಸುವಲ್ಲಿ ಸಹಾಯ ಮಾಡುವುದು ಸೇರಿದೆ.
ಈ ಎಲ್ಲಾ ಕಾರ್ಯಕ್ರಮಗಳನ್ನು ಜು.31ರವರೆಗೆ 50 ಗಂಟೆಗಳ ಕಾರ್ಯಕ್ರಮ ಮಾಡಿ ಅದಕ್ಕೆ ಸಂಬಂಧ ಪಟ್ಟಂತೆ ಇರುವ ಕಾರ್ಯಕ್ರಮಗಳ ವರದಿಗಳು,ಛಾಯಾಚಿತ್ರಗಳು, ಪೇಪರ್‌ಕಟ್ಟಿಂಗ್, ವೀಡಿಯೋ ಕ್ಲಿಪಿಂಗ್‌ಗಳನ್ನು - ವೆಬ್‌ಸೈಟ್‌ನಲ್ಲಿ https://nyks.nic.in/NewInitiatives/SwachhBharatIntership/SwachhBharatInternship.html ಲಾಗ್‌ಇನ್ ಆಗಿ ಅಲ್ಲಿ ಆಯಾ ದಿನದ ಕಾರ್ಯಕ್ರಮಗಳ ವರದಿಯನ್ನು ಕಳುಹಿಸಬೇಕು.
ಈ ರೀತಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಹಾಗೂ ಉತ್ತಮ ಕೆಲಸ ನಿರ್ವಹಿಸಿದವರಿಗೆ ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮದ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಇದರೊಂದಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ 30,000 ರೂ., ದ್ವಿತೀಯ 20,000 ರೂ. ಹಾಗೂ ತೃತೀಯ 10,000 ರೂ. ನಗದು ಬಹುಮಾನಗಳನ್ನು ನೀಡಲಾಗುವುದು. ರಾಜ್ಯಮಟ್ಟಕ್ಕೆ 50,000 ರೂ. ಪ್ರಥಮ, 30,000 ರೂ. ದ್ವಿತೀಯ, 20,000 ರೂ. ತೃತೀಯ ಬಹುಮಾನ, ರಾಷ್ಟ್ರ ಮಟ್ಟಕ್ಕೆ 2,00,000 ರೂ. ಪ್ರಥಮ, 1,00,000 ರೂ. ದ್ವಿತೀಯ, 50,000 ರೂ. ತೃತೀಯ ಬಹುಮಾನಗಳನ್ನು ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಕೇವಲ 29 ವರ್ಷ ಒಳಗಿನ ಯುವಕ ಮತ್ತು ಯುವತಿಯರು ಭಾಗವಹಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಳಿಗೆ ನೆಹರು ಯುವಕೇಂದ್ರ, ಬಿ ಬ್ಲಾಕ್, ರಜತಾದ್ರಿ, ಮಣಿಪಾಲ ಉಡುಪಿ ದೂರವಾಣಿ ಸಂಖ್ಯೆ: 0820-2574992ನ್ನು ಸಂಪರ್ಕಿಸುವಂತೆ ನೆಹರು ಯುವಕೇಂದ್ರದ ಜಿಲ್ಲಾ ಯುವಜನ ಸಮನ್ವಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







